ಉಪ್ಪು ಕೋಳಿ ಹೆಸರು ಕೇಳಿದಾಕ್ಷಣ ಏನಿದು ಕೋಳಿ ಉಪ್ಪು ಹಾಕಿಕೊಂಡು ತಿನ್ನೋದಾ ? ಅಂತ ಕೇಳ್ಬೇಡಿ. ಹೆಸರು ಡಿಫ್ರೆಂಟ್ ಆಗಿದ್ರೂ, ಕೂಡ ಟೇಸ್ಟ್ ಮಾತ್ರ ಸೂಪರ್ ಅಗಿರುತ್ತೆ. ಉಡುಪಿ ಹಾಗೂ ಕುಂದಾಪುರದ ಜನರು ಹೆಚ್ಚಾಗಿ ಮನೆಯಲ್ಲಿ ಮಾಡಿಕೊಂಡು ಸವಿಯುವ ರೆಸಿಪಿ. ಮುಖ್ಯವಾಗಿ ಈ ರೆಸಿಪಿ ತಯಾರಿಸಲು ಬಲು ಸುಲಭ, ಆ ಕಾರಣದಿಂದಾನೇ ಹೆಚ್ಚಿನವರು ಉಪ್ಪು ಕೋಳಿಯನ್ನು ಮಾಡುತ್ತಾರೆ. ಅಲ್ಲದೇ ಸುಲಭವಾಗಿ ಮಾಡಿದರು ಕೂಡ ಇದರ ರುಚಿಗೆ ಸಾಟಿಯೇ ಇಲ್ಲ.

ಉಪ್ಪು ಕೋಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು : ಕೋಳಿ 1 ಕೇಜಿ , ಬೆಳ್ಳುಳಿ 6 , ಈರುಳ್ಳಿ 5 , ಟೊಮೇಟೊ 4, ಹಸಿ ಮೆಣಸಿನಕಾಯಿ 4 , ಶುಂಠಿ 1 ಟೇಬಲ್ ಸ್ಪೂನ್, ಕೊತ್ತಂಬರಿ ಸೊಪ್ಪು ಅರ್ಧ ಕಪ್, ಲಿಂಬೆ 1 , ಅರಿಶಿನ 1 ಸ್ಪೂನ್, ಕೊಬ್ಬರಿ ಎಣ್ಣೆ 3 ಟೇಬಲ್ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು.
ಇದನ್ನೂ ಓದಿ: Chicken Chops : ಹಳ್ಳಿ ಸ್ಟೈಲ್ ಚಿಕನ್ ಚಾಪ್ಸ್ ರುಚಿ ನೋಡಿ

ಉಪ್ಪು ಕೋಳಿ ತಯಾರಿಸುವ ವಿಧಾನ : ಮೊದಲಿಗೆ ಮೇಲೆ ಕೊಟ್ಟಂತ ಎಲ್ಲಾ ತರಕಾರಿಗಳನ್ನು ಚೆನ್ನಾಗಿ ಸಣ್ಣದಾಗಿ ಹೆಚ್ಚಿಕೊಳ್ಳ ಬೇಕು. ನಂತರ ಮೊದಲು ಸ್ಟವ್ ಮೇಲೆ ಪಾತ್ರೆ ಇಟ್ಟು ಅದಕ್ಕೆ ಮೊದಲು ಕೊಬ್ಬರಿ ಎಣ್ಣೆಯನ್ನು ಹಾಕಬೇಕು ನಂತರ ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಬೆಳ್ಳುಳ್ಳಿಯನ್ನು ಹಾಕಿ ಹುರಿಯಬೇಕು. ನಂತರ ಅದಕ್ಕೆ ಈರುಳ್ಳಿಯನ್ನು ಅದಕ್ಕೆ ಹಾಕಿಕೊಂಡು 2 ನಿಮಿಷ ಹುರಿದುಕೊಳ್ಳ ಬೇಕು.

ನಂತರ ಆ ಮಿಶ್ರಣಕ್ಕೆ ಟೋಮೆಟೋ ಮತ್ತು ಹಸಿಮೆಣಸಿನಕಾಯಿ ಜೊತೆಗೆ ಶುಂಠಿಯನ್ನು ಹಾಕಿ ಚೆನ್ನಾಗಿ ಹುರಿದು ಕೊಳ್ಳಬೇಕು ನಂತರ ಆ ಮಿಶ್ರಣಕ್ಕೆ ಕೋಳಿ ಹಾಗೂ ಅರಿಶಿನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಇದನ್ನು 30 ರಿಂದ 40 ನಿಮಿಷಗಳ ಕಾಲ ಬೇಯಿಸಬೇಕು ( ಆ ಬೇಯಿಸಲು ಬಿಡುವ 30 ರಿಂದ 40 ನಿಮಿಷಗಳ ಮಧ್ಯ ಮಧ್ಯದಲ್ಲಿ ಆ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ ಇಲ್ಲವಾದಲ್ಲಿ ಅಡಿಗೆ ಅಡಿಹಿಡಿದು ಬಿಡುತ್ತದೆ )

ಇದನ್ನೂ ಓದಿ: Chicken Sukka : ಬಾಯಲ್ಲಿ ನೀರೂರಿಸುವ ಚಿಕನ್ ಸುಕ್ಕ ರೆಸಿಪಿ : ಒಮ್ಮೆ ಟ್ರೈ ಮಾಡಿ
30 ರಿಂದ 40 ಕೋಳಿ ಬೆಂದ ಮೇಲೆ ಆ ಮಿಶ್ರಣಕ್ಕೆ ನಿಂಬೆಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಬೇಕು ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ನ್ನು ಹಾಕಿಕೊಂಡರೇ ಮುಗಿಯಿತು ಬಿಸಿ ಬಿಸಿಯಾದ ರುಚಿಯಾದ ಉಪ್ಪು ಕೋಳಿ ಸವಿಯಲು ಸಿದ್ಧ. ನೀವು ತಿನ್ನಿ ನಿಮ್ಮವರಿಗೂ ತಿನ್ನಿಸಿ.
(Udupi, Kundapur special Uppu koli tasted?)