ಭಾನುವಾರ, ಜೂನ್ 15, 2025
Homejob NewsNHM ಕರ್ನಾಟಕ ನೇಮಕಾತಿ 2021: 3006 CHO ಹುದ್ದೆಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು...

NHM ಕರ್ನಾಟಕ ನೇಮಕಾತಿ 2021: 3006 CHO ಹುದ್ದೆಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

- Advertisement -

ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಕರ್ನಾಟಕ ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು nhm ಕರ್ನಾಟಕ ವೆಬ್‌ಸೈಟ್‌ನಲ್ಲಿ karunadu.karnataka.gov.in ನಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ.

ರಾಜ್ಯದ 25 ಜಿಲ್ಲೆಗಳಲ್ಲಿ (12 ಹೊಸ ಮತ್ತು 13 ಹಳೆಯ ಜಿಲ್ಲೆಗಳು) 3006 ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅಕ್ಟೋಬರ್‌ 18, 2021 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹುದ್ದೆಯ ವಿವರ :

ಹೊಸ ಜಿಲ್ಲೆಗಳು : ಬೆಳಗಾವಿ 476, ತುಮಕೂರು 404, ಮೈಸೂರು 327, ದಕ್ಷಿಣ ಕನ್ನಡ 323, ಮಂಡ್ಯ 267, ಉಡುಪಿ 249, ಚಿಕ್ಕಬಳ್ಳಾಪುರ 161, ಕೊಡಗು 160, ದಾವಣಗೆರೆ 147, ಬೆಂಗಳೂರು ಗ್ರಾಮಾಂತರ 142, ಧಾರವಾಡ 122, ಬೆಂಗಳೂರು ನಗರ 81

ಹಳೆಯ ಜಿಲ್ಲೆಗಳಿಂದ ಖಾಲಿ ಹುದ್ದೆಗಳು : ಉತ್ತರ ಕನ್ನಡ 37, ವಿಜಯಪುರ 17, ಬಾಗಲಕೋಟೆ 17, ಬಳ್ಳಾರಿ 11, ಚಿಕ್ಕಮಗಳೂರು 12, ಕೊಪ್ಪಳ 12, ರಾಯಚೂರು 12, ಕಲಬುರ್ಗಿ 8, ಕೋಲಾರ 9, ಯಾದಗಿರಿ 4, ಮೈಸೂರು 3, ಬೀದರ್ 4, ಹಾವೇರಿ 1

ಅರ್ಹತಾ ಮಾನದಂಡ:

ಬಿಎಸ್ಸಿ/ಪೋಸ್ಟ್ ಬಿಎಸ್ಸಿ ಶುಶ್ರೂಷಾ ಪದವೀಧರರು, ಅರ್ಹ ಪದವಿ ಪ್ರಮಾಣಪತ್ರ ಹೊಂದಿರುವವರು ಮತ್ತು ಕೆಎನ್ ಸಿ/ಐಎನ್ ಸಿಯಲ್ಲಿ ದಾಖಲಾಗಿರುವವರು ಕಂಪ್ಯೂಟರ್ ವ್ಯವಸ್ಥೆ ಹಾಗೂ ಕನ್ನಡದ ಪ್ರಾವೀಣ್ಯತೆಯ ಜ್ಞಾನ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಗಳು 35 ವರ್ಷಕ್ಕಿಂತ ಹೆಚ್ಚಿರಬಾರದು.

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆಯಲ್ಲಿ ಅವರ ಸಾಧನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಕ್ಟೋಬರ್ 23 ರಂದು ಪರೀಕ್ಷೆಯನ್ನು ಆನ್‌ಲೈನ್ ಮೋಡ್‌ನಲ್ಲಿ ನಡೆಸಲಾಗುತ್ತದೆ ಮತ್ತು ಫಲಿತಾಂಶವನ್ನು ಅದೇ ದಿನಾಂಕದಂದು ಪ್ರಕಟಿಸಲಾಗುತ್ತದೆ.

ಅರ್ಜಿ ಶುಲ್ಕ:

ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ 600 ಆಗಿದ್ದು ಅದನ್ನು ಅಭ್ಯರ್ಥಿಗಳು ಆನ್‌ಲೈನ್ ಪ್ರಕ್ರಿಯೆಯ ಮೂಲಕ ಪಾವತಿಸಬೇಕು. SC/ST/Ex-service (ಪುರುಷರು ಮತ್ತು ಮಹಿಳೆಯರು), ಅರ್ಜಿ ಶುಲ್ಕ 300 ರೂ.

ಇದನ್ನೂ ಓದಿ : 606 ಎಸ್‌ಸಿಒ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : Metro Jobs : ಮೆಟ್ರೋದಲ್ಲಿದೆ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

( NHM Recruitment 2021: Apply online here for 3006 CHO posts in Karnataka )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular