Zim Afro T10 League : 2011ರ ವಿಶ್ವಕಪ್ ವಿಜೇತರ ಜೊತೆ ಜಿಮ್ ಆಫ್ರೋ ಟಿ10 ಲೀಗ್‌ನಲ್ಲಿ ಆಡಲಿದ್ದಾರೆ ಕೊಡಗಿನ ವೀರ ಉತ್ತಪ್ಪ

ಬೆಂಗಳೂರು : ಅಂತರಾಷ್ಟ್ರೀಯ , ದೇಶೀಯ ಹಾಗೂ ಐಪಿಎಲ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಕೊಡಗಿನ ವೀರ ರಾಬಿನ್ ಉತ್ತಪ್ಪ, ಚೊಚ್ಚಲ ಆವೃತ್ತಿಯ ಜಿಮ್ ಆಫ್ರೋ ಟಿ20 ಲೀಗ್‌ನಲ್ಲಿ (Zim Afro T10 League) ಆಡಲಿದ್ದಾರೆ.

ರಾಬಿನ್ ಉತ್ತಪ್ಪ (Robin Uthappa) ಅವರ ಜೊತೆ 2011ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾದ ಎಸ್.ಶ್ರೀಶಾಂತ್ (S.Sreesanth) ಮತ್ತು ಯೂಸುಫ್ ಪಠಾಣ್ (Yusuf Pathan) ಕೂಡ ಆಡಲಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ (Irfan Pathan) ಕೂಡ ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಿಮ್ ಆಫ್ರೋ ಟಿ20 ಲೀಗ್‌ನಲ್ಲಿ ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾದ ಒಟ್ಟು 5 ಫ್ರಾಂಚೈಸಿ ತಂಡಗಳು ಭಾಗವಹಿಸಲಿವೆ. ಹರಾರೆ ಹರಿಕೇನ್ಸ್ ತಂಡದ ಮಾಲೀಕತ್ವವನ್ನು ಬಾಲಿವುಡ್‌ನ ಹಿರಿಯ ನಟ ಸಂಜಯ್ ದತ್ ಪಡೆದುಕೊಂಡಿದ್ದಾರೆ.

ಜಿಮ್ ಆಫ್ರೋ ಟಿ20 ಲೀಗ್‌ನಲ್ಲಿ ಆಡಲಿರುವ ತಂಡಗಳು :

  • ಹರಾರೆ ಹರಿಕೇನ್ಸ್ (Harare Hurricanes)
  • ಬುಲವಾಯೊ ಬ್ರೇವ್ಸ್ (Bulawayo Braves)
  • ಕೇಪ್ ಟೌನ್ ಸ್ಯಾಂಪ್ ಆರ್ಮಿ (Cape Town Samp Army)
  • ಡರ್ಬನ್ ಖಲಂಡರ್ಸ್ (Durban Qalandars)
  • ಜೋಬರ್ಗ್ ಬಫೆಲ್ಲೋಸ್ (Joburg Buffaloes)

ರಾಬಿನ್ ಉತ್ತಪ್ಪ ಅವರಲ್ಲದೆ ಕರ್ನಾಟಕದ ಮತ್ತೊಬ್ಬ ಮಾಜಿ ಕ್ರಿಕೆಟಿಗನಾಗಿರುವ ಸ್ಟುವರ್ಟ್ ಬಿನ್ನಿ (ಸ್ಟುವರ್ಟ್ ಬಿನ್ನಿ) ಕೂಡ ಈ ಟೂರ್ನಿಯಲ್ಲಿಆಡಲಿದ್ದಾರೆ.

ಇದನ್ನೂ ಓದಿ : Praveen Kumar car major accident : ಮಾಜಿ ಕ್ರಿಕೆಟಿಗ ಪ್ರವೀಣ್‌ ಕುಮಾರ್‌ಗೆ ಕಾರು ಅಪಘಾತ

ಇದನ್ನೂ ಓದಿ : ACC Men’s Emerging Asia Cup 2023: ಭಾರತ ಎ’ ತಂಡದಲ್ಲಿ ಕನ್ನಡಿಗ ನಿಕಿನ್ ಜೋಸ್’ಗೆ ಚಾನ್ಸ್ ಕೊಡಿಸಿದ ತಿಲಕ್ ನಾಯ್ಡು

ಜಿಮ್ ಆಫ್ರೋ ಟಿ20 ಲೀಗ್‌ನಲ್ಲಿ ಆಡಲಿರುವ ಭಾರತೀಯ ಆಟಗಾರರು:
ರಾಬಿನ್ ಉತ್ತಪ್ಪ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ಎಸ್.ಶ್ರೀಶಾಂತ್, ಪಾರ್ಥಿವ್ ಪಟೇಲ್.

ಚೊಚ್ಚಲ ಆವೃತ್ತಿಯ ಜಿಮ್ ಆಫ್ರೋ ಟಿ10 ಲೀಗ್ ಜುಲೈ 20ರಿಂದ 29ರವರೆಗೆ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಅಬುಧಾಬಿ ಟಿ10 ಲೀಗ್’ನ ಯಶಸ್ಸಿನ ನಂತರ ಜಿಮ್ ಆಫ್ರೋ ಟಿ10 ಲೀಗ್ ಆಯೋಜಿಸಲಾಗುತ್ತಿದೆ.

Robin Uthappa to features in Zim Afro T10 League

Comments are closed.