ಡ್ರಗ್ಸ್‌ ದಂಧೆಯಲ್ಲಿ ಸೋನಿಯಾ ಹಾಗೂಸ್ನೇಹಿತ ಅರೆಸ್ಟ್‌ : ಅಷ್ಟಕ್ಕೂ ಯಾರಿವಳು ಮಾದಕ ಸುಂದರಿ

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ ಡ್ರಗ್ಸ್‌ ದಂಧೆ ಸಕ್ರೀಯವಾಗಿದೆ. ಅದ್ರಲ್ಲೂ ಗೋವಿಂದಪುರ ಠಾಣೆಯ ಪೊಲೀಸರು ಮಾದಕ ಸುಂದರಿ ಹಾಗೂ ಆಕೆಯ ಸ್ನೇಹಿತನನ್ನು ಖೆಡ್ಡಾಕೆ ಬೀಳಿಸಿದ್ದಾರೆ. ಅಷ್ಟಕ್ಕೂ ಯಾರೀ ಸೋನಿಯಾ ಅಗರ್‌ವಾಲ್‌.

ಗೋವಿಂದಪುರ ಠಾಣೆಯ ಪೊಲೀಸರು ಡ್ರಗ್ಸ್ ಆರೋಪಿಯೊಬ್ಬ ನೀಡಿದ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಮೂವರು ಕುಳಗಳನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ.

ಈ ನಡುವೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಸೋನಿಯಾ ಅಗರ್ ವಾಲ್ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲ ಹುಟ್ಟಿದೆ. ಸೋನಿಯಾ ಅಗರ್‌ವಾಲ್‌ ಹೆಸರು ಕೇಳುತ್ತಿದ್ದಂತೆಯೇ ಸಿನಿಮಾ ನಟಿ ಎಂದೇ ಬಹುತೇಕರು ಭಾವಿಸಿಕೊಂಡಿದ್ದರು. ಆದರೆ ಕೆಲವೇ ಹೊತ್ತಲ್ಲೇ ಆಕೆ ನಟಿಯಲ್ಲ ಮಾಡೆಲ್‌ ಅನ್ನೋದು ಬಯಲಾಗಿತ್ತು.

ಬೆಂಗಳೂರಿನಲ್ಲಿ ಸೆಲೆಬ್ರೆಟಿ ಬ್ಯೂಟಿಷಿಯನ್ ಆಗಿರುವ ಸೋನಿಯಾ ಅಗರ್ ವಾಲ್, ಸಾವಯವ ಉತ್ಪನ್ನಗಳ ಜೊತೆಗೆ ಕಾಸ್ಮೆಟಿಕ್ ಉದ್ಯಮಿ ಎಂದು ಹೇಳಿಕೊಂಡಿದ್ದಾರೆ. ಈ ನಡುವೆ ಬ್ಯೂಟಿಷಿಯನ್ ಆಗಿರುವ ಈಕೆಗೆ ಸಾಕಷ್ಟು ಸೆಲೆಬ್ರೆಟಿಗಳ ಸಂಪರ್ಕವಿದ್ದು, ಅದರಲ್ಲಿ ಬಹುತೇಕ ಮಂದಿ ಸಿನಿಮಾ ಹಾಗೂ ಧಾರಾವಾಹಿಯ ನಟ ಹಾಗೂ ನಟಿಯರು ಎನ್ನಲಾಗಿದೆ. ಥಾಮಸ್ ನಿಂದ ಡ್ರಗ್ಸ್ ಪಡೆಯುತ್ತಿದ್ದ ಈಕೆ ಸಿನಿಮಾ ಮತ್ತು ಕಿರುತೆರೆ ಮಂದಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದಳು ಎನ್ನಲಾಗುತ್ತಿದೆ.

( Drug peddling Case: Celebrity, model Sonia Agarwal Arrest Govindapura Police )

Comments are closed.