Delhi Murder case: ಪತಿಯ ಕೊಲೆಗೈದು 22 ತುಂಡುಗಳಾಗಿ ಕತ್ತರಿಸಿದ ಪತ್ನಿ, ಮಗ : ಶ್ರದ್ಧಾ ಮಾದರಿಯಲ್ಲೇ ಮತ್ತೊಂದು ಹತ್ಯೆ

ದೆಹಲಿ: (Delhi Murder case) ಶ್ರದ್ಧಾ ಕೊಲೆ ಪ್ರಕರಣ ಮರೆಮಾಚುವ ಮೊದಲೇ ಮತ್ತೊಂದು ಕೃತ್ಯ ಬಯಲಾಗಿದ್ದು, ಮಗನ ಜೊತೆ ಸೇರಿ ಪತ್ನಿ ಪತಿಯನ್ನು ಕೊಲೆಗೈದಿದ್ದಾಳೆ. ನಂತರ 22 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಶೇಖರಿಸಿದ್ದಾರೆ. ವಾಸನೆ ಬರುತ್ತಿದ್ದಂತೆಯೇ ಎಲ್ಲಾ ತುಂಡುಗಳನ್ನು ಮೈದಾನದಲ್ಲಿ ಎಸೆದು ಬಂದಿದ್ದರು. ಶ್ರದ್ದಾ ಕೊಲೆ ಪ್ರಕರಣದ ತನಿಖೆಗೆ ಇಳಿದ ಹೊತ್ತಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ದುರಂತವೆಂದ್ರೆ ಈ ಘಟನೆ ನಡೆದಿರೋದು ರಾಷ್ಟ್ರ ರಾಜಧಾನಿ ದೆಹಲಿಯ ಪಾಂಡವನಗರದಲ್ಲಿ.

ಅಂಜನ್‌ ದಾಸ್‌ ಎಂಬಾತನೇ ಕೊಲೆಯಾಗಿರುವ ವ್ಯಕ್ತಿ. ತಾಯಿ ಪೂನಂ ಮತ್ತು ಮಗ ದೀಪಕ್‌ ಸೇರಿಕೊಂಡು ಅಂಜನ್‌ ದಾಸ್‌ ನನ್ನು ಕೊಲೆ (Delhi Murder case) ಮಾಡಿದ್ದಾರೆ.ನಂತರ 22 ತುಂಡುಗಳನ್ನಾಗಿ ಕೊಚ್ಚಿ ಪ್ರಿಡ್ಜ್‌ ನಲ್ಲಿ ಶೆಕರಿಸಿಟ್ಟಿದ್ದರು. ನಂತರ ಒಂದೊಂದೇ ತುಂಡುಗಳನ್ನು ಎಸೆಯುತ್ತಿದ್ದು, ದೇಹದ ತುಂಡುಗಳನ್ನು ಎಸೆಯುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಗಳಾದ ಪೂನಂ ಮತ್ತು ದೀಪಕ್‌ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶೃದ್ಧಾ ಕೊಲೆ ಪ್ರಕರಣಕ್ಕೆ ತನಿಖೆ ನಡೆಸುತ್ತಿರುವ ವೇಳೆ ದೆಹಲಿಯ ಚಾಂದ್‌ ಚಿತ್ರಮಂದಿರದ ಹಿಂದುಗಡೆ ಇರುವ ಗ್ರೌಂಡ್‌ ನಲ್ಲಿ ದೇಹದ ಭಾಗಗಳು ದೊರೆತಿದ್ದು, ಪೊಲೀಸರು ಇದನ್ನು ಶೃದ್ದಾ ದೇಹವೇ ಇರಬೇಕು ಎಂದು ತನಿಖೆ ನಡೆಸಿದ್ದರು. ನಂತರದಲ್ಲಿ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ್ದರು. ಈ ವೇಳೆ ಆರೋಪಿ ತಾಯಿ ಮತ್ತು ಮಗ ಕಸ ಎಸೆಯುವಂತೆ ಗ್ರೌಂಡ್‌ ಗೆ ಬಂದು ದೇಹದ ಭಾಗಗಳನ್ನು ಎಸೆದು ಹೋಗುತ್ತಿದ್ದ ದೃಶ್ಯ ಜೂನ್‌ ಒಂದರಂದು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಇದೀಗ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದು, ತನಿಖೆಯನ್ನು ನಡೆಸಿದ್ದಾರೆ.

