ಸೋಮವಾರ, ಏಪ್ರಿಲ್ 28, 2025
Homejob Newsಭಾರತೀಯ ನೌಕಾಪಡೆಯ ನೇಮಕಾತಿ 2023 : ಪದವೀಧರರಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ನೌಕಾಪಡೆಯ ನೇಮಕಾತಿ 2023 : ಪದವೀಧರರಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ

- Advertisement -

ಭಾರತೀಯ ನೌಕಾಪಡೆಯ ನೇಮಕಾತಿ (Indian Navy recruitment 2023) ಅಧಿಕೃತ ಅಧಿಸೂಚನೆ ಮೂಲಕ ಕೇರಳದ ನೌಕಾ ಅಕಾಡೆಮಿ ಎಜಿಮಲದಲ್ಲಿ ಜನವರಿ 2024 ರಿಂದ ಪ್ರಾರಂಭವಾಗುವ ಕೋರ್ಸ್‌ಗಾಗಿ ಕಿರು ಸೇವಾ ಆಯೋಗದ ಹುದ್ದೆಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಮೇ 14, 2023 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 242 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಅದರಲ್ಲಿ 150 ಹುದ್ದೆಗಳು ಕಾರ್ಯನಿರ್ವಾಹಕ ಶಾಖೆಗೆ, 12 ಶಿಕ್ಷಣ ಶಾಖೆಗೆ ಮತ್ತು 80 ತಾಂತ್ರಿಕ ಶಾಖೆಗೆ ಇರುತ್ತದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್‌ ಆದ joinindiannavy.gov.in.ನಲ್ಲಿ ಸಲ್ಲಿಸಬಹುದು.

ಭಾರತೀಯ ನೌಕಾಪಡೆಯ ನೇಮಕಾತಿ 2023 ಅರ್ಹತಾ ಮಾನದಂಡಗಳ ವಿವರ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಅಂತಿಮ ವರ್ಷದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು. ಒಟ್ಟಾರೆ ಅಥವಾ ತತ್ಸಮಾನ CGPA ಯಲ್ಲಿ ಕನಿಷ್ಠ ಶೇ. 60ರಷ್ಟು ಅಂಕಗಳೊಂದಿಗೆ ಅಥವಾ ಒಟ್ಟಾರೆ ಅಥವಾ ತತ್ಸಮಾನದಲ್ಲಿ ಶೇ. 60ರಷ್ಟು ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು.

ಭಾರತೀಯ ನೌಕಾಪಡೆಯ ನೇಮಕಾತಿ 2023 ಆಯ್ಕೆ ಮಾನದಂಡ ವಿವರ :
ಭಾರತೀಯ ನೌಕಾಪಡೆಯ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಅರ್ಹತಾ ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಸಬಹುದು

ಅರ್ಜಿ ಸಲ್ಲಿಸುವುದು ಹೇಗೆ?
ಭಾರತೀಯ ನೌಕಾಪಡೆಯ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ ಆದ joinindiannavy.gov.in ನಲ್ಲಿ ಮೇ 14 ರಂದು ಅಥವಾ ಮೊದಲು ಸಲ್ಲಿಸಬಹುದು.

Indian Navy recruitment 2023 : ಭಾರತೀಯ ನೌಕಾಪಡೆಯ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ :

  • ಸಾಮಾನ್ಯ ಸೇವೆ : 50 ಹುದ್ದೆಗಳು
  • ಏರ್ ಟ್ರಾಫಿಕ್ ಕಂಟ್ರೋಲರ್- 10 ನೇವಲ್ ಏರ್ ಆಪರೇಷನ್ ಆಫೀಸರ್ (NAOO) : 20 ಹುದ್ದೆಗಳು
  • ಪೈಲಟ್ : 25 ಹುದ್ದೆಗಳು
  • ಲಾಜಿಸ್ಟಿಕ್ಸ್ : 30 ಹುದ್ದೆಗಳು
  • ನೇವಲ್ ಆರ್ಮಮೆಂಟ್ ಇನ್ಸ್ಪೆಕ್ಟರೇಟ್ ಕೇಡರ್ : 15 ಹುದ್ದೆಗಳು
  • ಶಿಕ್ಷಣ : 12 ಹುದ್ದೆಗಳು
  • ಎಂಜಿನಿಯರಿಂಗ್ ಶಾಖೆ [ಸಾಮಾನ್ಯ ಸೇವೆ (GS)] : 20 ಹುದ್ದೆಗಳು
  • ಎಲೆಕ್ಟ್ರಿಕಲ್ ಶಾಖೆ [ಸಾಮಾನ್ಯ ಸೇವೆ (GS)] : 60 ಹುದ್ದೆಗಳು
  • ಒಟ್ಟು ಹುದ್ದೆಗಳು : 242 ಹುದ್ದೆಗಳು

ಇದನ್ನೂ ಓದಿ : SBI SCO ನೇಮಕಾತಿ 2023 : 217 ಮ್ಯಾನೇಜರ್ ಹುದ್ದೆಗಳಿಗೆ ಉದ್ಯೋಗಾವಕಾಶ

ಇದನ್ನೂ ಓದಿ : Mysore District Court Recruitment 2023 : 10 ನೇ ತರಗತಿ ಪಿಯುಸಿ, ಡಿಪ್ಲೊಮಾ ಪಾಸಾದವರಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ

Indian Navy Recruitment 2023 : Job Opportunity for Graduates, Apply Now

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular