ಕಟ್ಲೆಟ್ ಅಂದರೆ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಅದರಲ್ಲೂ ವೆಜಿಟೆಬಲ್ ಕಟ್ಲೆಟ್ ಅಂದ ಕೂಡಲೇ ಬಹುತೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವೆಜಿಟೆಬಲ್ ಬಳಸಿ ಸುಲಭವಾಗಿ ಮಾಡಬಹುದಾದ ಕಟ್ಲೆಟ್ ಮಾಹಿತಿ ಇಲ್ಲಿದೆ. ಇನ್ಯಾಕೆ ತಡ ನೀವೂ ವೆಜಿಟೆಬಲ್ ಕಟ್ಲೆಟ್ ಮಾಡೋದಕ್ಕೆ ರೆಡಿಯಾಗಿ.

ಬೇಕಾಗುವ ಪದಾರ್ಥಗಳು : ವೆಜಿಟೆಬಲ್ ಕಟ್ ಲೆಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ಇಂತಿವೆ.100 ಗ್ರಾಂ ಬೀನ್ಸ್, 100 ಗ್ರಾಂ ಕ್ಯಾರೆಟ್, 1 ಬೆಂದ ಆಲೂ, 3-4 ಸ್ಲೈಸ್ ಬ್ರೌನ್ ಬ್ರೆಡ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ದಾಳಿಂಬೆ ಬೀಜದ ಪುಡಿ, 2-3 ಚಮಚ ಎಣ್ಣೆ.
ಇದನ್ನೂ ಓದಿ: ಖೀರ್ ತಿಂದು ಬೇಜಾರಾಗಿದ್ಯಾ ? ಹಾಗಾದ್ರೆ ಒಮ್ಮೆ ಟ್ರೈ ಮಾಡಿ ಕ್ಯಾರೆಟ್ ಖೀರ್ !

ತಯಾರಿಸುವ ವಿಧಾನ: ಬೀನ್ಸ್, ಕ್ಯಾರೆಟ್ ಗಳನ್ನು ಸಣ್ಣಗೆ ಹೋಳಾಗಿಸಿಕೊಂಡು, ಇದಕ್ಕೆ ನೀರು ಸಿಂಪಡಿಸಿ 3-4 ನಿಮಿಷ ಮೈಕ್ರೋವೇವ್ ನಲ್ಲಿ ಬೇಯಿಸಿಕೊಳ್ಳಿ. ನಂತರ ಅದನ್ನು ಮಿಕ್ಸರ್ ಗೆ ಹಾಕಿ ಡ್ರೈ ಕ್ರಂಬ್ಸ್ ಮಾಡಿಕೊಂಡು, ರುಬ್ಬಿದ ಮಿಶ್ರಣಕ್ಕೆ ಕ್ರಂಬ್ಸ್, ಮಸೆದ ಆಲೂ, ಉಪ್ಪು, ಖಾರ ಮತ್ತು ದಾಳಿಂಬೆ ಬೀಜದ ಪುಡಿ ಹಾಕಿ ಕಲೆಸಿರಿ.

ಇದರಿಂದ ಕಟ್ಲೆಟ್ ಮಾಡಿಕೊಳ್ಳಿ. ನಾನ್ ಸ್ಟಿಕ್ ಪ್ಯಾನ್ ಗೆ ಎಣ್ಣೆ ಹಾಕಿ, ಅದರಲ್ಲಿ ಕಟ್ ಲೆಟ್ ಗಳನ್ನು ಎರಡೂ ಬದಿ ಬೇಯಿಸಿ, ಕೆಂಬಣ್ಣಕ್ಕೆ ಬಂದಾಗ ತೆಗೆಯಿರಿ. ಟೊಮೇಟೊ ಸೋಸ್ ಸೇರಿಸಿಕೊಂಡು ಈ ರುಚಿಯಾದ ಕಟ್ಲೆಟ್ ತಿಂದ್ರೆ ಬಹಳ ರುಚಿಕರವಾಗಿರುತ್ತದೆ.
ಇದನ್ನೂ ಓದಿ: ಮನೆಯಲ್ಲೇ ಮಾಡಿ’ಬಾದಾಮ್ ಹಲ್ವಾʼ : ಇಲ್ಲಿದೆ ಮಾಡುವ ಸುಲಭ ವಿಧಾನ
(Easy Vegetable Cutlet)