ಕ್ಯಾನ್ಬ್ಯಾಂಕ್ ಫ್ಯಾಕ್ಟರ್ಸ್ ನೇಮಕಾತಿಯಲ್ಲಿ (Canbank Factors Recruitment 2023) ಖಾಲಿ ಇರುವ 06 ಜೂನಿಯರ್ ಆಫೀಸರ್, ಲೀಗಲ್ ಆಫೀಸರ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್‌ನಲ್ಲಿ ಖಾಲಿ ಇರುವ ಕಿರಿಯ ಅಧಿಕಾರಿ ಹಾಗೂ ಕಾನೂನು ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಫೆಬ್ರವರಿ 2023 ರ ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ಅಧಿಕೃತ ಅಧಿಸೂಚನೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಅರ್ಹ ಅಭ್ಯರ್ಥಿಗಳು ಈ ಖಾಲಿ ಇರುವ ಹುದ್ದೆಗಳಿಗಾಗಿ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಸಂಬಂಧಪಟ್ಟಂತೆ ಬೇಕಾಗುವ ಇತರೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬೇಕಾಗಿದೆ.
ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ನೇಮಕಾತಿಯಲ್ಲಿ ಖಾಲಿ ಹುದ್ದೆಯ ಅಧಿಸೂಚನೆ ಸಂಪೂರ್ಣ ವಿವರ :
ಬ್ಯಾಂಕ್ ಹೆಸರು : ಕ್ಯಾನ್ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್
ಹುದ್ದೆಗಳ ಸಂಖ್ಯೆ : 6 ಹುದ್ದೆಗಳು
ಉದ್ಯೋಗ ಸ್ಥಳ : ಬೆಂಗಳೂರು
ಹುದ್ದೆಯ ಹೆಸರು : ಕಿರಿಯ ಅಧಿಕಾರಿ, ಕಾನೂನು ಅಧಿಕಾರಿ
ವೇತನ : ರೂ.37300-45800/- ಪ್ರತಿ ತಿಂಗಳು
ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿವರ :
ಕಿರಿಯ ಅಧಿಕಾರಿ : 5 ಹುದ್ದೆಗಳು
ಕಾನೂನು ಅಧಿಕಾರಿ : 1 ಹುದ್ದೆ
ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿದ್ಯಾರ್ಹತೆ ವಿವರ :
- ಕಿರಿಯ ಅಧಿಕಾರಿ : ಈ ಹುದ್ದೆಗಾಗಿ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
- ಕಾನೂನು ಅಧಿಕಾರಿ : ಈ ಹುದ್ದೆಗಾಗಿ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಹಾಗೂ ಎಲ್‌ಎಲ್‌ಎಮ್ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಯೋಮಿತಿ ವಿವರ :
- ಕಿರಿಯ ಅಧಿಕಾರಿ : ಈ ಹುದ್ದೆಗಾಗಿ ಅಭ್ಯರ್ಥಿಗಳು ಕನಿಷ್ಠ 21 ವರ್ಷ ವಯಸ್ಸು ಹೊಂದಿರಬೇಕು ಹಾಗೂ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
- ಕಾನೂನು ಅಧಿಕಾರಿ : ಈ ಹುದ್ದೆಗಾಗಿ ಅಭ್ಯರ್ಥಿಗಳು ಕನಿಷ್ಠ 21 ವರ್ಷ ವಯಸ್ಸು ಹೊಂದಿರಬೇಕು ಹಾಗೂ ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು : 03 ವರ್ಷಗಳು
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: 05 ವರ್ಷಗಳು
ಅರ್ಜಿ ಶುಲ್ಕ ವಿವರ :
ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್ ನೇಮಕಾತಿ ಪ್ರಕಾರ, ಹುದ್ದೆಗಾಗಿ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ರೂ.250 ಪಾವತಿಸಬೇಕಾಗುತ್ತದೆ.
ಪಾವತಿ ವಿಧಾನ :
ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್ ನೇಮಕಾತಿ ಪ್ರಕಾರ, ಹುದ್ದೆಗೆ ಅರ್ಜಿ ಅಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ :
ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್ ನೇಮಕಾತಿ ಪ್ರಕಾರ, ಈ ಹುದ್ದೆಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ಸಂಬಳ (ಪ್ರತಿ ತಿಂಗಳಿಗೆ) ವಿವರ :
ಕಿರಿಯ ಅಧಿಕಾರಿ : ರೂ.37300/-
ಕಾನೂನು ಅಧಿಕಾರಿ : ರೂ.45800/-
ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ 17-ಫೆಬ್ರವರಿ-2023 ರ ಮೊದಲು, ಹಿರಿಯ ಕಾರ್ಯನಿರ್ವಾಹಕರು, ಉಪಾಧ್ಯಕ್ಷರು, ಕ್ಯಾನ್‌ಬ್ಯಾಂಕ್ ಫ್ಯಾಕ್ಟರ್ಸ್ ಲಿಮಿಟೆಡ್, ನಂ. 67/1, ಕನಕಪುರ ಮುಖ್ಯ ರಸ್ತೆ (ಲಾಲ್‌ಬಾಗ್ ಪಶ್ಚಿಮ ಗೇಟ್ ಹತ್ತಿರ), ಬಸವನಗುಡಿ, ಬೆಂಗಳೂರು – 560004 ಇಲ್ಲಿಗೆ ಕಳುಹಿಸಬೇಕು.
ಇದನ್ನೂ ಓದಿ : ಕೆನರಾ ಕಾಲೇಜ್ ಸೊಸೈಟಿ ಕುಮಟಾ ನೇಮಕಾತಿ 2023 : ವಿವಿಧ ಸಹಾಯಕ ಪ್ರಾಧ್ಯಾಪಕ, ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದನ್ನೂ ಓದಿ : ಕರ್ನಾಟಕ ಹೈಕೋರ್ಟ್ ನೇಮಕಾತಿ 2023 : ಕ್ಲರ್ಕ್ ಹಾಗೂ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ
ಇದನ್ನೂ ಓದಿ : SSLR Karnataka Recruitment 2023 : 2000 ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 08 ಫೆಬ್ರವರಿ 2023
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17 ಫೆಬ್ರವರಿ 2023
Canbank Factors Recruitment 2023 : Canbank Recruitment 2023 : Application Invitation for Junior Officer, Legal Officer Posts