ಸೋಮವಾರ, ಜೂನ್ 23, 2025
HomeIndia NewsRailway Recruitment 2025 : ರೈಲ್ವೆ ಇಲಾಖೆಯಲ್ಲಿ SSLC ಪಾಸ್‌, ಪದವೀಧರರಿಗೆ ಸುವರ್ಣಾವಕಾಶ

Railway Recruitment 2025 : ರೈಲ್ವೆ ಇಲಾಖೆಯಲ್ಲಿ SSLC ಪಾಸ್‌, ಪದವೀಧರರಿಗೆ ಸುವರ್ಣಾವಕಾಶ

* RRB ಟೆಕ್ನಿಷಿಯನ್: ಸುಮಾರು 6180 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 28, 2025 ರವರೆಗೆ ಇದೆ. *RRB ಗ್ರೂಪ್ D: ಬರೋಬ್ಬರಿ 32,438 ಹುದ್ದೆಗಳಿಗೆ ನೇಮಕಾತಿ *RRB NTPC: ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. *RRB ಅಸಿಸ್ಟೆಂಟ್ ಲೋಕೋ ಪೈಲಟ್ (ALP): ಸುಮಾರು 9970 ಹುದ್ದೆಗಳಿಗೆ ನೇಮಕಾತಿ. *RRC SECR (South East Central Railway): ಗ್ರೂಪ್ 'C' ಹುದ್ದೆಗಳಿಗೆ (02 ಪೋಸ್ಟ್‌ಗಳು)

- Advertisement -

Railway Recruitment 2025 : ಭಾರತೀಯ ರೈಲ್ವೆಯು ದೇಶದ ಅತಿದೊಡ್ಡ ಉದ್ಯೋಗದಾತ ಸಂಸ್ಥೆಗಳಲ್ಲಿ ಒಂದಾಗಿದ್ದು, ವಿವಿಧ ವಿದ್ಯಾರ್ಹತೆ ಮತ್ತು ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ನಿರಂತರವಾಗಿ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ರೈಲ್ವೆ ನೇಮಕಾತಿ ಮಂಡಳಿ (RRB) ಮತ್ತು ರೈಲ್ವೆ ನೇಮಕಾತಿ ಕೋಶ (RRC)ಗಳು ರೈಲ್ವೆಯ ವಿವಿಧ ವಲಯಗಳು ಮತ್ತು ವಿಭಾಗಗಳಲ್ಲಿ ನೇಮಕಾತಿಗಳನ್ನು ನಡೆಸುತ್ತವೆ.

Railway Recruitment 2025 : ರೈಲ್ವೆ ಇಲಾಖೆಯಲ್ಲಿ ಲಭ್ಯವಿರುವ ಪ್ರಮುಖ ಹುದ್ದೆಗಳು

ಗ್ರೂಪ್ ‘D’ ಹುದ್ದೆಗಳು (Group D):

  • ಟ್ರ್ಯಾಕ್ ಮೈಂಟೇನರ್ (Track Maintainer)
  • ಪಾಯಿಂಟ್ಸ್‌ಮನ್ (Pointsman)
  • ಹೆಲ್ಪರ್ (Helper)
  • ಗೆಟ್‌ಮ್ಯಾನ್ (Gateman)
  • ಪೋರ್ಟರ್ (Porter)
  • ಸ್ವೀಪರ್ (Sweeper)

ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ ಅಥವಾ ITI/ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಸರ್ಟಿಫಿಕೇಟ್.

ನಾನ್-ಟೆಕ್ನಿಕಲ್ ಪಾಪ್ಯುಲರ್ ಕ್ಯಾಟಗರೀಸ್ (NTPC):

  • ಜ್ಯೂನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್ (Junior Clerk-cum-Typist)
  • ಅಕೌಂಟ್ಸ್ ಕ್ಲರ್ಕ್-ಕಮ್-ಟೈಪಿಸ್ಟ್ (Accounts Clerk-cum-Typist)
  • ಟಿಕೆಟ್ ಕ್ಲರ್ಕ್ (Ticket Clerk)
  • ಟ್ರೇನ್ಸ್ ಕ್ಲರ್ಕ್ (Trains Clerk)
  • ಕಮರ್ಷಿಯಲ್-ಕಮ್-ಟಿಕೆಟ್ ಕ್ಲರ್ಕ್ (Commercial-cum-Ticket Clerk)
  • ಗುಡ್ಸ್ ಗಾರ್ಡ್ (Goods Guard)
  • ಸೀನಿಯರ್ ಕಮರ್ಷಿಯಲ್-ಕಮ್-ಟಿಕೆಟ್ ಕ್ಲರ್ಕ್ (Senior Commercial-cum-Ticket Clerk)
  • ಸೀನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್ (Senior Clerk-cum-Typist)
  • ಜ್ಯೂನಿಯರ್ ಅಕೌಂಟ್ ಅಸಿಸ್ಟೆಂಟ್-ಕಮ್-ಟೈಪಿಸ್ಟ್ (Junior Account Assistant-cum-Typist)
  • ಸೀನಿಯರ್ ಟೈಮ್ ಕೀಪರ್ (Senior Time Keeper)
  • ಕಮರ್ಷಿಯಲ್ ಅಪ್ರೆಂಟಿಸ್ (Commercial Apprentice)
  • ಸ್ಟೇಷನ್ ಮಾಸ್ಟರ್ (Station Master)

ವಿದ್ಯಾರ್ಹತೆ: 12ನೇ ತರಗತಿ ಉತ್ತೀರ್ಣ ಅಥವಾ ಪದವಿ.

