JACKFRUIT SEEDS HALWA : ಎಂದಾದ್ರೂ ತಿಂದಿದ್ರಾ ಹಲಸಿನ ಬೀಜದ ಹಲ್ವಾ

ಹಲ್ವಾ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಹಲವು ರೀತಿಯಲ್ಲಿ ಹಲ್ವಾ ತಯಾರಿಸಬಹುದು. ಆದ್ರೆ ಹಲಸಿನ ಬೀಜದ ಹಲ್ವಾದ ರುಚಿ ನೋಡಿದ್ರಾ. ಸುಲಭವಾಗಿ ಸಿಗುವ ಹಲಸಿನ ಬೀಜದ ಹಲ್ವಾದ ರುಚಿಯನ್ನು ಮನೆಯಲ್ಲಿಯೇ ಮಾಡಿ. ಒಮ್ಮೆ ತಿಂದ್ರೆ ಮತ್ತೊಮ್ಮೆ ನೀವು ಮಾಡದೇ ಇರೋದಕ್ಕೆ ಸಾಧ್ಯವೇ ಇಲ್ಲ.

ಬೇಕಾಗುವ ಸಾಮಾಗ್ರಿಗಳು : ಹಲಸಿನ ಬೀಜ – 30, ಬೆಲ್ಲ – 200 ಗ್ರಾಂ, ತುಪ್ಪ, ದ್ರಾಕ್ಷಿ, ಗೋಡಂಬಿ, ಏಲಕ್ಕಿ – 3

ಮಾಡುವ ವಿಧಾನ: ಮೊದಲಿಗೆ ಕುಕ್ಕರ್ ನಲ್ಲಿ ಹಲಸಿನ ಬೀಜಕ್ಕೆ ನೀರು ಹಾಕಿ ಬೇಯಲು ಇಡಿ. 8 ವಿಸಿಲ್ ಕೂಗಿಸಿ. ಬಳಿಕ ಬೆಂದ ಹಲಸಿನ ಬೀಜ ತಣಿದ ಬಳಿಕ ಹೊರಗಿನ ಸಿಪ್ಪೆ ತೆಗೆಯಿರಿ. ಇನ್ನೊಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಬೆಲ್ಲ ಕರಗಿಸಿ. ಸಿಪ್ಪೆ ತೆಗೆದ ಹಲಸಿನ ಬೀಜವನ್ನು ಮಿಕ್ಸಿ ಜಾರಿಗೆ ಹಾಕಿ, ಇದಕ್ಕೆ ಕರಗಿಸಿದ ಬೆಲ್ಲವನ್ನೂ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಇದನ್ನೂ ಓದಿ: Bread Pakoda : ರುಚಿ ರುಚಿ ಬ್ರೆಡ್ ಪಕೋಡಾ ನೀವೂ ಟ್ರೈ ಮಾಡಿ

ಬಳಿಕ ಒಂದು ಪಾತ್ರೆಗೆ ಅರ್ಧ ಕಪ್ ನಷ್ಟು ತುಪ್ಪ ಹಾಕಿ ರುಬ್ಬಿರುವ ಮಿಶ್ರಣವನ್ನು ಹಾಕಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿಟ್ಟು ಬೇಯಿಸಿ. ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತಳ ಬಿಡುತ್ತಾ ಬರುವಾಗ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿಯನ್ನು ಸೇರಿಸಿ.

ಕುಟ್ಟಿ ಪುಡಿ ಮಾಡಿರುವಂತಹ ಏಲಕ್ಕಿಯನ್ನು ಸೇರಿಸಿ ಮಿಕ್ಸ್ ಮಾಡಿ. ಬಳಿಕ ಸರ್ವಿಂಗ್ ಪ್ಲೇಟ್ ಗೆ ತುಪ್ಪ ಸವರಿ ಅದಕ್ಕೆ ಹಲ್ವಾ ಹಾಕಿ ಚೆನ್ನಾಗಿ ಸೆಟ್ ಮಾಡಿ, ಒಂದು ಗಂಟೆಗಳ ಕಾಲ ಹಾಗೆಯೇ ಇಡಿ. ನಂತರ ಬೇಕಾದ ಆಕೃತಿಗೆ ಕಟ್ ಮಾಡಿಕೊಂಡರೆ ಸವಿಯಲು ಹಲಸಿನ ಬೀಜದ ಹಲ್ವಾ ರೆಡಿ.

ಇದನ್ನೂ ಓದಿ: vegitable cutlet : ಸುಲಭವಾಗಿ ಮಾಡಬಹುದು ವೆಜಿಟೆಬಲ್ ಕಟ್ಲೆಟ್‌

(JACKFRUIT SEEDS HALWA)

Comments are closed.