(Banana Kesaribath Recipe)ತುಪ್ಪ ಬಳಸದೆ ಕೇಸರಿ ಬಾತ್ ಮಾಡುವುದು ಬಹಳ ಕಡಿಮೆ ಆದರೆ ಬಾಳೆಹಣ್ಣಿನ ಕೇಸರಿಬಾತ್ ಅನ್ನು ತುಪ್ಪ ಬಳಸದೆ ಮಾಡಬಹುದು. ತುಪ್ಪ ಬಳಸದೆ ಬಾಳೆಹಣ್ಣಿನ ಕೇಸರಿ ಬಾತ್ ತಯಾರಿಸಲು ಯಾವೆಲ್ಲಾ ಪದಾರ್ಥಗಳು ಬೇಕು ಮತ್ತು ಹೇಗೆ ತಯಾರಿಸುವುದು ಎಂಬುದರ ಕುರಿತು ಮಾಹಿತಿ ತಿಳಿಯೋಣ.
(Banana Kesaribath Recipe)ಬೇಕಾಗುವ ಸಾಮಾಗ್ರಿಗಳು:
- ರವೆ
- ಸಕ್ಕರೆ
- ಕೊಬ್ಬರಿ ಎಣ್ಣೆ
- ಗೊಡಂಬಿ
- ದ್ರಾಕ್ಷಿ
- ಬಾದಾಮಿ
- ಏಲಕ್ಕಿ ಪುಡಿ
- ಕೇಸರಿ
- ಬಾಳೆಹಣ್ಣು
ಮಾಡುವ ವಿಧಾನ
ಬಾಣಲೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ಅದರಲ್ಲಿ ಗೊಡಂಬಿ, ದ್ರಾಕ್ಷಿ ಹಾಕಿ ಹುರಿದುಕೊಂಡು ಒಂದು ಬೌಲ್ ನಲ್ಲಿ ಇಟ್ಟುಕೊಳ್ಳಬೇಕು. ನಂತರ ಅದೆ ಎಣ್ಣೆಯಲ್ಲಿ ರವೆಯನ್ನು ಹಾಕಿ ಕಂದುಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಬೇಕು. ಹುರಿದರವೆಯನ್ನು ಬೌಲ್ ನಲ್ಲಿ ಇಟ್ಟುಕೊಳ್ಳಬೇಕು. ಬಾಣಲೆಯಲ್ಲಿ ನೀರನ್ನು ಹಾಕಿಕೊಂಡು ಕಟ್ ಮಾಡಿಕೊಂಡ ಬಾಳೆಹಣ್ಣು ಹಾಕಬೇಕು ನಂತರ ಅದಕ್ಕೆ ರವೆಯನ್ನು ಹಾಕಿ ನೀರು ಇಂಗಿದ ನಂತರ ಸಕ್ಕರೆ ಮತ್ತು ಬೆಚ್ಚಗಿನ ನೀರಲ್ಲಿ ನೆನಸಿದ ಕೇಸರಿಯನ್ನು ಹಾಕಿ ಮುಚ್ಚುಳವನ್ನು ಮುಚ್ಚಬೇಕು. ನಂತರ ಏಲಕ್ಕಿ ಪುಡಿ, ಹುರಿದುಕೊಂಡ ಗೊಡಂಬಿ , ದ್ರಾಕ್ಷಿ ಹಾಕಿ ಕಲಸಿಕೊಂಡು ಬೌಲ್ ಗೆ ಹಾಕಿಕೊಂಡು ಬಾದಾಮಿಯನ್ನು ಮೇಲೆ ಹಾಕಿದರೆ ರುಚಿ ರುಚಿಯಾಗಿ ಸವಿಯಲು ಬಾಳೆಹಣ್ಣಿನ ಕೇಸರಿ ಬಾತ್ ರೆಡಿ.
ಇದನ್ನೂ ಓದಿ:Panneer Butter Masala Recipe:ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಪನ್ನೀರ್ ಬಟರ್ ಮಸಾಲೆ ರೆಸಿಪಿ
ಇದನ್ನೂ ಓದಿ:Protein Dosa:ತೂಕ ಇಳಿಸಲು ಆರೋಗ್ಯಕರ ಟೇಸ್ಟಿ ಪ್ರೋಟಿನ್ ದೋಸೆ
ಇದನ್ನೂ ಓದಿ:Terrorist Fake ID: ದಾಖಲೆ ಕಳೆದುಕೊಂಡಿದ್ರೆ ಹುಷಾರ್ ! ನಿಮ್ಮ ಹೆಸರಲ್ಲಿ ಸಿದ್ದವಾಗುತ್ತೆ ಉಗ್ರರ ನಕಲಿ ಐಡಿ
ಪೈನಾಪಲ್ ಕೇಸರಿ ಬಾತ್
ಬೇಕಾಗುವ ಸಾಮಾಗ್ರಿಗಳು
- ಪೈನಾಪಲ್
- ರವೆ
- ಸಕ್ಕರೆ
- ತುಪ್ಪ
- ಕೇಸರಿ
- ಗೊಡಂಬಿ
- ಒಣ ದ್ರಾಕ್ಷಿ
- ಏಲಕ್ಕಿ
ಮಾಡುವ ವಿಧಾನ:
ಬಾಣಲೆಗೆ ತುಪ್ಪ ಹಾಕಿ ಅದರಲ್ಲಿ ಗೊಡಂಬಿ ಮತ್ತು ಒಣ ದ್ರಾಕ್ಷಿ ಹುರಿದುಕೊಂಡು ಒಂದು ಬಟ್ಟಲಲ್ಲಿ ತೆಗೆದು ಇಟ್ಟುಕೊಳ್ಳಬೇಕು. ಆ ಬಾಣಲೆಗೆ ತುಪ್ಪ ಹಾಕಿ ಅದರಲ್ಲಿ ರವೆ ಹುರಿದುಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ಅರ್ಧ ಕಪ್ ನೀರು ಹಾಕಿಕೊಂಡು ಕುದಿಸಿಕೊಂಡು ಅದಕ್ಕೆ ಪೈನಾಪಲ್ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿಕೊಂಡು ಅದಕ್ಕೆ ರವೆ ಹಾಕಿ ನೀರು ಇಂಗುವವರೆಗೆ ಕಾಯಿಸಬೇಕು ನಂತರ ಒಂದು ಚಮಚ ತುಪ್ಪ , ಅರ್ಧ ಕಪ್ ಸಕ್ಕರೆ, ಕಾಲು ಲೋಟ ಕೇಸರಿ ಹಾಲು ಹಾಕಿ ಸೌಟನ್ನು ಆಡಿಸಿ ತಟ್ಟೆಯನ್ನು ಮುಚ್ಚಬೇಕು. ಮುಚ್ಚಿದ ತಟ್ಟೆಯನ್ನು ತೆಗೆದು ಒಂದು ಚಿಟಿಕೆ ಏಲಕ್ಕಿ , ಗೊಡಂಬಿ ,ದ್ರಾಕ್ಷಿ ಹಾಕಿದರೆ ರುಚಿಯಾಗಿ ಸವಿಯಲು ಪೈನಾಪಲ್ ಕೇಸರಿ ಬಾತ್ ರೆಡಿ.
Banana Kesaribath Recipe Make delicious banana kesaribath without using ghee