ಅಸಿಸ್ಟೆಂಟ್ ಲೋಕೋ ಪೈಲಟ್ (ALP) & ಟೆಕ್ನಿಷಿಯನ್ (Technician):

  • ಸಹಾಯಕ ಲೋಕೋ ಪೈಲಟ್ (Assistant Loco Pilot)
  • ವಿವಿಧ ಟ್ರೇಡ್‌ಗಳಲ್ಲಿ ಟೆಕ್ನಿಷಿಯನ್ (Technician in various trades)

ವಿದ್ಯಾರ್ಹತೆ: 10ನೇ ತರಗತಿ ಜೊತೆಗೆ ITI, ಅಥವಾ 12ನೇ ತರಗತಿ (ಭೌತಶಾಸ್ತ್ರ ಮತ್ತು ಗಣಿತದೊಂದಿಗೆ), ಅಥವಾ ಎಂಜಿನಿಯರಿಂಗ್ ಡಿಪ್ಲೊಮಾ.

Also Read : ಜಸ್ಟ್‌ 10ನೇ ತರಗತಿ ಉತ್ತೀರ್ಣರಾದವರಿಗೆ ಸರಕಾರಿ ಉದ್ಯೋಗ : ಯಾವ ಇಲಾಖೆಯಲ್ಲಿ ಯಾವಾಗ ನೇಮಕಾತಿ

ಜ್ಯೂನಿಯರ್ ಇಂಜಿನಿಯರ್ (JE):

  • ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಟೆಲಿಕಮ್ಯುನಿಕೇಶನ್ ಇತ್ಯಾದಿ ವಿಭಾಗಗಳಲ್ಲಿ ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳು.
  • ವಿದ್ಯಾರ್ಹತೆ: ಸಂಬಂಧಿತ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ಪದವಿ.

ಪ್ಯಾರಾಮೆಡಿಕಲ್ ಹುದ್ದೆಗಳು (Paramedical):

ನರ್ಸಿಂಗ್ ಸೂಪರಿಂಟೆಂಡೆಂಟ್, ಹೆಲ್ತ್ ಅಂಡ್ ಮಲೇರಿಯಾ ಇನ್ಸ್‌ಪೆಕ್ಟರ್, ಫಾರ್ಮಾಸಿಸ್ಟ್, ಇಸಿಜಿ ಟೆಕ್ನಿಷಿಯನ್, ಲ್ಯಾಬ್ ಅಸಿಸ್ಟೆಂಟ್, ಡೈಟೀಷಿಯನ್ ಇತ್ಯಾದಿ.

ವಿದ್ಯಾರ್ಹತೆ: ಸಂಬಂಧಿತ ವೈದ್ಯಕೀಯ/ಪ್ಯಾರಾಮೆಡಿಕಲ್ ಡಿಪ್ಲೊಮಾ ಅಥವಾ ಪದವಿ.

ರಕ್ಷಣಾ ಸಿಬ್ಬಂದಿ (RPF – Railway Protection Force):

  • ಕಾನ್ಸ್‌ಟೇಬಲ್ (Constable)
  • ಸಬ್-ಇನ್ಸ್‌ಪೆಕ್ಟರ್ (Sub-Inspector)

ವಿದ್ಯಾರ್ಹತೆ: 10ನೇ ತರಗತಿ (ಕಾನ್ಸ್‌ಟೇಬಲ್) ಅಥವಾ ಪದವಿ (ಸಬ್-ಇನ್ಸ್‌ಪೆಕ್ಟರ್). ದೈಹಿಕ ಸಾಮರ್ಥ್ಯ ಪರೀಕ್ಷೆ ಕಡ್ಡಾಯ.

Railway Recruitment 2025 : ನೇಮಕಾತಿ ಪ್ರಕ್ರಿಯೆ

ಸಾಮಾನ್ಯವಾಗಿ ರೈಲ್ವೆ ನೇಮಕಾತಿ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT): ಬಹುತೇಕ ಎಲ್ಲ ಹುದ್ದೆಗಳಿಗೂ ಇದು ಮೊದಲ ಹಂತ.
ದೈಹಿಕ ಸಾಮರ್ಥ್ಯ ಪರೀಕ್ಷೆ (PET): ಕೆಲವು ಹುದ್ದೆಗಳಿಗೆ (ವಿಶೇಷವಾಗಿ ಗ್ರೂಪ್ ‘D’ ಮತ್ತು RPF) ಕಡ್ಡಾಯ.
ಕೌಶಲ್ಯ ಪರೀಕ್ಷೆ (Skill Test): ಟೈಪಿಸ್ಟ್, ALP, ಟೆಕ್ನಿಷಿಯನ್ ಮುಂತಾದ ಹುದ್ದೆಗಳಿಗೆ ಇದು ಅಗತ್ಯವಿರಬಹುದು.