ಮೃತ ವ್ಯಕ್ತಿ ಅಂಜನ್‌ ದಾಸ್‌ ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ. ಕುಡಿದ ಮತ್ತಿನಲ್ಲಿ ತಾಯಿ ಮತ್ತು ಮಗನ ಮೇಲೆ ಹಲ್ಲೆ ನಡೆಸುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಆರೋಪಿಗಳು ಆತನಿಗೆ ನಿದ್ರೆ ಮಾತ್ರೆ ನೀಡಿದ್ದರು. ಅಂಜನ್‌ ದಾಸ್‌ ನಿದ್ರೆಗೆ ಜಾರಿದ ವೇಳೆ ಆತನನ್ನು ಕೊಲೆ ಮಾಡಿ ದೇಹವನ್ನು 22 ತುಂಡುಗಳನ್ನಾಗಿ ಕೊಚ್ಚಿದ್ದಾರೆ. ನಂತರ ದೇಹದ ತುಂಡುಗಳನ್ನು ಕವರ್‌ ನಲ್ಲಿ ಸುತ್ತಿ ಪ್ರಿಡ್ಜ್ ನಲ್ಲಿ ಶೇಕರಿಸಿಟ್ಟು, ಪ್ರತಿದಿನ ಒಂದೊಂದೆ ಪೀಸ್‌ ಗಳನ್ನು ಗ್ರೌಂಡ್‌ ನಲ್ಲಿ ಎಸೆದು ಬರುತ್ತಿದ್ದರು. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯದ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : Terrorist Fake ID: ದಾಖಲೆ ಕಳೆದುಕೊಂಡಿದ್ರೆ ಹುಷಾರ್ ! ನಿಮ್ಮ ಹೆಸರಲ್ಲಿ ಸಿದ್ದವಾಗುತ್ತೆ ಉಗ್ರರ ನಕಲಿ ಐಡಿ

ಇದನ್ನೂ ಓದಿ : Overpass collapse: ಮಹಾರಾಷ್ಟ್ರದಲ್ಲಿ ಮೇಲ್ಸೇತುವೆ ಕುಸಿತ: ಮಹಿಳೆ ಸಾವು, 12 ಜನ ಗಂಭೀರ ಗಾಯ

ಪೊಲೀಸರು ಶ್ರದ್ದಾ ಕೊಲೆ ಪ್ರಕರಣದ ಕುರಿತು ತನಿಖೆ ನಡೆಸಲು ಬಂದಿದ್ದ ವೇಳೆ ಗ್ರೌಂಡ್‌ ನಲ್ಲಿ ದೇಹದ ಭಾಗಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ವಲ್ಪ ದೂರದಲ್ಲಿ ತಲೆ ಬುರುಡೆಯ ಭಾಗವು ಕೂಡ ಪತ್ತೆಯಾಗಿದೆ. ಶ್ರದ್ದಾ ದೇಹದ ಭಾಗವೇ ಇರಬೇಕೆಂದು ಪರಿಶೀಲಿಸಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

(Delhi Murder case) Before Shraddha’s murder case was covered up, another act was revealed and the wife along with her son killed her husband. Then cut it into 22 pieces and store it in the fridge. All the pieces were thrown on the field as soon as the smell came. This case came to light when Shraddha’s murder case was investigated. Tragically, this incident took place in Pandavanagar, the national capital of Delhi.

Comments are closed.