SBI recruitment 2023 : ಭಾರತದ ಸರಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುವ ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸೆಪ್ಟೆಂಬರ್ 29, 2023ಕ್ಕೆ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ :
ಎಸ್‌ಬಿಐ ಆಹ್ವಾನಿಸಿರುವ ಉದ್ಯೋಗಕ್ಕೆ ಸೇರಬೇಕಾದ್ರೆ ಕನಿಷ್ಠ ಪದವಿ ಶಿಕ್ಷಣವನ್ನು ಪೂರೈಸಿರಬೇಕು. ಆನ್‌ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಉಳಿದಂತೆ ವಯಸ್ಸು, ವಿದ್ಯಾರ್ಹತೆ, ಷರತ್ತು ಸೇರಿದಂತೆ ಹಲವು ಮಾನದಂಡಗಳು ಈ ಕೆಳಗಿನಂತಿದೆ.

ಎಸ್‌ಬಿಐ ಹುದ್ದೆಯ ಅಧಿಸೂಚನೆಯ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಹುದ್ದೆಗಳ ಸಂಖ್ಯೆ : 6160 ಹುದ್ದೆಗಳು
ಉದ್ಯೋಗ ಸ್ಥಳ : ಭಾರತ ದೇಶದಾದ್ಯಂತ
ಪೋಸ್ಟ್ ಹೆಸರು : ಅಪ್ರೆಂಟಿಸ್
ವೇತನ : ರೂ. 15,000/- ಪ್ರತಿ ತಿಂಗಳು
ಎಸ್‌ಬಿಐ ರಾಜ್ಯವಾರು ಹುದ್ದೆಗಳ ವಿವರ :
ಗುಜರಾತ್ : 291 ಹುದ್ದೆಗಳು
ಆಂಧ್ರ ಪ್ರದೇಶ : 390 ಹುದ್ದೆಗಳು
ಕರ್ನಾಟಕ : 175 ಹುದ್ದೆಗಳು
ಛತ್ತೀಸ್‌ಗಢ : 99 ಹುದ್ದೆಗಳು
ಮಧ್ಯಪ್ರದೇಶ : 298 ಹುದ್ದೆಗಳು
ಒಡಿಶಾ : 205 ಹುದ್ದೆಗಳು
ಯುಟಿ ಲಡಾಖ್ : 10 ಹುದ್ದೆಗಳು
ಹಿಮಾಚಲ ಪ್ರದೇಶ : 200 ಹುದ್ದೆಗಳು
ಯುಟಿ ಚಂಡೀಗಢ : 25 ಹುದ್ದೆಗಳು
ಪಂಜಾಬ್ : 365 ಹುದ್ದೆಗಳು
ಜಮ್ಮು ಮತ್ತು ಕಾಶ್ಮೀರ : 100 ಹುದ್ದೆಗಳು
ಹರಿಯಾಣ : 150 ಹುದ್ದೆಗಳು
ಯುಟಿ ಪಾಂಡಿಚೇರಿ : 26 ಹುದ್ದೆಗಳು
ತಮಿಳುನಾಡು : 648 ಹುದ್ದೆಗಳು
ಅರುಣಾಚಲ ಪ್ರದೇಶ : 20 ಹುದ್ದೆಗಳು
ನಾಗಾಲ್ಯಾಂಡ್ : 21 ಹುದ್ದೆಗಳು
ಮೇಘಾಲಯ : 31 ಹುದ್ದೆಗಳು
ತ್ರಿಪುರ : 22 ಹುದ್ದೆಗಳು
ಅಸ್ಸಾಂ : 121 ಹುದ್ದೆಗಳು
ಮಿಜೋರಾಂ : 17 ಹುದ್ದೆಗಳು
ಮಣಿಪುರ : 20 ಹುದ್ದೆಗಳು
ತೆಲಂಗಾಣ : 125 ಹುದ್ದೆಗಳು
ರಾಜಸ್ಥಾನ : 925 ಹುದ್ದೆಗಳು
ಪಶ್ಚಿಮ ಬಂಗಾಳ : 328 ಹುದ್ದೆಗಳು
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು : 8 ಹುದ್ದೆಗಳು
ಸಿಕ್ಕಿಂ : 10 ಹುದ್ದೆಗಳು
ಉತ್ತರ ಪ್ರದೇಶ : 412 ಹುದ್ದೆಗಳು
ಮಹಾರಾಷ್ಟ್ರ : 466 ಹುದ್ದೆಗಳು
ಗೋವಾ : 26 ಹುದ್ದೆಗಳು
ಉತ್ತರಾಖಂಡ : 125 ಹುದ್ದೆಗಳು
ಬಿಹಾರ : 50 ಹುದ್ದೆಗಳು
ಜಾರ್ಖಂಡ್ : 27 ಹುದ್ದೆಗಳು
ಕೇರಳ : 424 ಹುದ್ದೆಗಳು
