ಸೋಮವಾರ, ಏಪ್ರಿಲ್ 28, 2025
Homejob NewsMushroom Training Rudset : ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಅಣಬೆ ಬೇಸಾಯ ತರಬೇತಿ

Mushroom Training Rudset : ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಅಣಬೆ ಬೇಸಾಯ ತರಬೇತಿ

- Advertisement -

ಬ್ರಹ್ಮಾವರ : Mushroom Training Rudset : ಸ್ವ ಉದ್ಯೋಗದ ಕನಸು ಕಾಣಿತ್ತಿರುವವರ ಪಾಲಿಗೆ ಬ್ರಹ್ಮಾವರದ ರುಡ್ ಸೆಟ್ ಸಂಸ್ಥೆ (Rudset Institute Brahmavara) ಸಂಜೀವಿನಿ ಎನಿಸಿಕೊಂಡಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕ್ ನ  ಸಹಯೋಗದೊಂದಿಗೆ ನಡೆಯುತ್ತಿರುವ  ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ಯುವಕ ಯುವತಿಯರಿಗಾಗಿ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಕೊಳ್ಳಲಾಗಿದೆ‌.

ಡಿಸೆಂಬರ್ 26 ರಿಂದ ಜನವರಿ 04ರ ವರೆಗೆ ಒಟ್ಟು 10 ದಿನಗಳ ಕಾಲ‌ ನಡೆಯಲಿರುವ ತರಬೇತಿ ಕಾರ್ಯಕ್ರಮವು ಸಂಪೂರ್ಣ ಉಚಿತವಾಗಿದೆ. ಅಲ್ಲದೇ ಉಚಿತ ಊಟ, ವಸತಿ, ಸಮವಸ್ತ್ರ , ತರಬೇತಿ ಕಿಟ್ ನೊಂದಿಗೆಸಂಪೂರ್ಣ ಉಚಿತ ಅಣಬೆ ಬೇಸಾಯ ತರಬೇತಿಯನ್ನು ನೀಡಲಾಗುತ್ತದೆ. ಸ್ವ ಉದ್ಯೋಗ ಮಾಡಲು ಆಸಕ್ತರು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಅಣಬೆ  ಬೇಸಾಯ ತರಬೇತಿಗೆ ಹೆಚ್ಚು ಬೇಡಿಕೆಯಿದೆ. ಅಣಬೆ ಜೌಷಧೀಯ ಗುಣವನ್ನು ಹೊಂದಿದ್ದು, ಆಹಾರ ವಸ್ತುವಾಗಿಯೂ ಬಳಕೆ ಮಾಡಲಾಗುತ್ತದೆ. ಅಲ್ಲದೇ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಹೊಂದಲಿದೆ. ಈ ತರಬೇತಿಯಲ್ಲಿ ಅಣಬೆ ಬೇಸಾಯ ಮಾಡಿ ಅದರ ವ್ಯವಹಾರ ನಡೆಸಲು‌ ಬೇಕಾದ ಮಾರುಕಟ್ಟೆ ನಡೆಸುವ ಬಗ್ಗೆ, ಬ್ಯಾಂಕಿನ ವ್ಯವಹಾರ , ಸರಕಾರಿ ಯೋಜನೆಗಳ ಬಗ್ಗೆ, ಯೋಜನಾ ವರದಿ ತಯಾರಿಸುವ ಬಗ್ಗೆ, ಸಮಯ ನಿರ್ವಹಣೆ, ಸಂವಹನ ಕೌಶಲ್ಯ, ಸಮಸ್ಯೆ ಬಗೆಹರಿಸುವ ಬಗ್ಗೆ, ಅವಲಂಬನೆ ಇಲ್ಲದೆ ವ್ಯವಹಾರಿಸುವ ಬಗ್ಗೆ, ರಿಸ್ಕ್ ತೆಗೆದುಕೊಳ್ಳವ ರೀತಿಗಳ ಬಗ್ಗೆ, ಗುಣಮಟ್ಟದ ನಿರ್ವಹಣೆ ಬಗ್ಗೆ ಮುಂತಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯ ಜೊತೆಗೆ ವಿಶೇಷವಾದ ತರಬೇತಿ ನೀಡಲಾಗುತ್ತದೆ.

ಈ ತರಬೇತಿ ಪಡೆಯಲು ಬಯಸುವವರು ಗ್ರಾಮೀಣ ಭಾಗದ 18 ರಿಂದ 45 ವರ್ಷದ ಒಳಗಿನವರು, ಬಿಪಿಎಲ್ ಕುಟುಂಬದ ಸದಸ್ಯರಾಗಿ ಇರಬೇಕು, ಕನ್ನಡ ಓದಲು ಬರೆಯಲು ಬರುವ ಮುಂದೇ ಇದನ್ನೇ ವೃತ್ತಿಯನ್ನಾಗಿ ಮಾಡಲು ಇಚ್ಚಿಸುವವರು ನಿಮ್ಮ ಹೆಸರು, ವಿಳಾಸ, ನಿಮ್ಮ ಮೊಬೈಲ್ ನಂ. ಜನ್ಮ ದಿನಾಂಕ ಬರೆದು ನೀವು ಪಡೆಯಲು ಇಚ್ಚಿಸುವ ತರಬೇತಿಯ ಯಾವುದೆಂದು ಬರೆದು, ನಿಮ್ಮ ಹೆಸರು ಇರುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಇರಿಸಿ* ತಕ್ಷಣ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಿನ ವಾಟ್ಸಪ್ ನಂ. ಕಳುಹಿಸಿ ಕೊಡಿ.

ನಿರ್ದೇಶಕರು,
ರುಡ್ ಸೆಟ್ ಸಂಸ್ಥೆ,
52ನೇ ಹೇರೂರು, ಬ್ರಹ್ಮಾವರ-576213
ಉಡುಪಿ ಜಿಲ್ಲೆ
ವಾಟ್ಸಪ್ ನಂ. 9632561145, 9448348569, 9844086383, 9611544930, 9591233748, 8861325564
ವೆಬ್ ಸೈಟ್ ನ  ಮೂಲಕ ಸಹ ಅರ್ಜಿಸಲ್ಲಿಸಬಹುದು.
www.rudsetitraining.org
ಇಮೇಲ್ ವಿಳಾಸ :
rudbvr@gmail.com

ಇದನ್ನೂ ಓದಿ : UAS Dharwad Recruitment : ಡಿಪ್ಲೊಮಾ ಆದವರಿಗೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಉದ್ಯೋಗಾವಕಾಶ

ಇದನ್ನೂ ಓದಿ : Karnataka Bank Recruitment 2022 : ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

Mushroom Training For Youth in Rudset Institute Brahmavara

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular