ಚಿಕನ್ ಅಂದ್ರೆ ಸಾಕು ಎಳೆಯ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ತುಂಬಾ ಇಷ್ಟಪಡ್ತಾರೆ. ಚಿಕನ್‌ನಲ್ಲಿ ಸಾರು, ಸುಕ್ಕ, ಕಬಾಬ್ ಸೇರಿದಂತೆ ಇನ್ನು ಅನೇಕ ಖಾದ್ಯಗಳನ್ನು ಮಾಡುತ್ತಾರೆ. ಅದರಲ್ಲಿ ಕಾಳುಮೆಣಸಿನ ಪೌಡರ್‌ನ್ನು ಬಳಸಿ ಮಾಡುವ ಚಿಕನ್ ಪೆಪ್ಪರ್ ಡ್ರೈ ಸೈಡ್ (Chicken Pepper Dry Recipe)ಡಿಶ್ ಆಗಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಚಿಕನ್ ಪೆಪ್ಪರ್ ಡ್ರೈ ಬಹಳ ಸುಲಭ ರೀತಿಯಲ್ಲಿ ತಯಾರಿಸಬಹುದಾಗಿದೆ. ಹಾಗಾದರೆ ಇದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಸಾಮಾಗ್ರಿ :
- ಚಿಕನ್
- ಕಾಳುಮೆಣಸಿನ ಪುಡಿ
- ಹಸಿಮೆಣಸು
- ಕೊತ್ತಂಬರಿ ಸೊಪ್ಪು
- ಅರಶಿನ ಪುಡಿ
- ಈರುಳ್ಳಿ
- ಬೆಳ್ಳುಳ್ಳಿ
- ಶುಂಠಿ
- ಲಿಂಬೆಹಣ್ಣು
- ಕರಿಬೇವಿನ ಸೊಪ್ಪು
ತಯಾರಿಸುವ ವಿಧಾನ :
ಮೊದಲಿಗೆ ಒಂದು ಬಾಣಲೆಗೆ ಎರಡು ಟೇಬಲ್ ಸ್ಪೂನ್‌ನಷ್ಟು ಎಣ್ಣೆಯಲ್ಲಿ ಅರ್ಧ ಕೆಜಿ ಚಿಕನ್‌ಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಲು ಟೇಬಲ್ ಸ್ಪೂನ್‌ನಷ್ಟು ಅರಶಿನವನ್ನು ಹಾಕಿ ಒಂದು ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಅದನ್ನು ಹತ್ತು ನಿಮಿಷಗಳವರೆಗೂ ಮುಚ್ಚಳದಿಂದ ಮುಚ್ಚಿ ಬೇಯಿಸಿಕೊಳ್ಳುವುದರಿಂದ ಮುಕ್ಕಾಲು ಭಾಗದಷ್ಟು ಚಿಕನ್ ಬೆಂದಿರುತ್ತದೆ.. ಇನ್ನೊಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆಗೆ ಸಣ್ಣಕ್ಕೆ ಹಚ್ಚಿಕೊಂಡಿರುವ ಒಂದರಿಂದ ಎರಡು ಗಡ್ಡೆ ಬೆಳ್ಳುಳ್ಳಿ, ಹತ್ತು ಹಸಿಮೆಣಸಿನಕಾಯಿ ಮತ್ತು ಶುಂಠಿಯನ್ನು ಒಂದೊಂದಾಗಿ ಹಾಕಿ ಚೆನ್ನಾಗಿ ಪ್ರೈ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಕರಿಬೇವಿನ ಸೊಪ್ಪುನ್ನು ಹಾಕಿ ಪ್ರೈ ಮಾಡಿಕೊಳ್ಳಬೇಕು. ನಂತರ ಉದ್ದಕ್ಕೆ ಹಚ್ಚಿ ಇಟ್ಟುಕೊಂಡ ಎರಡು ಈರುಳ್ಳಿ ಹಾಗೂ ಚಿಟಿಕೆಯಷ್ಟು ಉಪ್ಪುನ್ನು ಹಾಕಿ ಬಣ್ಣ ಬದಲಾಗುವರೆಗೂ ಪ್ರೈ ಮಾಡಿಕೊಳ್ಳಬೇಕು.
