Lithium storage in kashmir: ಭಾರತದ ಮೊದಲ ಲಿಥಿಯಂ ನಿಕ್ಷೇಪ ಕಾಶ್ಮೀರದಲ್ಲಿ ಪತ್ತೆ

ಶ್ರೀನಗರ: (Lithium storage in kashmir) ದೇಶದಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಲಿಥಿಯಂ ನಾನ್‌-ಫೆರಸ್‌ ಲೋಹವಾಗಿದ್ದು, ಇದು ಎಲೆಕ್ಟ್ರಿಕ್‌ ವಾಹನ ಬ್ಯಾಟರಿಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. “ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಗಣಿ ಕಾರ್ಯದರ್ಶಿ ವಿವೇಕ್‌ ಭಾರದ್ವಾಜ್‌ ಹೇಳಿದ್ದಾರೆ.

ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾದ ಪರಿಶೋಧನೆಯ ನಂತರದಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿದೆ. ಈ ಹಿಂದೆ ಗಣಿ ಸಚಿವಾಲಯವು ಉದಯೋನ್ಮುಖ ತಂತ್ರಜ್ಞಾನಗಳಿಗೆ ನಿರ್ಣಾಯಕ ಖನಿಜ ಪೂರೈಕೆ ಸರಪಳಿಯನ್ನು ಬಲಪಡಿಸಲು, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದ ಲಿಥಿಯಂ ಸೇರಿದಂತೆ ಖನಿಜಗಳನ್ನು ಪಡೆಯಲು ಸರಕಾರ ಹಲವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ.

ಪ್ರಸ್ತುತ ಭಾರತವು ಲಿಥಿಯಂ, ನಿಕ್ಕೆಲ್‌ ಮತ್ತು ಕೋಬಾಲ್ಟ್‌ ನಂತಹ ಅನೇಕ ಖನಿಜಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇನ್ನೂ ನವದೆಹಲಿಯಲ್ಲಿ ನಡೆದ ಅರವತ್ತೆರಡನೆಯ ಸೆಂಟ್ರಲ್‌ ಜಿಯೋಲಾಜಿಕಲ್‌ ಪ್ರೋಗ್ರಾಮಿಂಗ್‌ ಬೋರ್ಡ್‌ ಸಭೆಯಲ್ಲಿ ಮಾತನಾಡಿದ ಭಾರದ್ವಾಜ್‌, ಮೊಬೈಲ್‌ ಫೋನ್‌ ಆಗಿರಲಿ ಅಥವಾ ಯಾವುದೇ ಸೋಲಾರ್‌ ಪ್ಯಾನಲ್‌ ಆಗಿರಲಿ ಎಲ್ಲೆಡೆ ನಿರ್ಣಾಯಕ ಖನಿಜಗಳು ಬೇಕಾಗುತ್ತದೆ. ಸ್ವಾವಲಂಬಿಯಾಗಲು, ದೇಶವು ನಿರ್ಣಾಯಕ ಖನಿಜಗಳನ್ನು ಪತ್ತೆ ಮಾಡುವುದು ಮತ್ತು ಅದನ್ನು ಸಂಸ್ಕರಿಸುವುದು ಬಹಳ ಮುಖ್ಯ ಎಂದು ಹೇಳಿದರು.

ಇದನ್ನೂ ಓದಿ : Smuggling gold from shrilanka: ಚಿನ್ನವನ್ನು ಸಮುದ್ರಕ್ಕೆ ಎಸೆದ ಅಕ್ರಮ ಚಿನ್ನ ಸಾಗಾಟಗಾರರು

ಇದನ್ನೂ ಓದಿ : Turkey- siriya earthquake: ಭೂಕಂಪದ ಅವಶೇಷದಡಿಯಲ್ಲಿ ಜನಿಸಿ ಪವಾಡ ಸದೃಶ್ಯವಾಗಿ ಬದುಕಿ ಬಂದ ಹಸುಗೂಸು

ಇದನ್ನೂ ಓದಿ : Mandatory covid test cancelled: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ಕೋವಿಡ್‌ ಪರೀಕ್ಷೆ ರದ್ದು

Lithium storage in kashmir: India’s first lithium storage discovered in Kashmir

Comments are closed.