ಮಂಗಳವಾರ, ಏಪ್ರಿಲ್ 29, 2025
Homejob NewsDC Office Belagavi Recruitment 2023 : ವಿವಿಧ ಪುರಸಭೆ, ಪಟ್ಟಣ ಪಂಚಾಯತ್‌ ಪೌರಕಾರ್ಮಿಕ ಹುದ್ದೆಗಳಿಗೆ...

DC Office Belagavi Recruitment 2023 : ವಿವಿಧ ಪುರಸಭೆ, ಪಟ್ಟಣ ಪಂಚಾಯತ್‌ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- Advertisement -

ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ ನೇಮಕಾತಿ (DC Office Belagavi Recruitment 2023) ಅಧಿಕೃತ ಅಧಿಸೂಚನೆಯಂತೆ ಪೌರಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಳಗಾವಿ ಸರಕಾರಿ ಕ್ಷೇತ್ರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ. ಹಾಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿದೆ.

ಡಿಸಿ ಕಚೇರಿ ಬೆಳಗಾವಿ ನೇಮಕಾತಿ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ (DC Office Belagavi)
ಹುದ್ದೆಗಳ ಸಂಖ್ಯೆ : 105 ಹುದ್ದೆಗಳು
ಉದ್ಯೋಗ ಸ್ಥಳ : ಬೆಳಗಾವಿ
ಹುದ್ದೆಯ ಹೆಸರು : ಪೌರಕಾರ್ಮಿಕ
ವೇತನ : ರೂ.17000-28950/- ಪ್ರತಿ ತಿಂಗಳು

ಡಿಸಿ ಕಛೇರಿ ಬೆಳಗಾವಿ ಪುರಸಭೆ ಮತ್ತು ಪಟ್ಟಣ ಪಂಚಾಯತ್‌ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ :

  • ಅಥಣಿ ಪುರಸಭೆ : 32 ಹುದ್ದೆಗಳು
  • ಸಂಕೇಶ್ವರ ಪುರಸಭೆ : 6 ಹುದ್ದೆಗಳು
  • ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯಿತಿ : 6 ಹುದ್ದೆಗಳು
  • ಐನಾಪುರ ಪಟ್ಟಣ ಪಂಚಾಯಿತಿ : 17 ಹುದ್ದೆಗಳು
  • ಪೀರನವಾಡಿ ಪಟ್ಟಣ ಪಂಚಾಯತ್ : 29 ಹುದ್ದೆಗಳು
  • ಅರಭಾವಿ ಪಟ್ಟಣ ಪಂಚಾಯಿತಿ : 15 ಹುದ್ದೆಗಳು

ಶೈಕ್ಷಣಿಕ ಅರ್ಹತೆ:
ಡಿಸಿ ಕಚೇರಿ ಬೆಳಗಾವಿ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಡಿಸಿ ಕಚೇರಿ ಬೆಳಗಾವಿ ನಿಯಮಾವಳಿಗಳ ಪ್ರಕಾರ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ.

ವಯೋಮಿತಿ ವಿವರ :
ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು ಹಾಗೂ ಗರಿಷ್ಠ 55 ವರ್ಷ ವಯಸ್ಸು ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ ನಿಯಮಾನುಸಾರವಾಗಿ ಅಭ್ಯರ್ಥಿಗಳ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ :
ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ

ಡಿಸಿ ಕಚೇರಿ ಬೆಳಗಾವಿ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ ?
ಜಿಲ್ಲಾಧಿಕಾರಿ ಕಚೇರಿ ಬೆಳಗಾವಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಮಾರ್ಚ್‌ 15, 2023 ರಂದು ಅಥವಾ ಮೊದಲು ಈ ಕೆಳಗಿನ ವಿಳಾಸಗಳಿಗೆ ನಿಗದಿತ ರೀತಿಯಲ್ಲಿ, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಯ ಮೂಲಕ ಕಳುಹಿಸಬೇಕಾಗುತ್ತದೆ.

ಡಿಸಿ ಕಚೇರಿ ಬೆಳಗಾವಿ ಆಫ್‌ಲೈನ್ ವಿಳಾಸ ವಿವರಗಳು :
ಅಥಣಿ ಪುರಸಭೆ : ಮುಖ್ಯಾಧಿಕಾರಿಗಳು, ಪುರಸಭೆ, ಅಥಣಿ
ಸಂಕೇಶ್ವರ ಪುರಸಭೆ : ಮುಖ್ಯಾಧಿಕಾರಿಗಳು, ಪುರಸಭೆ, ಸಂಕೇಶ್ವರ
ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್ : ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯತ್, ಚೆನ್ನಮ್ಮನ-ಕಿತ್ತೂರು
ಐನಾಪುರ ಪಟ್ಟಣ ಪಂಚಾಯಿತಿ : ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಐನಾಪುರ
ಪೀರನವಾಡಿ ಪಟ್ಟಣ ಪಂಚಾಯಿತಿ : ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಪೀರನವಾಡಿ
ಅರಭಾವಿ ಪಟ್ಟಣ ಪಂಚಾಯಿತಿ : ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಅರಭಾವಿ

ಇದನ್ನೂ ಓದಿ : ಹಟ್ಟಿ ಚಿನ್ನದ ಗಣಿ ಕಂಪನಿ ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : Agriculture Insurance Company of India Recruitment 2023 : ಕೃಷಿ ವಿಮಾ ಕಂಪೆನಿಯಲ್ಲಿ ಡಿಗ್ರಿ ಪಾಸಾದವರಿಗೆ ಉದ್ಯೋಗಾವಕಾಶ

ಇದನ್ನೂ ಓದಿ : ಎಡಿಎ ನೇಮಕಾತಿ 2023 : ಎಲೆಕ್ಟ್ರಿಷಿಯನ್, ಡ್ರಾಫ್ಟ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 13 ಫೆಬ್ರವರಿ 2023
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಮಾರ್ಚ್ 2023

DC Office Belagavi Recruitment 2023 : Application Invitation for Various Municipal, Town Panchayat Civil Service Posts

RELATED ARTICLES

Most Popular