ಕೇಕ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳಿಗಂತೂ ಸಿಕ್ಕಾಪಟ್ಟೆ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಸಸ್ಯಾಹಾರಿಗಳಿಗೆ ಮೊಟ್ಟೆ ಹಾಕಿ ಕೇಕ್ ಮಾಡುವುದು ಇಷ್ಟವಿರಲ್ಲ. ಅಂತಹವರಿಗೆ ಇಲ್ಲಿ ಸುಲಭವಾಗಿ ಎಗ್ ಲೆಸ್ ಕೇಕ್ ಮಾಡುವ ವಿಧಾನ ಇಲ್ಲಿದೆ ನೋಡಿ. ಅಷ್ಟೇ ಅಲ್ಲಾ ಕುಕ್ಕರ್ ನಲ್ಲಿಯೇ ಎಗ್‌ಲೆಸ್ ವೆನಿಲ್ಲಾ ಕೇಕ್ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು : 1 ಕಪ್- ಮಜ್ಜಿಗೆ, 1 ಕಪ್- ಮೈದಾ ಹಿಟ್ಟು, ½ ಕಪ್ ಸಕ್ಕರೆ ಪುಡಿ, ¼ ಕಪ್ ಅಡುಗೆ ಎಣ್ಣೆ, 1 ಟೀ ಸ್ಪೂನ್ ಬೇಕಿಂಗ್ ಪೌಡರ್, ¼ ಟೀ ಸ್ಪೂನ್ ಬೇಕಿಂಗ್ ಸೋಡಾ, ಕೋಕಾ ಪೌಡರ್-1 ಟೇಬಲ್ ಸ್ಪೂನ್, ¼ ಟೀ ಸ್ಪೂನ್ ವೆನಿಲ್ಲಾ ಎಸೆನ್ಸ್, ಆರೇಂಜ್ ಫುಡ್ ಕಲರ್-1/4 ಟೀ ಸ್ಪೂನ್.
ಇದನ್ನೂ ಓದಿ: ಮನೆಯಲ್ಲೇ ಮಾಡಿ’ಬಾದಾಮ್ ಹಲ್ವಾʼ : ಇಲ್ಲಿದೆ ಮಾಡುವ ಸುಲಭ ವಿಧಾನ

ಮಾಡುವ ವಿಧಾನ : ಮೊದಲಿಗೆ ಮಜ್ಜಿಗೆಗೆ ಸ್ವಲ್ಪ ಆರೇಂಜ್ ಫುಡ್ ಕಲರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಬೌಲ್ ಗೆ ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಕೋಕೊ ಪೌಡರ್ ಹಾಕಿ ಚೆನ್ನಾಗಿ ಜರಡಿ ಹಿಡಿದಿಟ್ಟುಕೊಳ್ಳಿ. ನಂತರ ಇದಕ್ಕೆ ಅಡುಗೆ ಎಣ್ಣೆ, ಮಜ್ಜಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನೂ ಓದಿ: Paneer Tikka : ಮನೆಯಲ್ಲೂ ಮಾಡಿ ಪನ್ನೀರ್ ಟಿಕ್ಕಾ

ನಂತರ ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ತಿರುಗಿಸಿ. ನಂತರ ಇದನ್ನು ಕೇಕ್ ಮೌಲ್ಡ್ ಗೆ ಹಾಕಿ. ಕುಕ್ಕರ್ ತಳಕ್ಕೆ ಒಂದು ಪ್ಲೇಟ್ ಇಟ್ಟು. ಅದರ ಮೇಲೆ ಈ ಮಿಶ್ರಣವಿರುವ ಪಾತ್ರೆ ಇಟ್ಟು 40 ನಿಮಿಷಗಳ ಕಾಲ ಬೇಯಿಸಿಕೊಂಡರೆ ರುಚಿಕರವಾದ ವೆನಿಲ್ಲಾ ಕೇಕ್ ರೆಡಿ.
(Try Egg Les Vanilla Cake once)