(Intelligence Bureau Recruitment 2022)ಇಂಟೆಲಿಜೆನ್ಸ್ ಬ್ಯೂರೋ ದಲ್ಲಿ (Intelligence Bureau ) ಖಾಲಿರುವ 1671 ಸೆಕ್ಯುರಿಟಿ ಅಸಿಸ್ಟೆಂಟ್, ಎಂಟಿಎಸ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಸರ್ಕಾರ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನವೆಂಬರ್ 25,2022 ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
(Intelligence Bureau Recruitment 2022)ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಖಾಲಿರುವ ಹುದ್ದೆಗಳ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು: ಇಂಟೆಲಿಜೆನ್ಸ್ ಬ್ಯೂರೋ
ಹುದ್ದೆಗಳ ಸಂಖ್ಯೆ: 1671
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆಯ ಹೆಸರು: ಭದ್ರತಾ ಸಹಾಯಕ, ಎಂಟಿಎಸ್
ವೇತನ: ರೂ.18000-69100/- ಪ್ರತಿ ತಿಂಗಳು
ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಖಾಲಿರುವ ಹುದ್ದೆಗಳ ಸಂಖ್ಯೆಯ ವಿವರ:
ಸೆಕ್ಯುರಿಟಿ ಅಸಿಸ್ಟೆಂಟ್- 1521
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS)- 150
ವಿದ್ಯಾರ್ಹತೆ ವಿವರ:
ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಖಾಲಿರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಯಾವುದೇ ಮಾನ್ಯತೆ ವಿಶ್ವವಿದ್ಯಾಲಯಗಳಿಂದ ಯಾವುದಾರೂ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ ವಿವರ:
ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಖಾಲಿರುವ ಸೆಕ್ಯುರಿಟಿ ಅಸಿಸ್ಟೆಂಟ್ ಹುದ್ದೆಗಳಲ್ಲಿ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳು 27 ವಯಸ್ಸಿನವರಾಗಿರಬೇಕು.
ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಖಾಲಿರುವ ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳಲ್ಲಿ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳು ಕನಿಷ್ಠ18 ರಿಂದ 25 ವಯಸ್ಸಿನವರಾಗಿರಬೇಕು.
ವಯೋಮಿತಿ ಸಡಿಲಿಕೆ ವಿವರ:
OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwD ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ ವಿವರ:
ಅರ್ಹ ಅಭ್ಯರ್ಥಿಗಳು 450 ರೂ. ಗಳನ್ನು ಕಟ್ಟಬೇಕು.
ಪರೀಕ್ಷಾ ಶುಲ್ಕವನ್ನೂ ಕೂಡ ಪಾವತಿ ಮಾಡಬೇಕು
ಪರೀಕ್ಕಾ ಶುಲ್ಕದ ಮಾಹಿತಿ:
ಸಾಮಾನ್ಯ, EWS ಮತ್ತು OBC ಯ ಪುರುಷ ಅಭ್ಯರ್ಥಿಗಳು: ರೂ.50/-
ಪಾವತಿ ವಿಧಾನ: ಆನ್ಲೈನ್ ಅಥವಾSBI ಚಲನ್ ಮೂಲಕ ಪಾವತಿಸಬಹುದು
ಇದನ್ನೂ ಓದಿ:South Africa knocked out : ನೆದರ್ಲೆಂಡ್ಸ್ ವಿರುದ್ಥ ಸೋಲು, ಟಿ20 ವಿಶ್ವಕಪ್’ನಿಂದ ಚೋಕರ್ಸ್ ದಕ್ಷಿಣ ಆಫ್ರಿಕಾ ಔಟ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಖಾಲಿರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ)5-11-2022 ರಿಂದ 29-11-2022 ರವರೆಗೆ ಇಂಟೆಲಿಜೆನ್ಸ್ ಬ್ಯೂರೋ ಅಧಿಕೃತ ವೆಬ್ ಸೈಟ್ ಆದ mha.gov.in ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-11-2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಶುಲ್ಕದ ಆನ್ಲೈನ್ ಪಾವತಿಯ ದಿನಾಂಕ: 25-11-2022
SBI ಚಲನ್ ಮೂಲಕ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 29-11-2022
Intelligence Bureau Recruitment 2022:671 Security Assistant, MTS Vacancy for Graduates