Woman burned alive : ಪಕ್ಕದ ಮನೆಯವರಿಂದ ಮಹಿಳೆ ಸಜೀವ ದಹನ : ವಾಮಾಚಾರದ ಆರೋಪ

ಬಿಹಾರ : (Woman burned alive)ವಾಮಾಚಾರ ಮಾಡಿರುವ ಆರೋಪದ ಮೇಲೆ ಸ್ಥಳೀಯರು ಪರಿಶಿಷ್ಠ ಜಾತಿ ಸಮುದಾಯದ ಮಹಿಳೆಯನ್ನು ತನ್ನ ಮನೆಯಲ್ಲಿಯೇ ಸಜೀವ ದಹನ ಮಾಡಿರುವ ಆಘಾತಕಾರಿ ದುರ್ಘಟನೆ ಬಿಹಾರದ ಪಾಟ್ನಾದಲ್ಲಿ ಶನಿವಾರ ಸಂಜೆ ನಡೆದಿದೆ . ಮೈಗ್ರಾ ಪೋಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರೀಟಾ ದೇವಿ ಎನ್ನುವವರೇ ಸಜೀವ ದಹನವಾದ ಮಹಿಳೆ .

ಜಾರ್ಖಂಡ್‌ ಅರಣ್ಯಕ್ಕೆ ಹೊಂದಿಕೊಂಡಿರುವ ಮೈಗ್ರಾ ಪೋಲೀಸ್‌ ಠಾಣೆಯ ವ್ಯಾಪ್ತಿಯಲ್ಲಿರುವ ಪಚ್ಮಾಹ್‌ ಗ್ರಾಮದಲ್ಲಿ ಘಟನೆ ನಡೆದಿದ್ದು ಅರ್ಜುನ್‌ ದಾಸ್‌ ಅವರ ಪತ್ನಿ ರೀಟಾ ದೇವಿಯ ಮೇಲೆ ಸ್ಥಳೀಯರು ಹಲ್ಲೆ(Woman burned alive) ನಡೆಸಿದ್ದರು. ಘಟನೆ ಬಗ್ಗೆ ತಿಳಿದ ಪೋಲೀಸರು ಸ್ಥಳಕ್ಕೆ ಧಾವಿಸಿದ್ದು ಸ್ಥಳೀಯರು ಪೋಲೀಸ್‌ ತಂಡವನ್ನು ಅಲ್ಲಿಂದ ತೆರಳುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : Retired officer murdered : ಇಂಟಲಿಜೆನ್ಸ್‌ ಬ್ಯೂರೊದ ನಿವೃತ್ತ ಅಧಿಕಾರಿ ಕೊಲೆ ; ಕಾರು ಗುದ್ದಿಸಿ ಹಂತಕರು ಎಸ್ಕೇಪ್‌

ಇದಾದ ಬಳಿಕ ಎಸ್‌ಡಿಪಿಒ ಮನೋಜ್‌ ರಾಮ್‌ ಅವರ ನೇತ್ರತ್ವದಲ್ಲಿ ಹೆಚ್ಚಿನ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಸುಟ್ಟ ರೀತಿಯಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ನಂತರ ಮಹಿಳೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಎಂದು ಗಯಾಕ್ಕೆ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ : Fire accident : ರಷ್ಯಾ ಕೆಫೆಯಲ್ಲಿ ಬೆಂಕಿ ಅವಘಡ ; 15 ಸಾವು ,250 ಮಂದಿ ಸ್ಥಳಾಂತರ

ವರದಿಗಳ ಪ್ರಕಾರ ಅದೇ ಗ್ರಾಮದ ನಿವಾಸಿಯಾಗಿದ್ದ ಪರಮೇಶ್ವರ್‌ ಭುಯಾನ್‌ ಎನ್ನುವವರು ದೀರ್ಘಕಾಲಿಕ ಅನಾರೋಗ್ಯಕ್ಕೆ ತುತ್ತಾಗಿ ಕಳೆದ ತಿಂಗಳಿನಲ್ಲಿ ಮೃತಪಟ್ಟಿದ್ದರು. ಆದರೆ ಅವರ ಕುಟುಂಬದವರು ರೀಟಾ ದೇವಿ ವಾಮಾಚಾರದ ಮೂಲಕ ಭುಯಾನ್‌ ಅವರನ್ನು ಕೊಲೆ ಮಾಡಿರುವುದಾಗಿ ಅರೋಪಿಸಿ ಆಕೆಯನ್ನು ಕೊಲೆಗೈದಿದ್ದಾರೆ.

ಇದನ್ನೂ ಓದಿ : Road Accident : ಕಾಂಕ್ರೀಟ್ ರೇಲಿಂಗ್‌ಗೆ ಬೈಕ್‌ ಡಿಕ್ಕಿ ; 1 ಸಾವು, ಇಬ್ಬರಿಗೆ ಗಾಯ

ಇದನ್ನೂ ಓದಿ : The big twist : ಚಂದ್ರಶೇಖರ್‌ ನಿಗೂಢ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಕೊನೆಯ ಆ ಕರೆಯಲ್ಲಿತ್ತಾ ಸಾವಿನ ಸೀಕ್ರೆಟ್

ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್‌ 302 ಮತ್ತು 436 ಮತ್ತು ವಾಮಾಚಾರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ವರೆಗೆ ಒಂಬತ್ತು ಮಹಿಳೆಯರನ್ನು ಬಂಧಿಸಲಾಗಿದೆ. ಕೊಲೆ ನಡೆಸಿರುವ ಆರೋಪದಲ್ಲಿ ಇನ್ನೂ ಹೆಚ್ಚಿನವರ ಹುಡುಕಾಟ ನಡೆಸುತ್ತಿರುವುದಾಗಿ ಹಿರಿಯ ಪೋಲೀಸ್‌ ವರಿಷ್ಠಾಧಿಕಾರಿ ಹರ್‌ ಪ್ರೀತ್‌ ಕೌರ್‌ ತಿಳಿಸಿದ್ದಾರೆ.

(Woman burned alive) A shocking incident took place on Saturday evening in Patna, Bihar, in which a local woman from a Scheduled Caste community was burnt alive in her own home on the charge of witchcraft. An incident took place in the jurisdiction of Migra Police Station, and the woman named Rita Devi was burnt alive.

Comments are closed.