ಸೋಮವಾರ, ಜೂನ್ 16, 2025
Homejob NewsITBP Head Constable Recruitment: 293 ಹೆಡ್ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಆಹ್ವಾನ

ITBP Head Constable Recruitment: 293 ಹೆಡ್ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಆಹ್ವಾನ

- Advertisement -

(ITBP Head Constable Recruitment)ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ (ITBP) ನೇಪಾಳ ಮತ್ತು ಭೂತಾನ್‌ ಗಳಲ್ಲಿ ಸುಮಾರು 293 ಖಾಲಿರುವ ಹೆಡ್ ಕಾನ್ಸ್‌ಟೇಬಲ್ ಮತ್ತು ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಹುದ್ದೆಗಳ ವಿವರ, ಸ್ಥಳ, ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ ವಿವರ:
ಸಂಸ್ಥೆಯ ಹೆಸರು: ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP)
ಹುದ್ದೆಗಳ ಹೆಸರು: ಗ್ರೂಪ್ C’ (ನಾನ್-ಗೆಜೆಟೆಡ್ ಮತ್ತು ನಾನ್ ಮಿನಿಸ್ಟ್ರಿಯಲ್) ಪೋಸ್ಟ್‌ಗಳಲ್ಲಿ ಹೆಡ್ ಕಾನ್‌ಸ್ಟೆಬಲ್ (ದೂರಸಂಪರ್ಕ) ಮತ್ತು ಕಾನ್‌ಸ್ಟೆಬಲ್ (ದೂರಸಂಪರ್ಕ)

ಹುದ್ದೆಗಳ ಸಂಖ್ಯೆ: 293
ವರ್ಗ: ಪೊಲೀಸ್ ಉದ್ಯೋಗಗಳು
ಉದ್ಯೋಗ ಸ್ಥಳ: ಭಾರತದಾದ್ಯಂತ
ಅಧಿಕೃತ ವೆಬ್‌ಸೈಟ್: www.recruitment.itbpolice.nic.in

ಹುದ್ದೆಗಳ ಸಂಖ್ಯೆಯ ವಿವರ:
ಹೆಡ್ ಕಾನ್ಸ್ಟೇಬಲ್ – 126
ಕಾನ್ಸ್ಟೇಬಲ್ – 167
ವಿದ್ಯಾರ್ಹತೆ: ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ ನಲ್ಲಿ ಖಾಲಿರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಯಾವುದೇ ಮಾನ್ಯತೆ ವಿಶ್ವ ವಿದ್ಯಾಲಯಗಳಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದೊಂದಿಗೆ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಅಲ್ಲದೆ ಕೈಗಾರಿಕಾ ತರಬೇತಿ ಸಂಸ್ಥೆ ಅಥವಾ ಯಾವುದೇ ಇತರ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮಾ/ಸರ್ಟಿಫಿಕೇಟ್ ಕೋರ್ಸ್ ಆಗಿದ್ದವರು ಕೂಡ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯೋಮಿತಿ ವಿವರ:
ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ ನಲ್ಲಿ (ITBP) ನಲ್ಲಿ ಖಾಲಿರುವ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳು ಹೆಡ್ ಕಾನ್‌ಸ್ಟೆಬಲ್ ಗೆ ಅರ್ಜಿಯನ್ನು ಸಲ್ಲಿಸುವವರು 18 ರಿಂದ 25 ವರ್ಷಗಳು ಮತ್ತು ಕಾನ್ಸ್ಟೇಬಲ್ 18 ರಿಂದ 23 ವರ್ಷಗಳ ವಯಸ್ಸಿನವರಾಗಿರಬೇಕು.

ಆಯ್ಕೆ ಪ್ರಕ್ರಿಯೆ:
ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ ಫೋರ್ಸ್ ನಲ್ಲಿ ಖಾಲಿರುವ ಹುದ್ದೆಗಳ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ದೈಹಿಕ ದಕ್ಷತೆ ಪರೀಕ್ಷೆ (PET) ಮತ್ತು ದೈಹಿಕ ಗುಣಮಟ್ಟದ ಪರೀಕ್ಷೆ (PST), ಲಿಖಿತ ಪರೀಕ್ಷೆ, ದಾಖಲೆ ಮತ್ತು ವೈದ್ಯಕೀಯ ಪರೀಕ್ಷೆ (DME) ಮೂಲಕ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ:KL Rahul back in form: ಟೀಕಾಕಾರರಿಗೆ ಅಬ್ಬರದ ಅರ್ಧಶತಕದೊಂದಿಗೆ ಉತ್ತರಿಸಿದ ರಾಹುಲ್, ವರ್ಕೌಟ್ ಆಯ್ತು ಕೊಹ್ಲಿ ಟಿಪ್ಸ್

ಇದನ್ನೂ ಓದಿ:Provident Fund Facility : 10 ಕೋಟಿ ಉದ್ಯೋಗಿಗಳು ಇಪಿಎಫ್‌ಒ ವ್ಯಾಪ್ತಿಗೆ : ಸಚಿವ ಭೂಪೇಂದರ್ ಯಾದವ್

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ – ರೂ. 100/ –
SC/ST/ಮಾಜಿ ಸೈನಿಕರು – ಶುಲ್ಕವಿಲ್ಲ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01 -11- 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11- 2022

ITBP Head Constable Recruitment:293 Application Invitation for the post of Head Constable

RELATED ARTICLES

Most Popular