ಉತ್ತರ ಭಾರತೀಯರ ಅಚ್ಚು ಮೆಚ್ಚಿನ ಸಿಹಿಯೇ ಕ್ಯಾರೆಟ್ ಹಲ್ವಾ. ಸರಿಯಾದ ಪ್ರಮಾಣದಲ್ಲಿ ಎಲ್ಲಾ ಪದಾರ್ಥವನ್ನು ಸೇರಿಸಿ ತಯಾರಿಸುವ ಪಾಕ ವಿಧಾನವೇ ಈ ಸಿಹಿಯ ವಿಶೇಷ. ಕ್ಯಾರೆಟ್ ಹಲ್ವಾ, ಗಾಜರ್ ಹಲ್ವಾ ಇನ್ನೂ ಹಲವು ಹೆಸರುಗಳಿಂದ ಕರೆಸಿ ಕೊಳ್ಳುವ ಈ ರೆಸಿಪಿ ನಿಮಗಾಗಿ.

ಕ್ಯಾರೆಟ್ ಹಲ್ವಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ತಿನ್ನಬೇಕು ಅನಿಸಿದಾಗ ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ತುಂಬಾ ಸುಲಭವಿದೆ.
ಇದನ್ನೂ ಓದಿ: ಅನ್ನದಿಂದಲೂ ತಯಾರಿಸಬಹುದು ʼರಸಗುಲ್ಲ’ ! ಈ ರೆಸಿಪಿ ನಿಮಗೆ ಗೊತ್ತಾ..?

ಕ್ಯಾರೆಟ್ ಹಲ್ವಾ ಮಾಡಲು ಬೇಕಾಗುವ ಸಾಮಾಗ್ರಿಗಳು :
ಕ್ಯಾರೆಟ್ ತುರಿ-3 ಕಪ್, ತುಪ್ಪ-1/4 ಕಪ್, ಗೋಡಂಬಿ-1 ಟೇಬಲ್ ಸ್ಪೂನ್, ದ್ರಾಕ್ಷಿ-15, ಬಾದಾಮಿ-1 ಟೇಬಲ್ ಸ್ಪೂನ್, ಪಿಸ್ತಾ-1 ಟೇಬಲ್ ಸ್ಪೂನ್, ಸಕ್ಕರೆ-1 ಕಪ್, ಹಾಲು-3 ಕಪ್. ಇವಿಷ್ಟನ್ನು ಮೊದಲೇ ರೆಡಿಮಾಡಿಕೊಳ್ಳಬೇಕು.

ಮಾಡುವ ವಿಧಾನ :
ಮೊದಲಿಗೆ ಒಂದು ಬಾಣಲೆಗೆ ತಪ್ಪ ಹಾಕಿಕೊಂಡು ಅದಕ್ಕೆ ದ್ರಾಕ್ಷಿ, ಗೋಡಂಬಿ ಹಾಕಿ ಹುರಿದುಕೊಳ್ಳಿ. ನಂತರ ಅದೇ ಪಾತ್ರೆಗೆ ಕ್ಯಾರೆಟ್ ತುರಿ ಹಾಕಿ 3 ನಿಮಿಷಗಳ ಕಾಲ ಹುರಿಯಿರಿ. ನಂತರ ಇದಕ್ಕೆ ಹಾಲು ಸೇರಿಸಿ ಚೆನ್ನಾಗಿ ಕ್ಯಾರೆಟ್ ತುರಿಯನ್ನು ಬೇಯಿಸಿಕೊಳ್ಳಿ.
ಇದನ್ನೂ ಓದಿ: Banana Jamun :ಬಾಳೆಹಣ್ಣಿನಿಂದ ಮಾಡಬಹುದು ʼಜಾಮೂನ್ʼ ! ರೆಸಿಪಿ ಗೊತ್ತಾ ನಿಮಗೆ ?

ಹಾಲು ಇಂಗುವವರೆಗೆ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಸಕ್ಕರೆ ಕರಗುವವರೆಗೆ ಕೈಯಾಡಿಸಿ ನಂತರ ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಪಾಕ ಇಂಗುವವರಗೆ ಕೈಯಾಡಿಸಿ. ಈ ಮಿಶ್ರಣ ತಳ ಬಿಡುವವರೆಗೆ ಕೈಯಾಡಿಸಿ. ನಂತರ ಚಿಟಿಕೆ ಏಲಕ್ಕಿ ಪುಡಿ , ಡ್ರೈಫ್ರೂಟ್ಸ್ ಸೇರಿಸಿ ಸರ್ವ್ ಮಾಡಿ.