Assault by students: ಅಯ್ಯಪ್ಪ ಮಾಲಾಧಾರಿಗೆ ವಿದ್ಯಾರ್ಥಿಗಳಿಂದ ಹಲ್ಲೆ: ಮಾಲೆ ಧರಿಸಿ ಶಾಲೆಗೆ ಬರದಂತೆ ಶಿಕ್ಷಕರಿಂದ ಸೂಚನೆ

ಮಂಗಳೂರು: (Assault by students) ಅನ್ಯಕೋಮಿನ ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಬಂದಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದು, ಶಾಲೆಯ ಶಿಕ್ಷಕರು ವಿದ್ಯಾರ್ಥಿಗೆ ಮಾಲೆ ಧರಿಸಿ ಶಾಲೆಗೆ ಬರದಂತೆ ತಡೆದಿರುವ ಆರೋಪ ಮಂಗಳೂರಿನಲ್ಲಿ ಕೇಳಿಬಂದಿದೆ. ಈ ಘಟನೆ ವಿರುದ್ದ ಹಲ್ಲೆಗೊಳಗಾದ ಮಾಲಾಧಾರಿಯ ಪೋಷಕರು ಕಂಕನಾಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಂಗಳೂರು ನಗರದ ಕಪತಾನಿಯೋ ಶಾಲೆಯ ವಿದ್ಯಾರ್ಥಿಗೆ ಅದೇ ಶಾಲೆಯ ಅನ್ಯಕೋಮಿನ ನಾಲ್ವರು ಹಿರಿಯ ವಿದ್ಯಾರ್ಥಿಗಳು ಹಲ್ಲೆ (Assault by students) ನಡಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ತರಗತಿಯ ಮಂಜುನಾಥ್ ಎಂಬ ವಿದ್ಯಾರ್ಥಿಗೆ ಹೊಡೆದ ಬಗ್ಗೆ ಶಿಕ್ಷಕರಿಗೆ ದೂರು ಕೊಡಲಾಗಿತ್ತು. ಈ ವೇಳೆ ಹಲ್ಲೆಗೊಳಗಾದ ವಿದ್ಯಾರ್ಥಿಗೆ ಕಾಲು ಅಡ್ಡ ಇಟ್ಟು ಹಿರಿಯ ವಿದ್ಯಾರ್ಥಿಗಳು ಹೊಡೆಯಲು ಬಂದಿದ್ದರು. ಮಾಲೆ ಹಾಕಿದ ಮೇಲೆ ‌ಮತ್ತು ನಂತರವೂ ಕೂಡ ಹಲ್ಲೆಗೆ ಮುಂದಾಗಿದ್ದಾರೆ. ಶಿಕ್ಷಕರ ಮುಂದೆಯೇ ಎದೆಗೆ ಹೊಡೆದು, ಅವರ ಎದುರಲ್ಲೇ ಹಲ್ಲೆ ಮಾಡಿದ್ದಾರೆ. ಆ ಬಳಿಕ ಶಿಕ್ಷಕರು ಮಾಲಾಧಾರಿ ವಿದ್ಯಾರ್ಥಿಯನ್ನು ಕರೆದು ಮಾಲೆ ಹಾಕಿ ಶಾಲೆಗೆ ಬರಬೇಡಿ ಎಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನೂ ಹಲ್ಲೆಗೊಳಗಾದ ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿಗೆ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಪ್ರಕರಣದ ಬಗ್ಗೆ ಹಲ್ಲೆಗೊಳಗಾದ ಮಾಲಾಧಾರಿ ವಿದ್ಯಾರ್ಥಿ ಹೇಳಿಕೆಯನ್ನು ನೀಡಿದ್ದು, “ಮಾಲೆ ಹಾಕಿ ಶಾಲೆಗೆ ಯಾಕೆ ಬರ್ತೀರಾ ಅಂತ ನಮಗೆ ಸಿಸ್ಟರ್ ಕೇಳಿದ್ರು. ಹಲ್ಲೆ ಮಾಡಿದವರನ್ನ ಶಾಲೆಗೆ ಬನ್ನಿ, ನಮಗೆ ಬರಬೇಡಿ ಅಂತಿದಾರೆ.‌ ಶಾಲೆಯ ಹೊರಗೂ ಬೈದು ನಮ್ಮ ಮೇಲೆ ಹಲ್ಲೆ ‌ಮಾಡಿದ್ದಾರೆ.‌ ಜನ ಸೇರಿದಾಗ ಅವರು ಬಸ್ಸು ಹತ್ತಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ‌. ಎದೆಗೆ ಹೊಡೆದು ಮಾಲೆ ಕಟ್ ಮಾಡಿ ಡ್ರೆಸ್ ಗೆ ಹಾನಿ ಮಾಡಿದ್ದಾರೆ. ನಾನು ಎಂಟನೇ ತರಗತಿ ವಿದ್ಯಾರ್ಥಿ, ಅವರು ಒಂಭತ್ತನೇ ತರಗತಿ ವಿದ್ಯಾರ್ಥಿಗಳು. ರಿಯಾಜ್, ನಫೀಸ್ ಮತ್ತು ಹತ್ತು ಹದಿನೈದು ಜನ ನನ್ನನ್ನು ಹೊಡೆದಿದ್ದಾರೆ “ಎಂದು ಹೇಳಿದ್ದಾರೆ.

