Curd Chatney : ಬಿಸಿ ಬಿಸಿ ಅನ್ನದ ಜೊತೆ ಸವಿಯಿರಿ ಸೂಪರ್‌ ಮೊಸರು ಚಟ್ನಿ

Curd Chatney : ಅಡುಗೆ ಮನೆಯಲ್ಲಿ ಇರುವ ಅದೆಷ್ಟೋ ಪದಾರ್ಥಗಳು ನಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ಔಷಧಿಗಳೇ ಆಗಿವೆ. ಅವುಗಳಲ್ಲಿ ಮೊಸರು ಕೂಡ ಒಂದು. ಪ್ರತಿದಿನ ಊಟದ ನಂತರ ಮೊಸರನ್ನು ಸೇವಿಸುವುದರಿಂದ ಜೀರ್ಣಾಂಗ ಕ್ರೀಯೆ ಉತ್ತಮವಾಗಿರುತ್ತದೆ. ಅಲ್ಲದೆ ಮೊಸರಿನ ಇನ್ನೊಂದು ವಿಶೇಷತೆ ಏನೆಂದರೆ ಚರ್ಮದ ಸಮಸ್ಯೆಗಳಿಗೆ ಕೂಡ ಇದು ಪರಿಹಾರವನ್ನು ನೀಡುತ್ತದೆ . ಇದರಲ್ಲಿ ಕ್ಯಾಲ್ಶಿಯಂ, ಪ್ರೊಟೀನ್‌ನಂತಹ ವಿಟಮಿನ್‌ಗಳು ಹೆಚ್ಚಿರುವುದರಿಂದ ಚರ್ಮದ ತೊಂದರೆಗಳಿಗೆ ಸೂಕ್ತ ಮದ್ದು ಎನ್ನಬಹುದು. ಮೊಸರಿನ ಚಟ್ನಿ(Curd Chatney)ಯನ್ನು ಅನೇಕ ರೀತಿಯಲ್ಲಿ ಮಾಡುತ್ತಾರೆ, ನೀವು ಈ ರೀತಿಯ ಚಟ್ನಿ ಟ್ರೈ ಮಾಡಿಲ್ಲ ಅಂದರೆ ಒಮ್ಮೆ ಟ್ರೈ ಮಾಡಿ ನೋಡಿ . ಬಿಸಿ-ಬಿಸಿ ಅನ್ನದ ಜೊತೆ ಸವಿಯಲು ಈ ಚಟ್ನಿ(Curd Chatney) ತುಂಬಾನೇ ಸೂಪರ್ ಆಗಿರುತ್ತೆ. ಅತೀ ಕಡಿಮೆ ಸಮಯಗಳಲ್ಲಿ ತಕ್ಷಣವೇ ಮಾಡಬಹುದಾದಂತಹ ರುಚಿಕರವಾದ ಚಟ್ನಿ ಇದಾಗಿದೆ .

ಹಾಗಾದರೆ ಮೊಸರು ಚಟ್ನಿ(Curd Chatney)ಯನ್ನು ಮಾಡುವುದು ಹೇಗೆ ಎನ್ನುವ ವಿಧಾನವನ್ನು ತಿಳಿಯೋಣ

ಮೊಸರು ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು ;

1 ಕಪ್‌ ಗಟ್ಟಿ ಮೊಸರು
1 ಚಮಚ ಖಾರದ ಪುಡಿ
2 ಚಮಚ ಕೊತ್ತಂಬರಿ ಪುಡಿ
1 ಚಮಚ ಗರಂ ಮಸಾಲ ಪುಡಿ
1 ಈರುಳ್ಳಿ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ರುಚಿಗೆ ತಕ್ಕಷ್ಟು ಉಪ್ಪು
1 ಲೋಟ ನೀರು

ಇದನ್ನೂ ಓದಿ : Soya Chunks Dosa : ಹೈ ಪ್ರೊಟೀನ್ ಇರುವ ಸೋಯಾ ಚಂಕ್ಸ್ ದೋಸೆ ರೆಸಿಪಿ

ಒಗ್ಗರಣೆಗೆ
2 ಚಮಚ ಎಣ್ಣೆ
1/2 ಚಮಚ ಸಾಸಿವೆ
1/4 ಚಮಚ ಜೀರಿಗೆ

ಮೊಸರು ಚಟ್ನಿಯನ್ನು ಮಾಡುವ ವಿಧಾನ ;

