ನವದೆಹಲಿ : ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗರ ಮೆಟ್ರೋ ಸಿಹಿ ಸುದ್ದಿಯೊಂದನ್ನು ನೀಡಿದೆ. ಮೆಟ್ರೋ ಹಾಗೂ ರೈಲ್ವೇ ಯಲ್ಲಿ ಕೆಲಸ ಮಾಡಲು ಬಯಸುವವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ತಕ್ಷಣವೇ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಪುಣೆ ಮೆಟ್ರೋ ರೈಲು ಯೋಜನೆಗಾಗಿ ಮಹಾರಾಷ್ಟ್ರ ಮೆಟ್ರೋ ರೈಲು ನಿಗಮಕ್ಕೆ ಅನುಭವಿ ಸಿಬ್ಬಂದಿ ನೇಮಕಾತಿ ನಡೆಯಲಿದೆ. ತಕ್ಷಣದ ಅಗತ್ಯವನ್ನು ಪೂರೈಸುವ ಸಲುವಾಗಿ ಮಹಾ ಮೆಟ್ರೋ ಬಂಪರ್ ಖಾಲಿ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ.
ಮೆಟ್ರೋ ರೈಲು, ರೈಲ್ವೇ, ರೈಲ್ವೆ ಪಿಎಸ್ಯು, ಸರ್ಕಾರಿ ಸಂಸ್ಥೆಗಳು, ಪಿಎಸ್‌ಯು ಮತ್ತು ಮೆಟ್ರೋ ಸಂಬಂಧಿತ ಮೂಲಸೌಕರ್ಯ ಮತ್ತು ಕೈಗಾರಿಕೆಗಳಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 14, 2021 (6 PM ವರೆಗೆ) ವರೆಗೆ ಅರ್ಜಿ ಸಲ್ಲಿಸಬಹುದು. ಮಾಹಿತಿ, ಅರ್ಜಿ ವಿವರಗಳಿಗೆ www.punemetrorail.org ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನೇಮಕಾತಿ 2021 : ವೇತನ 81,100 ರೂ., ಪದವಿಧರರಿಗೆ ಸುವರ್ಣಾವಕಾಶ
(Jobs in Metro: Click here to apply)