Mint leaf : ಪುದೀನಾ ಎಲೆಯಲ್ಲಿ ಅಡಗಿದೆ ಮುಖದ ಕಲೆಯನ್ನು ನೀವಾರಿಸುವ ಔಷಧೀಯ ಗುಣ

ಪುದೀನಾ ಹೆಸರು ಕೇಳಿದ್ರೇ ಸಾಕು ಹೆಚ್ಚಿನವರು ಆಹಾಃ ಎನ್ನುತ್ತಾರೆ. ಇದಕ್ಕೆ ಕಾರಣ ಪುದೀನಾ ಸುವಾಸನೇ. ಪುದೀನಾದ ಸುವಾಸನೇ ಹೇಗೆ ಚೆನ್ನಾಗಿದೆಯೋ ಅದೇ ರೀತಿ ಪುದೀನಾದಲ್ಲಿ ಔಷದೀಯ ಗುಣವು ಹೇರಳವಾಗಿದೆ. ಪುದೀನಾವನ್ನು ಚರ್ಮದ ಉಪಯೋಗಿಸುವ ಹೆಚ್ಚಿನ ಉತ್ಪನ್ನಗಳಲ್ಲಿ ಬಳಸುತ್ತಾರೆ. ಅಲ್ಲದೇ ಪುದೀನಾ‌‌ ಸೇವನೆಯಿಂದ  ಹಲವಾರು ಉಪಯೋಗಗಳು ಇವೆ.

ಪುದೀನಾ ಚರ್ಮದ ಬಣ್ಣವನ್ನು ಬಿಳಿಯಾಗುವಂತೆ ಮಾಡುತ್ತದೆ. ಪುದೀನಾ ಎಲೆಯಲ್ಲಿ ತ್ವಚೆಯ ಕೊಳೆ ತೆಗೆಯುವ ವಿಶೇಷವಾದ ಗುಣವಿದೆ. ಅಲ್ಲದೇ ತಿಂಗಳಿಗೆ 2 ಭಾರಿ ಪುದೀನಾ ರಸತೆಗೆದು ಚರ್ಮಕ್ಕೆ ಹಚ್ಚುವುದರಿಂದ ಡ್ಯಾಮೇಜ್‌ ಆದ ತ್ವಚೆ ಕಾಂತಿಯುತವಾಗಿ ಸುಂದರವಾಗಿ ಕಾಣುತ್ತದೆ.

ಇದನ್ನೂ ಓದಿ: ಇನ್ನೇನು ಶುರುವಾಯ್ತು ಚಳಿಗಾಲ, ನಿಮ್ಮ ತ್ವಚೆಯ ಆರೈಕೆ ಹೀಗಿರಲಿ

ಪುದೀನಾದಲ್ಲಿ ವಿಟಮಿನ್‌ ಎ ಹೇರಳವಾಗಿದ್ದು ಇದರ ಉಪಯೋಗದಿಂದ ಮೊಡವವೆ ಮತ್ತು ಮುಖದಲ್ಲಿ ಎಣ್ಣೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಮೋಡವೆ ಸಮಸ್ಯೆ ಹಾಗೂ ಆಯಿಲ್‌ ಸ್ಕಿನ್‌ ಇರುವವರು ಪುದೀನಾವನ್ನು ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷದ ನಂತರ ತೊಳೆಯುವುದರಿಂದ ಮೊಡವೆಗಳಿಂದ ಹಾಗೂ ಆಯಿಲ್‌ ಸ್ಕಿನ್‌ ನಿಂದ ಮುಕ್ತಿ ಹೊಂದಬಹುದು.

ಮೂರು ದಿನಕ್ಕೊಮ್ಮೆ ಪುದೀನಾ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿ 20 ರಿಂದ 30 ನಿಮಿಷ ಇಟ್ಟು ನಂತರ ತೊಳೆಯುವುದರಿಂದ ಚರ್ಮ ಹೈಡ್ರೇಟ್‌ ಆಗುತ್ತದೆ ಅಲ್ಲದೇ ತ್ವಚೆಯ ಆರೋಗ್ಯಕೂಡ ಚೆನ್ನಾಗಿರುತ್ತದೆ. ಪುದೀನ ಪೇಸ್ಟ್‌ ಅನ್ನು ಕಣ್ಣಿನ ಸುತ್ತ ಹಚ್ಚಿ ರಾತ್ರಿ ಇಡೀ ಬಿಟ್ಟು ಬೆಳ್ಳಗೆ ತೋಳೆಯುವುದರಿಂದ ಡಾರ್ಕ್‌ ಸರ್ಕಲ್‌ ನಿವಾರಣೆಯಾಗುತ್ತದೆ.

ಇದನ್ನೂ ಓದಿ:Potato Beauty tips : ಆಲೂಗಡ್ಡೆಯಿಂದ ಅರಳುತ್ತೆ ಬಿಳುಪಾದ ಸುಂದರ ತ್ವಚೆ

(Hidden in mint leaf is facial stain;medicinal property)

Comments are closed.