Horoscope : ದಿನಭವಿಷ್ಯ : ತಪ್ಪಿಯೂ ಈ ಕಾರ್ಯವನ್ನು ಮಾಡಬೇಡಿ

ಮೇಷರಾಶಿ
ಧ್ಯಾನ ಮತ್ತು ಯೋಗವು ಆಧ್ಯಾತ್ಮಿಕ ಹಾಗೂ ದೈಹಿಕ ಲಾಭ ತರಲಿದೆ, ಇತರರನ್ನು ಮೆಚ್ಚಿಸಲು ಖರ್ಚು ಮಾಡಬೇಡಿ, ಕೆಲಸದಿಂದ ಆಯಾಸ ತರಲಿದೆ, ಮಾನಸಿಕ ಒತ್ತಡ, ಸಹೋದ್ಯೋಗಿಗಳು ನಿಮಗೆ ಒತ್ತಡವನ್ನು ತರಲಿದ್ದಾರೆ, ಸಹೋದ್ಯೋಗಿಗಳ ಜೊತೆಗೆ ಹೊಂದಾಣಿಕೆಯಿಂದ ಮುನ್ನಡೆಯಿರಿ. ದಿನಾಂತ್ಯಕ್ಕೆ ಶುಭ ವಾರ್ತೆಯನ್ನು ಕೇಳುವಿರಿ.

ವೃಷಭರಾಶಿ
ಅದೃಷ್ಟವನ್ನು ಅವಲಂಬಿಸಬೇಡಿ, ನಿಮ್ಮ ಆರೋಗ್ಯವನ್ನು ಸುಧಾರಿಸಲು ಪ್ರಯತ್ನಿಸಿ, ಆರೋಗ್ಯ ವೃದ್ದಿಗೆ ವ್ಯಾಯಾಮ ಮಾಡಿ, ಹಣಕಾಸಿನ ಯೋಜನೆಯ ಮೇಲೆ ಹಿಡಿತವಿರಲಿ, ಯಾವುದಕ್ಕೂ ಚಿಂತೆ ಮಾಡಬೇಡಿ, ದೂರದ ಊರಿನ ಕರೆ ನಿಮಗೆ ಸಂತಸವನ್ನು ಮೂಡಿಸಿದೆ, ಕೆಲಸದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಿ, ಇತರರ ಜೊತೆ ಮಾತನಾಡುವಾಗ ಎಚ್ಚರಿಕೆವಹಿಸಿ.

ಮಿಥುನರಾಶಿ
ನಿಮ್ಮ ಸಾಮರ್ಥ್ಯ ಅರಿತುಕೊಳ್ಳಿ, ಸ್ನೇಹಿತರು ನಿಮಗೆ ಸಹಕಾರ ನೀಡುವರು, ಅತಿಯಾದ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಿ, ಮನೆಗೆ ಬಂಧುಗಳ ಭೇಟಿಯಿಂದ ಸಂತಸ, ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವ ಯೋಜನೆಯೊಂದು ಹೊಳೆಯಲಿದೆ, ಮಾನಸಿಕವಾಗಿ ನೆಮ್ಮದಿಯನ್ನು ನೀಡಲಿದೆ.

ಕರ್ಕಾಟಕರಾಶಿ
ಹೊಸ ಹೂಡಿಕೆಗಳು ಲಾಭವನ್ನು ತರಲಿದೆ, ವ್ಯಾಪಾರದಲ್ಲಿ ಪಾಲುದಾರರು ಬೆಂಬಲ ನೀಡಲಿದ್ದಾರೆ, ಸಹೋದ್ಯೋಗಿಗಳ ಜೊತೆ ಹೊಂದಾಣಿಕೆಯಿಂದ ಲಾಭವನ್ನು ತಂದು ಕೊಡಲಿದೆ, ವೈವಾಹಿಕ ಜೀವನವು ಸಂತಸವನ್ನು ತರಲಿದೆ, ಬಾಕಿ ಇರುವ ಕೆಲಸಗಳನ್ನು ಇಂದೇ ಮುಗಿಸಲು ಯತ್ನಸಿ, ಹವ್ಯಾಸಗಳಿಂದ ಮನ ಸಂತೋಷ.

ಸಿಂಹರಾಶಿ
ನಿಮ್ಮ ಭಾವನೆಗಳನ್ನು ನಿಯಂತ್ರಿಸಿ, ಹಣಕಾಸಿನ ಸ್ಥಿತಿಯು ಸುಧಾರಣೆ ಕಂಡುಬರಲಿದೆ, ದೀರ್ಘ ಕಾಲದ ಬಾಕಿ ಕೆಲಸಗಳನ್ನು ಇಂದೇ ಮುಗಿಸಲು ಯತ್ನಿಸಿ, ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ, ಪ್ರಾಬಲ್ಯದ ವರ್ತನೆ ಸಹೋದ್ಯೋಗಿಗಳಿಂದ ಟೀಕೆಗಳು ತರುತ್ತದೆ, ದೂರದ ಊರಿನಿಂದ ಶುಭ ಸಮಾಚಾರವನ್ನು ಕೇಳಲಿದ್ದೀರಿ.

