ಬಾಳೆಕಾಯಿ ಇಂದ ಹಲವಾರು ಖಾದ್ಯವನ್ನು ತಯಾರಿಸಬಹುದು. ಬಾಳೆಕಾಯಿ ಬಜ್ಜಿ ಮಾಡೋದು ಗೊತ್ತು. ಇಲ್ಲ ಚಿಪ್ಸ್ ಮಾಡಿ ನಾಲ್ಕು ದಿನವಿಟ್ಟುಕೊಂಡು ತಿನ್ನುವುದೂ ಗೊತ್ತು. ಆದರೆ ಬಾಳೆ ಕಾಯಿ ಫ್ರೈ ಟೇಸ್ಟ್ ಮಾಡಿದ್ದೀರಾ. ಇಲ್ಲಿದೆ ಅದರ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು: ಬಾಳೆಕಾಯಿ – 1, ಅರಿಶಿಣ – 1/4 ಚಮಚ, ಸಾಂಬಾರ್ ಪುಡಿ – 1/4 ಚಮಚ, ಮೆಣಸಿನ ಪುಡಿ – 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ – 2 ಚಮಚ, ಸಾಸಿವೆ – 1 ಚಮಚ, ಉದ್ದಿನ ಬೇಳೆ – 1/2 ಚಮಚ, ಜೀರಿಗೆ – 1/2 ಚಮಚ, ಸೋಂಪಿನ ಕಾಳು – 1/2 ಚಮಚ, ಕೆಂಪು ಮೆಣಸಿನ ಕಾಯಿ – 1, ಇಂಗು – ಸ್ವಲ್ಪ, ಕರಿಬೇವು – 1 ಕಡ್ಡಿ

ಇದನ್ನೂ ಓದಿ: Chicken Sukka : ಬಾಯಲ್ಲಿ ನೀರೂರಿಸುವ ಚಿಕನ್ ಸುಕ್ಕ ರೆಸಿಪಿ : ಒಮ್ಮೆ ಟ್ರೈ ಮಾಡಿ
ಮಾಡುವ ವಿಧಾನ: ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು, ಅದಕ್ಕೆ ಅರಿಶಿಣ, ಸಾಂಬಾರ್ ಪುಡಿ, ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ, ಕಲಸಿ. ಒಂದು ಪಾತ್ರೆಯಲ್ಲಿ ಕಾದ ಎಣ್ಣೆಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಸೋಂಪು ಕಾಳು, ಕೆಂಪು ಮೆಣಸು, ಇಂಗು ಮತ್ತು ಕರಿಬೇವು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ.

ನಂತರ ಮಿಶ್ರಣ ಮಾಡಿದ ಬಾಳೆಕಾಯಿಯನ್ನು ಪಾತ್ರೆಗೆ ಹಾಕಿ ಸ್ವಲ್ಪ ನೀರು ಮತ್ತು ಒಗ್ಗರಣೆ ಸೇರಿಸಿ 10 ನಿಮಿಷ ಚೆನ್ನಾಗಿ ಕುದಿಸಿ. ಈಗ ಬಾಳೆಕಾಯಿ ಫ್ರೈ ರೊಟ್ಟಿ ಮತ್ತು ಚಪಾತಿ ಜೊತೆ ಸವಿಯಲು ರೆಡಿ. ಮನೆ ಮಂದಿಗೆಲ್ಲಾ ಈ ಬಾಳೆ ಕಾಯಿ ಫ್ರೈ ಟೇಸ್ಟ್ ಸವಿಯಲು ಕೊಟ್ಟು ನೀವು ಸವಿಯಿರಿ.
ಇದನ್ನೂ ಓದಿ: Capsicum Bath Recipe : ಒಮ್ಮೆ ಆದ್ರೂ ಟ್ರೈ ಮಾಡಿ ʼಕ್ಯಾಪ್ಸಿಕಂ ಬಾತ್ʼ
(Have you tasted banana fry?)