ಇದನ್ನೂ ಓದಿ : Fizza Recipe : ಓವನ್‌ ಇಲ್ಲದೆ ಮನೆಯಲ್ಲೇ ಮಾಡಿ ರುಚಿಯಾದ ಪಿಜ್ಜಾ

ಒಂದು ಬೌಲ್‌ಗೆ ಮೊಸರು ಹಾಕಿ ಅದಕ್ಕೆ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಡಿ. ಈಗ ಪಾತ್ರೆಯನ್ನು ಒಲೆಯ ಮೇಲಿಟ್ಟು ಪಾತ್ರೆ ಬಿಸಿಯಾದ ನಂತರ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ ಹಾಕಿ . ಸಾಸಿವೆ ಚಟ್‌ಪಟ್ ಎಂದು ಶಬ್ದ ಮಾಡುವಾಗ ಜೀರಿಗೆಯನ್ನು ಸಹ ಹಾಕಿ, ನಂತರ ಈರುಳ್ಳಿ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಚೆನ್ನಾಗಿ ಈರುಳ್ಳಿ ಬೇಯುವವರೆಗೂ ಕಾಯಿರಿ .ನಂತರ ಕಲಸಿಟ್ಟ ಮೊಸರನ್ನು ಹಾಕಿ ಒಮ್ಮೆ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ . 3-5 ನಿಮಿಷ ಕುದಿಸಿದರೆ ಮೊಸರಿನ ಚಟ್ನಿ ರೆಡಿ.

ಇದನ್ನೂ ಓದಿ : Banana Biscuits : ಮನೆಯಲ್ಲೇ ಮಾಡಿ ಬಾಳೆಹಣ್ಣಿನ ಬಿಸ್ಕೆಟ್

ಮೊಸರನ್ನು ತಿನ್ನುವುದರಿಂದ ನಮಗೆ ಹಲವು ಪ್ರಯೋಜನಗಳು ಸಿಗುತ್ತವೆ . ಮೊಸರನ್ನು ತಿನ್ನುವುದರಿಂದ ಮೂತ್ರಕೋಶದ ಒಳ ಪದರಗಳ ಉರಿಯೂತವನ್ನು ಶಮನಗೊಳಿಸುತ್ತದೆ ಮತ್ತು ಮೂತ್ರ ವಿಸರ್ಜನೆಯನ್ನು ಸರಾಗಗೊಳಿಸುತ್ತದೆ . ಅಲ್ಲದೆ ತೂಕ ಹೆಚ್ಚಿಸಲು ಬಯಸುವ ಮಹಿಳೆಯರು ಇದನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿ ತಿನ್ನಬಹುದು .
ಪ್ರತಿಯೊಬ್ಬರ ಸಾಮಾನ್ಯ ಸಮಸ್ಯೆಯೆಂದರೆ ಅದು ತಲೆಹೊಟ್ಟು . ಅದರ ನಿವಾರಣೆಗಾಗಿ ಹಲವು ರೀತಿಯ ಕೆಮಿಕಲ್‌ ಔಷದಗಳನ್ನು ನಾವು ಬಳಸುತ್ತೇವೆ . ಆದರೆ ಕೆಮಿಕಲ್‌ ಔಷದಿಗಳ ಬದಲಾಗಿ ಹುಳಿ ಮೊಸರನ್ನು ವಾರಕ್ಕೊಮ್ಮೆ ಕೂದಲಿಗೆ ಹೇರ್‌ ಪ್ಯಾಕ್‌ ರೀತಿ ಹಾಕಿಕೊಳ್ಳುವುದರಿಂದ ತಲೆ ಹೊಟ್ಟು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ . ಅಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚಿಸಲು ಕೂಡ ಮೊಸರನ್ನು ಬಳಸಲಾಗುತ್ತದೆ .

Many of the ingredients in the kitchen are medicines that solve our health problems. Yogurt is one of them. Consuming yogurt after meals every day improves digestive function. Another specialty of yogurt is that it also provides relief for skin problems. Vitamins like calcium and protein are high in it, so it can be considered as a suitable medicine for skin problems

Comments are closed.