ಸೋಮವಾರ, ಏಪ್ರಿಲ್ 28, 2025
Homejob Newsಕೃಷಿ ಇಲಾಖೆ ಹೊಸ ನೇಮಕಾತಿ 2023 : ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ನೇರ ನೇಮಕಾತಿ

ಕೃಷಿ ಇಲಾಖೆ ಹೊಸ ನೇಮಕಾತಿ 2023 : ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ನೇರ ನೇಮಕಾತಿ

- Advertisement -

ಕರ್ನಾಟಕ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಕೃಷಿ ಅಧಿಕಾರಿಗಳ ನೇರ ನೇಮಕಾತಿಗೆ ಅತೀ ಶೀಘ್ರದಲ್ಲೇ (KSDA Recruitment 2023) ಅಧಿಸೂಚನೆ ಪ್ರಕಟಗೊಳ್ಳಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಖಾಲಿ ಇರುವ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಸಂಬಂಧಪಟ್ಟಂತೆ ಬೇಕಾಗುವ ಇತರೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬೇಕಾಗಿದೆ.

KSDA Recruitment 2023 : ಕರ್ನಾಟಕ ಕೃಷಿ ಇಲಾಖೆ ನೇಮಕಾತಿಯ ಸಂಪೂರ್ಣ ವಿವರ :
ಇಲಾಖೆ ಹೆಸರು : ಕರ್ನಾಟಕ ಕೃಷಿ ಇಲಾಖೆ (KSDA)
ಪೋಸ್ಟ್‌ಗಳ ಸಂಖ್ಯೆ : 300 ಹುದ್ದೆಗಳು
ಹುದ್ದೆಯ ಹೆಸರು : ಸಹಾಯಕ ಕೃಷಿ ಅಧಿಕಾರಿ

ವಿದ್ಯಾರ್ಹತೆ :
ಕರ್ನಾಟಕ ಕೃಷಿ ಇಲಾಖೆ ನೇಮಕಾತಿಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೇ. 85ರಷ್ಟು ಕೃಷಿ ಪದವೀಧರರು ಮತ್ತು ಉಳಿದ ಶೇ. 15ರಷ್ಟು ಹುದ್ದೆಗಳಿಗೆ ಬಿ.ಟೆಕ್‌ ಕೃಷಿ ಇಂಜಿನಿಯರಿಂಗ್‌ ಪಾಸ್‌ ಮಾಡಿದವರು ಅಥವಾ ಬಯೋಟೆಕ್ನಾಲಜಿ ಪದವೀಧರರು ಅರ್ಹರಿರುತ್ತಾರೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್‌ ಮಾಹಿತಿ ನೀಡಿದ್ದಾರೆ.

ವೇತನ ಶ್ರೇಣಿ :
ಕರ್ನಾಟಕ ಕೃಷಿ ಇಲಾಖೆ ನೇಮಕಾತಿಯ ಪ್ರಕಾರ, ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ರೂ. 40900 ರಿಂದ 78200 ರೂ.ವರೆಗೆ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ :
ಕರ್ನಾಟಕ ಕೃಷಿ ಇಲಾಖೆ ನೇಮಕಾತಿಯ ಪ್ರಕಾರ, ಈ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ವೃಂದ ಮತ್ತು ಮೀಸಲಾತಿ ನಿಯಮಾನುಸಾರ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಇದನ್ನೂ ಓದಿ : ಅಬಕಾರಿ ಇಲಾಖೆ ನೇಮಕಾತಿ 2023 : ಕಾನ್ಸ್ಟೇಬಲ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : ಬೆಂಗಳೂರು ರೈಲ್ವೆ ನೇಮಕಾತಿ : ಎಸ್‌ಎಸ್‌ಎಲ್‌ಸಿ ಪಾಸ್‌ ಆದವರಿಗೆ ಉದೋಗ್ಯಾವಕಾಶ

ಇದನ್ನೂ ಓದಿ : KMF Shimul Recruitment 2023 : ಕೆಎಮ್‌ಎಫ್‌ನಲ್ಲಿ ಉದ್ಯೋಗಾವಕಾಶ

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ ತಿಳಿಸುತ್ತೇವೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಶೀಘ್ರದಲ್ಲೇ ತಿಳಿಸುತ್ತೇವೆ.

ಇದನ್ನೂ ಓದಿ : ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : ಭಾರತೀಯ ಸೇನೆ ನೇಮಕಾತಿ 2023 : ಅಗ್ನಿಶಾಮಕ, ಸಹಾಯಕ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

KSDA Recruitment 2023 : Department of Agriculture New Recruitment 2023 : Direct Recruitment for the post of Assistant Agriculture Officer

RELATED ARTICLES

Most Popular