ಬಹಳ ಇಷ್ಟ ಪಡುವ ಸ್ಟ್ರೀಟ್ ಫುಡ್ ಮೋಮೋಗಳ (Momo Soup)ವಿಷಯ ಬಂದಾಗ ನಿರಾಕರಿಸಲು ಸಾಧ್ಯವೇ ಇಲ್ಲ. ದೆಹಲಿಯ ಮೋಮೋಗಳ ಜನಪ್ರಿಯತೆ ಹೇಗಿದೆಯೆಂದರೆ ಪ್ರತಿ ಬೀದಿಯಲ್ಲಿಯ ಸ್ಟ್ರೀಟ್ ಫುಡ್‌ಗಳ ಮುಂದೆ ಸಾಲು ಹಚ್ಚಿ ನಿಂತ ಮೋಮೋ ಪ್ರಿಯರೇ ಕಾಣುತ್ತಾರೆ. ಸ್ಟೀಮ್ಡ್ ಮೋಮೋ, ತಂದೂರಿ ಮೋಮೋ, ಫ್ರೈಡ್ ಮೋಮೋ, ಚ್ಯಾಕಲೇಟ್ ಮೋಮೋ ಹೀಗೆ ಅದರ ಲಿಸ್ಟ್ ಉದ್ದವೇ ಇದೆ. ಹಾಗೇ ಆಯ್ಕೆ ಮಾಡಲೂ ಬೇಕಾದಷ್ಟಿದೆ. ಒಂದು ಚಿಕ್ಕ ಮೋಮೋ ಟ್ರೀಟ್, ರೆಡ್ ಚಿಲ್ಲಿ ಸಾಸ್ ಮತ್ತು ಬಿಸಿ ಸೂಪ್ ಜೊತೆ ಒಳ್ಳೆ ಕಾಂಬಿನೇಷನ್. ಚಿಕ್ಕದಾಗಿ ಹೆಚ್ಚಿದ ಹಲವು ಬಗೆಯ ತರಕಾರಿಗಳು, ಖಾರ ಮತ್ತು ಮಸಾಲೆಗಳಿಂದ ಸೂಪ್ ಮಾಡಿರುತ್ತಾರೆ. ನಿಮಗೂ ಮೋಮೋಗಳು ಇಷ್ಟವಾದಲ್ಲಿ ನಾವು ನಿಮಗೆ ಆಕರ್ಷಕ ಮೋಮೋ ಸೂಪ್ ರೆಸಿಪಿ ಮಾಡುವುದನ್ನು ಹೇಳುತ್ತಿದ್ದೇವೆ. ಅದನ್ನು ನೀವು ಮನೆಯಲ್ಲಿಯೇ ಸುಲಭ ಮತ್ತು ತ್ವರಿತವಾಗಿ ಮಾಡಬಹುದಾಗಿದೆ.
ಬಹಳಷ್ಟು ಜನ ಅನೇಕ ಮೋಮೋಗಳ ಜೊತೆಗೆ ಅನೇಕ ರೀತಿಯ ಸೂಪ್‌ಗಳನ್ನು ಮಾಡುತ್ತಾರೆ. ಕೆಲವರು ಕ್ಲಿಯರ್ ಸೂಪ್ ಮಾಡಿದರೆ, ಇನ್ನು ಕೆಲವರು ಚಿಕನ್ ಅಥವಾ ವೆಜ್ ಸ್ಟಾಕ್‌ನ ಜೊತೆ ಸರ್ವ ಮಾಡುತ್ತಾರೆ. ಆದರೆ ಅತಿ ಜನಪ್ರಿಯ ರೀತಿ ಎಂದರೆ ಸುಪರ್ ಹಾಟ್ ಮೆಂಚೋ ಸೂಪ್.
ಮೆಂಚೋ ಮೋಮೋ ಸೂಪ್ (Manchow Momo Soup ) ಮಾಡುವುದು ಹೇಗೆ?
ಮೊದಲು ಸಣ್ಣಗೆ ಹೆಚ್ಚಿದ ಕ್ಯಾರೆಟ್, ಕ್ಯಾಬೇಜ್, ಈರುಳ್ಳಿ, ಕ್ಯಾಪ್ಸಿಕಮ್, ಶುಂಠಿ ಮತ್ತು ಬೆಳ್ಳುಳ್ಳಿ ಗಳಂತಹ ತರಕಾರಿಗಳನ್ನು ತೆಗೆದುಕೊಳ್ಳಿ. ದೊಡ್ಡ ಪಾತ್ರೆಗೆ ನೀರು ಹಾಕಿ ಅದಕ್ಕೆ ಹೆಚ್ಚಿಟ್ಟ ಎಲ್ಲಾ ತರಕಾರಿಗಳನ್ನು ಸೇರಿಸಿ ಕುದಿಸಿ. ನಂತರ ಮಸಾಲೆಗಳನ್ನು ಸೇರಿಸಿ. ಸೋಯಾ ಸಾಸ್, ವಿನೇಗಾರ್, ಗ್ರೀನ್ ಚಿಲ್ಲಿ ಸಾಸ್ ಜೊತೆ ಉಪ್ಪು ಮತ್ತು ಕಾಳು ಮೆಣಸಿನ ಪುಡಿ ಸೇರಿಸಿ. ಈಗ ರೆಡಿಯಾಯಿತು ಕೇವಲ 15 ನಿಮಿಷಗಳಲ್ಲಿ ಮಾಡಬಹುದಾದ ಮೆಂಚೋ ಮೋಮೋ ಸೂಪ್.
ಇದನ್ನೂ ಓದಿ : Drumstick Pickle : ನುಗ್ಗೆಕಾಯಿ ಉಪ್ಪಿನಕಾಯಿ ಎಂದಾದರೂ ಸವಿದಿದ್ದೀರಾ? ಇಲ್ಲವಾದರೆ ಈ ನುಗ್ಗೆಕಾಯಿ ಸೀಸನ್‌ನಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ
ಇದನ್ನೂ ಓದಿ :Horse Gram : ಹುರುಳಿ ಕಾಳಿನ ದಿಢೀರ್ ಸಾರು! ಮಾಡುವುದು ಹೇಗೆ ಗೊತ್ತೇ?
(Momo Soup how to make street style manchow momo soup in just 15 minutes)