ಶೈಕ್ಷಣಿಕ ಅರ್ಹತೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು. ಇದನ್ನೂ ಓದಿ : ಕೆಪಿಎಸ್‌ಸಿ ನೇಮಕಾತಿ : ಪದವೀಧರರಿಗೆ ಸರಕಾರಿ ಉದ್ಯೋಗ, 62600 ರೂ. ವೇತನ, 230 ವಾಣಿಜ್ಯ ತೆರಿಗೆ ನಿರೀಕ್ಷಕರ ಹುದ್ದೆ
ವಯಸ್ಸಿನ ಮಿತಿ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-08-2023 ರಂತೆ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ
ಅರ್ಜಿ ಶುಲ್ಕ:
ಸಾಮಾನ್ಯ/EWS/OBC ಅಭ್ಯರ್ಥಿಗಳು : ರೂ. 300/-
SC/ ST/ PWD ಅಭ್ಯರ್ಥಿಗಳು : ಇಲ್ಲ
ಪಾವತಿ ವಿಧಾನ : ಆನ್‌ಲೈನ್

ಆಯ್ಕೆ ಪ್ರಕ್ರಿಯೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸ್ಥಳೀಯ ಭಾಷಾ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಹಾಗೂ ಕೆಳಗೆ ತಿಳಿಸಿದ ವಿಧಾನದಂತೆ ಆಯ್ಕೆ ಮಾಡಲಾಗುತ್ತದೆ. ಇದನ್ನೂ ಓದಿ : HESCOM Recruitment 2023 : ಐಟಿಐ ಉತ್ತೀರ್ಣರಾಗಿದ್ದೀರಾ ? ಹಾಗಾದ್ರೆ ಹೆಸ್ಕಾಂನ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
SBI ಅಪ್ರೆಂಟಿಸ್ ನೇಮಕಾತಿ 2023 ಪರೀಕ್ಷೆಯ ಮಾದರಿ
ಋಣಾತ್ಮಕ ಗುರುತು: 1/4 ನೇ
ಸಮಯದ ಅವಧಿ: 1 ಗಂಟೆ
ಪರೀಕ್ಷೆಯ ವಿಧಾನ: ಆಬ್ಜೆಕ್ಟಿವ್ ಟೈಪ್ ಟೆಸ್ಟ್
ವಿಷಯದ ಪ್ರಶ್ನೆಗಳು ಸಮಯವನ್ನು ಗುರುತಿಸುತ್ತದೆ
ಸಾಮಾನ್ಯ/ ಆರ್ಥಿಕ ಅರಿವು 25 25 15 ನಿಮಿಷ
ಸಾಮಾನ್ಯ ಇಂಗ್ಲೀಷ್ 25 25 15 ನಿಮಿಷ
ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ 25 25 15 ನಿಮಿಷ
ತಾರ್ಕಿಕ ಸಾಮರ್ಥ್ಯ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್ 25 25 15 ನಿಮಿಷ
ಒಟ್ಟು 100 100 60 ನಿಮಿಷ
ಪ್ರಮುಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01 ಸೆಪ್ಟಂಬರ್ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29 ಸೆಪ್ಟಂಬರ್ 2023
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 29 ಸೆಪ್ಟಂಬರ್ 2023
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI recruitment 2023) ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕದಲ್ಲಿಯೇ 175 ಹುದ್ದೆಗಳಿದ್ದು, ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 29, 2023 ಕೊನೆಯ ದಿನವಾಗಿದೆ.
SBI recruitment 2023 : Job opportunity for graduates in State Bank of India