ಶಬರಿ ಮಲೆ ಅಯ್ಯಪ್ಪ ಮಾಲೆ ಹಾಕಿದ ಕಾರಣಕ್ಕೆ ನನ್ನ ಮಗನಿಗೆ ಹೊಡೆದಿದ್ದಾರೆ. ಅವರು ಶಿಕ್ಷಕರ ಬಳಿ‌ ಅನುಮತಿ ಪಡೆದೇ ಮಾಲೆ ಹಾಕಿದ್ದು, ಆದರೆ ಈಗ ಶಿಕ್ಷಕರು ಮಾಲೆ ಯಾಕೆ ಹಾಕಿದ್ದೀರಾ ,‌ ಮಾಲೆ ಹಾಕಿದವರು ಶಾಲೆಗೆ ಬರಬೇಡಿ ಅಂತಿದಾರೆ. ಈ ಶಾಲೆಯಲ್ಲಿ ಹಿಂದೂಗಳನ್ನ ಬಹಳ ಕೀಳಾಗಿ ನೋಡುತ್ತಾ ಇದ್ದಾರೆ‌. ಮಗನಿಗೆ ಬೇರೆ ತರಗತಿ ಮಕ್ಕಳು ಹೊಡೆಯುವಾಗ ಎಲ್ಲಾ ಶಿಕ್ಷಕರು ನಿಂತು ನೋಡುತ್ತಿದ್ದರು. ಶಾಲೆಗೆ ನಾವು ಕರೆ ಮಾಡಿದಾಗ ನಮಗೆ ಪುರುಸೋತ್ತಿಲ್ಲ ಅಂತಾ ಹೇಳುತ್ತಾರೆ. ನಾವು ಕಂಕನಾಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ‌. ಶಾಲಾ ಸಮಿತಿ ಎರಡು ದಿನಗಳಲ್ಲಿ ತೀರ್ಮಾನ ಮಾಡ್ತೇವೆ ಅಂದಿದ್ದಾರೆ‌. ಆ ಹೊಡೆದ ಮಕ್ಕಳನ್ನು ಡಿಬಾರ್ ಮಾಡಬೇಕು, ನಮಗೆ ನ್ಯಾಯ ಕೊಡಬೇಕು ಎಂದು ಹಲ್ಲೆಗೊಳಗಾದ ಮಾಲಾಧಾರಿ ವಿದ್ಯಾರ್ಥಿಯ ತಂದೆ ಹೇಳಿದ್ದಾರೆ.

ಇದನ್ನೂ ಓದಿ : ಶಿಕ್ಷಕರು ಮಕ್ಕಳೊಂದಿಗೆ ಸೂಕ್ಷ್ಮವಾಗಿ ವರ್ತಿಸಿ : ಅರಿವು ಕಾರ್ಯಕ್ಕೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಸೂಚನೆ

(Assault by students) An allegation has been heard in Mangalore that foreign students assaulted a student who had come to school wearing an Ayyappa garland, and the school teachers had prevented the student from coming to school wearing the garland. The parents of Maladhari, who was assaulted, filed a complaint in the Kankanadi Police Station against this incident.

Comments are closed.