ದಾಖಲೆ ಪರಿಶೀಲನೆ (Document Verification):
ವೈದ್ಯಕೀಯ ಪರೀಕ್ಷೆ (Medical Examination):

Railway Recruitment 2025 : ಯಾವ ಹುದ್ದೆಗಳಿಗೆ ನೇಮಕಾತಿ

  • RRB ಟೆಕ್ನಿಷಿಯನ್: ಸುಮಾರು 6180 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 28, 2025 ರವರೆಗೆ ಇದೆ.
  • RRB ಗ್ರೂಪ್ D: ಬರೋಬ್ಬರಿ 32,438 ಹುದ್ದೆಗಳಿಗೆ ನೇಮಕಾತಿ
  • RRB NTPC: ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
  • RRB ಅಸಿಸ್ಟೆಂಟ್ ಲೋಕೋ ಪೈಲಟ್ (ALP): ಸುಮಾರು 9970 ಹುದ್ದೆಗಳಿಗೆ ನೇಮಕಾತಿ.
  • RRC SECR (South East Central Railway): ಗ್ರೂಪ್ ‘C’ ಹುದ್ದೆಗಳಿಗೆ (02 ಪೋಸ್ಟ್‌ಗಳು)

10ನೇ/12ನೇ/ITI/ಡಿಪ್ಲೊಮಾ/ಪದವಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು (ಕೊನೆಯ ದಿನಾಂಕ: ಜುಲೈ 20, 2025).

ನಾರ್ದರ್ನ್ ರೈಲ್ವೆ: ಪಾರ್ಟ್ ಟೈಮ್ ಡೆಂಟಲ್ ಸರ್ಜನ್, ಕಲ್ಚರಲ್ ಕೋಟಾ, ಸ್ಕೌಟ್ಸ್ & ಗೈಡ್ಸ್ ಕೋಟಾದಂತಹ ಹುದ್ದೆಗಳಿಗೂ ನೇಮಕಾತಿ ನಡೆಯುತ್ತಿದೆ.

Railway Recruitment 2025 SSLC Pass, Golden Opportunity for Graduates Kannada News

ಉದ್ಯೋಗಾವಕಾಶಗಳನ್ನು ಕಂಡುಹಿಡಿಯುವುದು ಹೇಗೆ ?

ಅಧಿಕೃತ RRB ವೆಬ್‌ಸೈಟ್‌ಗಳು: ಭಾರತದಲ್ಲಿ 21 ರೈಲ್ವೆ ನೇಮಕಾತಿ ಮಂಡಳಿಗಳಿವೆ. ನಿಮ್ಮ ಪ್ರದೇಶದ RRB ವೆಬ್‌ಸೈಟ್‌ಗೆ ಭೇಟಿ ನೀಡಿ (ಉದಾ: rrbmumbai.gov.in, rrbbnc.gov.in ಬೆಂಗಳೂರು).

ಅಧಿಕೃತ RRC ವೆಬ್‌ಸೈಟ್‌ಗಳು: ರೈಲ್ವೆ ವಲಯಗಳ ನೇಮಕಾತಿ ಕೋಶಗಳ ವೆಬ್‌ಸೈಟ್‌ಗಳನ್ನು ಪರಿಶೀಲಿಸಿ rrcnr.org – Northern Railway, rrcmas.in – Southern Railway).

Also Read : Post Office Recruitment 2025 : 10ನೇ ತರಗತಿ ಉತ್ತೀರ್ಣರಾದ್ರೆ ಅಂಚೆ ಇಲಾಖೆಯಲ್ಲಿ ಉದ್ಯೋಗ : 138 ಹುದ್ದೆ, 30 ಸಾವಿರ ವೇತನ

ಪ್ರಮುಖ ಜಾಬ್ ಪೋರ್ಟಲ್‌ಗಳಲ್ಲಿ ನೇಮಕಾತಿಯ ಮಾಹಿತಿ ಲಭ್ಯ ಇರಲಿದೆ. ಅಷ್ಟೇ ಅಲ್ಲಾ, ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಉದ್ಯೋಗ ಸುದ್ದಿ ಪತ್ರಿಕೆಗಳು: ಪ್ರತಿ ವಾರ ಬಿಡುಗಡೆಯಾಗುವ ‘ಎಂಪ್ಲಾಯ್‌ಮೆಂಟ್ ನ್ಯೂಸ್’ (Employment News) ಪತ್ರಿಕೆಯನ್ನೂ ಗಮನಿಸಿ.

ನಿಮ್ಮ ವಿದ್ಯಾರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ನೀವು ರೈಲ್ವೆಯಲ್ಲಿ ಸೂಕ್ತ ಉದ್ಯೋಗವನ್ನು ಹುಡುಕಬಹುದು. ಅರ್ಜಿ ಸಲ್ಲಿಸುವ ಮೊದಲು ಪ್ರತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಬಹಳ ಮುಖ್ಯ.

  • Railway Recruitment 2025 SSLC Pass, Golden Opportunity for Graduates
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular