Kolara students ill: ಚಿತ್ರಾನ್ನ ಸೇವಿಸಿ ಅಸ್ವಸ್ಥರಾಗಿದ್ದ ಮಕ್ಕಳು ಮತ್ತೊಮ್ಮೆ ಅಸ್ವಸ್ಥ

ಕೋಲಾರ: (Kolara students ill) ಚಿತ್ರಾನ್ನ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದು ಬಂದಿದ್ದ ಮಕ್ಕಳು ಮತ್ತೊಮ್ಮೆ ಅಸ್ವಸ್ಥರಾಗಿರುವ ಘಟನೆ ಕೋಲಾರದ ಕ್ಲಾಕ್‌ ಟವರ್‌ ಬಳಿಯ ಉರ್ದು ಶಾಲೆಯಲ್ಲಿ ನಡೆದಿದೆ. ಫೆ.17 ರಂದು ಚಿತ್ರಾನ್ನ ಸೇವಿಸಿ ಎಂಟು ಮಕ್ಕಳು ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಮಕ್ಕಳು ಅಸ್ವಸ್ಥಗೊಂಡಿದ್ದಾರೆ.

ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ಎಂಟು ಮಕ್ಕಳು ಇಂದು ಶಾಲೆಗೆ ಬಂದಿದ್ದು, ನಂತರ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಂಬುಲೆನ್ಸ್‌ ಮೂಲಕ ವಿದ್ಯಾರ್ಥಿಗಳನ್ನು ಎಸ್‌ ಎನ್‌ ಆರ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯ ದೊಡ್ಡಹಸಾಳ ಗ್ರಾಮದ ಬಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಎಲ್‌ ಎಲ್‌ ಬಿ ಹಾಸ್ಟೆಲ್‌ನ 34 ವಿದ್ಯಾರ್ಥಿಗಳು ಫುಡ್‌ ಪಾಯಿಸನಾಗಿ ಅಸ್ವಸ್ಥರಾಗಿದ್ದಾರೆ. ನಂತರ ಚಿತ್ರಾನ್ನದಲ್ಲಿ ಹಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಇದನ್ನು ಗಮನಿಸಿದ ಕೆಲವರು ತಿಂಡಿ ತಿನ್ನದೇ ಆಗಲೇ ತಿಂದಿದ್ದ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ಆದರೆ ಅಷ್ಟೋತ್ತಿಗಾಗಲೇ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದು ಅನಾರೋಗ್ಯಕ್ಕೀಡಾಗಿದ್ದಾರೆ. ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದ ಮಕ್ಕಳು ಮತ್ತೆ ಅಸ್ವಸ್ಥರಾಗಿದ್ದು, ಇನ್ನಷ್ಟು ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ : Guwahati crime: ಪತಿ, ಅತ್ತೆಯನ್ನು ಕೊಂದು ದೇಹದ ಭಾಗಗಳನ್ನು ಎಸೆದ ಮಹಿಳೆ

ದಕ್ಷಿಣ ಕನ್ನಡ: ಕಾಡಾನೆ ದಾಳಿಗೆ ಇಬ್ಬರು ಬಲಿ

ದಕ್ಷಿಣ ಕನ್ನಡದ ಕಡಬ ತಾಲೂಕಿನ ಮೀನಾಡಿ ಬಳಿಯಲ್ಲಿ ಕಾಡಾನೆ ದಾಳಿ ನಡೆಸಿದ್ದು, ಯುವತಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ರಂಜಿತಾ(21 ವರ್ಷ) ಹಾಗೂ ರಮೇಶ್‌ ರೈ(60 ವರ್ಷ) ಕಾಡಾನೆ ದಾಳಿಗೆ ಬಲಿಯಾದವರು. ರಂಜಿತ ಎನ್ನುವ ಯುವತಿ ಹಾಲು ಸಹಕಾರ ಸಂಘದ ಸಿಬ್ಬಂದಿಯಾಗಿದ್ದು, ಮನೆಯಿಂದ ಸೊಸೈಟಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಇದೇ ವೇಳೆ ರಮೇಶ್‌ ಮೇಲೂ ಕಾಡಾನೆ ದಾಳಿ ನಡೆಸಿದೆ. ರಮೇಶ್‌ ರೈ ಕಾಡಾನೆ ದಾಳಿಗೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರಂಜಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Wild elephant attack: ದಕ್ಷಿಣ ಕನ್ನಡ: ಕಾಡಾನೆ ದಾಳಿಗೆ ಇಬ್ಬರು ಬಲಿ

ಇದನ್ನೂ ಓದಿ : Landslide in Brazil: ಬ್ರೆಜಿಲ್‌ನಲ್ಲಿ ಭೂಕುಸಿತ 24 ಮಂದಿ ಸಾವು

Kolara students ill: Children who were ill after consuming Chitran are ill again

Comments are closed.