ಕನ್ಯಾರಾಶಿ
ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಿ, ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳನ್ನು ಪಡೆಯುವಿರಿ, ಪ್ರೀತಿ ಪಾತ್ರರ ಜೊತೆಗೆ ಸಮಯ ಕಳೆಯುವಿರಿ, ನಿಮ್ಮ ಪಾಲಿಗಿಂದು ಲಾಭದಾಯಕ ದಿನವಲ್ಲ, ಸುತ್ತಮುತ್ತಲಿನ ಜನರು ಸಹಕಾರವನ್ನು ಮಾಡಲಿದ್ದಾರೆ. ಮಕ್ಕಳಿಂದ ಸಂತಸವನ್ನು ನೀಡಲಿದೆ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ತುಲಾರಾಶಿ
ದಾನ ಕಾರ್ಯಗಳಿಂದ ಮಾನಸಿಕ ಶಾಂತಿ, ನೆಮ್ಮದಿಯನ್ನು ತರಲಿದೆ, ಹೂಡಿಕೆಗಳು ಭವಿಷ್ಯದ ಲಾಭವನ್ನು ತರಲಿದೆ, ದೂರು ನೀಡಲು ಅವಕಾಶವನ್ನು ನೀಡಬೇಡಿ, ಧರ್ಮಪತ್ನಿಯಿಂದ ಸಹಕಾರ ದೊರೆಯಲಿದೆ, ಆತ್ಮೀಯರ ಭೇಟಿಯಿಂದ ಸಂತಸವನ್ನು ನೀಡಲಿದೆ, ಆರೋಗ್ಯದ ಕಡೆಗೆ ಗಮನಹರಿಸಿ.

ವೃಶ್ಚಿಕರಾಶಿ
ಅನಗತ್ಯ ಆಲೋಚನೆಗಳನ್ನು ದೂರ ಮಾಡಿ, ಮಾನಸಿಕ ದೃಢತೆಯನ್ನು ಹೆಚ್ಚಿಸಿಕೊಳ್ಳಿ, ಹೂಡಿಕೆಯಿಂದ ನಷ್ಟ ಅನುಭವಿಸುವಿರಿ, ಕುಟುಂಬದಲ್ಲಿ ನೆಮ್ಮದಿ ಕಂಡು ಬರಲಿದೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ ದೊರೆಯಲಿದೆ, ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುವಿರಿ,

ಧನಸ್ಸುರಾಶಿ
ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಸ್ಥಳೀಯರ ಸಹಕಾರ ದೊರೆಯಲಿದೆ, ಪತ್ನಿಯಿಂದ ಸಹಕಾರ, ಕ್ಷುಲಕ ಕಾರಣಕ್ಕೆ ಕೋಪಗೊಳ್ಳಬೇಡಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮಾನಸಿಕ ನೆಮ್ಮದಿ, ಸಂಗಾತಿಯ ಜೊತೆಗೆ ಸುಂದರ ಸಂಜೆಯನ್ನು ಕಳೆಯುವಿರಿ, ಉದ್ಯೋಗ ನಿಮ್ಮಿತ್ತ ದೂರ ಪ್ರಯಾಣ, ಹೊಸ ಹೂಡಿಕೆ ಲಾಭವನ್ನು ತರಲಿದೆ.

ಮಕರರಾಶಿ
ತಾಳ್ಮೆಯಿರಲಿ, ನಿರಂತ ಪ್ರಯತ್ನದಿಂದ ಕಾರ್ಯಸಾಧನೆ, ಸಾಮಾನ್ಯ ತಿಳುವಳಿಕೆಯಿಂದ ಕಾರ್ಯಸಾಧನೆ, ವಿದ್ಯಾರ್ಥಿಗಳಿಗೆ ವಿದೇಶಿ ಅಧ್ಯಯನದ ಯೋಗ, ಆರ್ಥಿಕ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯಲಿದೆ, ದುಶ್ಚಟಗಳಿಂದ ದೂರವಿರಿ, ನಿಮ್ಮ ಅಭ್ಯಾಸವನ್ನು ಕೆಟ್ಟದಾಗಿ ತಿಳಿಯುವ ಸಾಧ್ಯತೆಯಿದೆ, ಅವಿವಾಹಿತರು ಶುಭ ಸುದ್ದಿಯನ್ನು ಕೇಳುವಿರಿ.

ಕುಂಭರಾಶಿ
ಸಭ್ಯ ನಡವಳಿಕೆ ಪ್ರಶಂಸೆಗೆ ಪಾತ್ರವಾಗಲಿದೆ, ಹಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪು ಬರಲಿದೆ, ಆರ್ಥಿಕವಾಗಿ ಹಲವು ರೀತಿಯ ಪ್ರಯೋಜನ ದೊರೆಯಲಿದೆ, ಗುರಿ ಸಾಧನೆಗೆ ಪ್ರಸಕ್ತವಾದ ದಿನ, ನಿಮ್ಮ ಮನೋಬಲ ಹೆಚ್ಚಿಸುವ ಘಟನೆಗಳು ನಿಮ್ಮ ಮೌಲ್ಯವನ್ನು ಇತರರು ಅರಿತುಕೊಳ್ಳುವರು.

ಮೀನರಾಶಿ
ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ, ಹೊಸ ಒಪ್ಪಂದಗಳು ಲಾಭದಾಯಕವಾಗಿ ಕಾಣಲಿದೆ, ಆತುರದ ನಿರ್ಧಾರಗಳಿಂದ ಸಂಕಷ್ಟ, ಹಣಕಾಸಿನ ಬಿಕ್ಕಟ್ಟು ಚಿಂತೆಯನ್ನು ತರಲಿದೆ, ಸೃಜನಶೀಲ ಸ್ವಭಾವದ ಉದ್ಯೋಗಗಳಲ್ಲಿ ತೊಡಗಿಕೊಳ್ಳಿ, ಪ್ರಯಾಣದ ವೇಳೆಯಲ್ಲಿ ಮನರಂಜನೆಯನ್ನು ಅನುಭವಿಸುವಿರಿ.

( Horoscope today astrological prediction for October 01 )

Comments are closed.