ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) CRB ಕ್ಲರ್ಕ್-XIII, ಅಥವಾ ಐಬಿಪಿಎಸ್ ಕ್ಲರ್ಕ್ ನೇಮಕಾತಿ 2023 (IBPS Clerk Recruitment 2023) ಮೂಲಕ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳ ಸಂಖ್ಯೆಯನ್ನು ಪರಿಷ್ಕರಿಸಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಐಬಿಪಿಎಸ್ ಕ್ಲರ್ಕ್ ಹುದ್ದೆಗಳನ್ನು 4545 ಗೆ ಪರಿಷ್ಕರಿಸಲಾಗಿದೆ. ಈ ಮೊದಲು 4045 ಹುದ್ದೆಗಳಿಗೆ ಮಾತ್ರ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಕೆನರಾ ಬ್ಯಾಂಕ್ 500 ಹುದ್ದೆಗಳು ಸೇರಿಕೊಂಡಿದ್ದರಿಂದ ಒಟ್ಟು ಹುದ್ದೆಗಳಲ್ಲಿ ಬದಲಾವಣೆಗೊಂಡಿದೆ. ಹೀಗಾಗಿ ಕೆನರಾ ಬ್ಯಾಂಕ್ ಜುಲೈ 3, 2023 ರಂದು ಈ ನೇಮಕಾತಿ ಡ್ರೈವ್‌ಗೆ ಒಟ್ಟು 500 ಹೆಚ್ಚಿನ ಪೋಸ್ಟ್‌ಗಳನ್ನು ಸೇರಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್– ibps.in ನಲ್ಲಿ ಜುಲೈ 21, 2023 ರವರೆಗೆ ಕ್ಲೆರಿಕಲ್ ಕೇಡರ್ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಐಬಿಪಿಎಸ್ ಪ್ರಾಥಮಿಕ ಪರೀಕ್ಷೆಯನ್ನು ಆಗಸ್ಟ್ 26, 27 ಮತ್ತು ಸೆಪ್ಟೆಂಬರ್ 9, 2023 ರಂದು ನಡೆಸುತ್ತದೆ. ಹಾಗೆಯೇ ಮುಖ್ಯ ಪರೀಕ್ಷೆಯು ಅಕ್ಟೋಬರ್ 2023 ರಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ :
ಅರ್ಜಿ ನಮೂನೆಗಳ ಸಂಪಾದನೆ ಮತ್ತು ಶುಲ್ಕ ಪಾವತಿ ಸೇರಿದಂತೆ ಆನ್‌ಲೈನ್ ನೋಂದಣಿಯನ್ನು ಜುಲೈ 21 ರವರೆಗೆ ಮಾಡಬಹುದು. ಐಬಿಪಿಎಸ್ ಕ್ಲರ್ಕ್ 2023 ರ ಅರ್ಜಿ ಶುಲ್ಕವು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ 850 ಮತ್ತು ಇದು SC/ST/PWBD/EXSM ಅಭ್ಯರ್ಥಿಗಳಿಗೆ ರೂ 175 ಆಗಿದೆ.
ಇದನ್ನೂ ಓದಿ : BOB Recruitment 2023 : ಬ್ಯಾಂಕ್ ಆಫ್ ಬರೋಡಾ : ಪದವಿ ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ
ವಯಸ್ಸಿನ ಮಿತಿ :
ಈ ನೇಮಕಾತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ವಯೋಮಿತಿ 20 ರಿಂದ 28 ವರ್ಷಗಳ ನಡುವೆ ಇರಬೇಕು.
ಐಬಿಪಿಎಸ್ ಕ್ಲರ್ಕ್ ನೇಮಕಾತಿ 2023 ದಿನಾಂಕಗಳ ವಿವರ :
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : ಜುಲೈ 1, 2023
- ಐಬಿಪಿಎಸ್ ಕ್ಲರ್ಕ್ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಕೊನೆಯ ದಿನಾಂಕ : ಜುಲೈ 21, 2023
- ಪರೀಕ್ಷಾ ಪೂರ್ವ ತರಬೇತಿ ಕರೆ ಪತ್ರ ಡೌನ್‌ಲೋಡ್ : ಆಗಸ್ಟ್ 2023
- ಪರೀಕ್ಷಾ ಪೂರ್ವ ತರಬೇತಿ ದಿನಾಂಕ : ಆಗಸ್ಟ್ 2023
- ಐಬಿಪಿಎಸ್ ಕ್ಲರ್ಕ್ ನೇಮಕಾತಿ 2023 ಪೂರ್ವಭಾವಿ ದಿನಾಂಕ : ಆಗಸ್ಟ್ 26, 27, ಮತ್ತು ಸೆಪ್ಟೆಂಬರ್ 9, 2023
- ಐಬಿಪಿಎಸ್ ಕ್ಲರ್ಕ್ ನೇಮಕಾತಿ 2023 ಪೂರ್ವಭಾವಿ ಫಲಿತಾಂಶ ದಿನಾಂಕ : ಸೆಪ್ಟೆಂಬರ್/ಅಕ್ಟೋಬರ್ 2023
IBPS Clerk Recruitment 2023 : IBPS Clerk Recruitment Update : Here is complete information