ಇದನ್ನೂ ಓದಿ : Millets : ಚಳಿಗಾಲಕ್ಕೆ ಸಿರಿಧಾನ್ಯಗಳೇ ಬೆಸ್ಟ್ : ಹೇಗೆ ಅಂತೀರಾ…
ಇದನ್ನೂ ಓದಿ : Spinach Green Dal Recipe : ಪಾಲಕ್ ಸೊಪ್ಪಿನ ದಾಲ್ ಪ್ರೈ ತಿಂದಿದ್ರಾ ?
ಇದನ್ನೂ ಓದಿ : Squid fish:ಬೊಂಡಾಸ್ ಪ್ರಿಯರಿಗಾಗಿ ಬೊಂಡಾಸ್ ಸುಕ್ಕ ರೆಸಿಪಿ
ನಂತರ ಇದಕ್ಕೆ ಮೊದಲೇ ಬೇಯಿಸಿ ಇಟ್ಟುಕೊಂಡ ಚಿಕನ್‌ಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಚೆನ್ನಾಗಿ ಮಿಕ್ಸ್ ಮಾಡಿಕೊಂಡ ಚಿಕನ್‌ಗೆ ಎರಡರಿಂದ ನಾಲ್ಕು ಟೇಬಲ್ ಸ್ಪೂನ್‌ನಷ್ಟು ಕಾಳುಮೆಣಸಿನ ಪುಡಿಯನ್ನು ಸರಿಯಾಗಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಐದು ನಿಮಿಷದವರೆಗೆ ಮುಚ್ಚಳವನ್ನು ಮುಚ್ಚಿ ಬೇಯಿಸಬೇಕು.ಕೊನೆಯಲ್ಲಿ ಅದಕ್ಕೆ ಅರ್ಧ ಲಿಂಬೆಹಣ್ಣಿನ ರಸ ಹಾಗೂ ಸಣ್ಣಕ್ಕೆ ಹಚ್ಚಿರುವ ಕೊತ್ತಂಬರಿ ಸೊಪ್ಪುನ್ನು ಹಾಕಿ ಮಿಕ್ಸ್ ಮಾಡಿದರೆ ರುಚಿ ರುಚಿಯಾದ ಚಿಕನ್ ಪೆಪ್ಪರ್ ಡ್ರೈ ಸವಿಯಲು ಸಿದ್ಧವಾಗಿರುತ್ತದೆ. ಇದನ್ನು ಅನ್ನ ರಸಂ ಜೊತೆ ಸೈಡ್ ಡಿಶ್ ಆಗಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದರಲ್ಲಿ ಜಾಸ್ತಿ ಕೊಬ್ಬಿನ ಅಂಶವಿರುವ ಪದಾರ್ಥಗಳನ್ನು ಬಳಸದೇ ಇರುವುದರಿಂದ ಇದನ್ನು ಡಯಟ್‌ನಲ್ಲಿ ಇರುವವರು ತಿನ್ನಬಹುದಾಗಿದೆ. ಅದು ಅಲ್ಲದೇ ಇದರಲ್ಲಿ ಕಾಳುಮೆಣಸು, ಶುಂಠಿ, ಬೆಳ್ಳುಳ್ಳಿಗಳನ್ನು ಬಳಸಿರುವುದರಿಂದ ಗ್ಯಾಸ್ಟ್ರಿಕ್ ಕೂಡ ಆಗುವುದಿಲ್ಲ. ಇನ್ನೂ ಊಟದ ಸಮಯದಲ್ಲಿ ಸೈಡ್ ಡಿಶ್ ಆಗಿ ತಿನ್ನಲು ಈ ಚಿಕನ್ ರೆಸೆಪಿ ಬಹಳಷ್ಟು ರುಚಿಯಾಗಿರುತ್ತದೆ.
Homemade Chicken Pepper Dry Recipe