ಸೋಮವಾರ, ಏಪ್ರಿಲ್ 28, 2025
HomeSpecial StoryPaneer Tikka : ಮನೆಯಲ್ಲೂ ಮಾಡಿ ಪನ್ನೀರ್ ಟಿಕ್ಕಾ

Paneer Tikka : ಮನೆಯಲ್ಲೂ ಮಾಡಿ ಪನ್ನೀರ್ ಟಿಕ್ಕಾ

- Advertisement -

ಬಿಸಿ ಬಿಸಿಯಾದ ರುಚಿ ರುಚಿಯಾದ ಆಹಾರ ಸೇವನೆ ಮಾಡಲು ಎಲ್ಲರೂ ಬಯಸ್ತಾರೆ. ಹಾಗಾಗಿ ಸಮೋಸಾ, ಕಚೋರಿ, ಫಿಜ್ಜಾ ಹೀಗೆ ಹೊರಗಡೆ ಮಾಡಿದ ಫಾಸ್ಟ್ ಫುಡ್ ಗಳನ್ನು ತಿನ್ನುತ್ತಾರೆ. ಅದ್ರ ಬದಲು ಮನೆಯಲ್ಲಿ ಆರೋಗ್ಯಕರವಾದ ತಿಂಡಿಗಳನ್ನು ಸುಲಭವಾಗಿ ಮಾಡಿ ರುಚಿ ಸವಿಯಬಹುದು. ಮನೆಯಲ್ಲಿ ಸರಳವಾಗಿ ಮಾಡುವ ತಿಂಡಿಗಳಲ್ಲಿ ಪನ್ನೀರ್ ಟಿಕ್ಕಾ ಕೂಡ ಒಂದು.

ಪನ್ನೀರ್ ಟಿಕ್ಕಾ ಮಾಡಲು ಬೇಕಾಗುವ ಪದಾರ್ಥ : 250 ಗ್ರಾಂ ಪನ್ನೀರ್, 2 ದೊಡ್ಡ ಚಮಚ ಟೊಮೊಟೋ ಸಾಸ್, 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1/2 ಚಮಚ ಕೆಂಪು ಮೆಣಸಿನ ಪುಡಿ, ¼ ಚಮಚ ಓರೆಗಾನೊ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹುರಿಯಲು ಎಣ್ಣೆ.

ಇದನ್ನೂ ಓದಿ: Banana Halwa : ಬಾಳೆಹಣ್ಣಿನಲ್ಲೂ ಮಾಡಬಹುದು ಹಲ್ವಾ

ಪನ್ನೀರ್ ಟಿಕ್ಕಾ ಮಾಡುವ ವಿಧಾನ : ಮೊದಲು ಪನ್ನೀರನ್ನು ಚೌಕವಾಗಿ ಕತ್ತರಿಸಿಕೊಳ್ಳಿ. ಇದರ ಜೋತೆ ಕ್ಯೇಪ್ಸಿಕಂ ಹಾಗೂ ಈರುಳ್ಳಿಯನ್ನೂ ಕೂಡ ಪನ್ನೀರ್‌ ಜೋತೆ ಸೇರಿಸಿ ಕೊಂಡರೆ ರುಚಿ ಚೆನ್ನಾಗಿರುತ್ತೆ. ನಂತ್ರ ನಾನ್ ಸ್ಟಿಕ್ ಪ್ಯಾನ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ. ನಂತ್ರ ಟೊಮೊಟೋ ಸಾಸ್, ಮೆಣಸಿನ ಪುಡಿ ಹಾಗೂ ಉಪ್ಪನ್ನು ಹಾಕಿ.

ಇದನ್ನೂ ಓದಿ: ಒಮ್ಮೆ ಈ ವೆಜ್ ಬಿರಿಯಾನಿ ತಿಂದ್ರೆ ಮತ್ತೆ ಮತ್ತೆ ಮಾಡದೆ ಬಿಡಲ್ಲ

ನಂತರ ಇದಕ್ಕೆ ಕತ್ತರಿಸಿದ ಪನ್ನೀರ್ ಹಾಕಿ ಸರಿಯಾಗಿ ಬೇಯಿಸಿ. ಪನ್ನೀರಿನ ಮೇಲ್ ಭಾಗವು ಸ್ವಪ ರೋಸ್ಟ್‌ ಆಗುವ ವರೆಗೂ ಬೇಯಿಸಬೇಕು.‌ ಕೊನೆಯಲ್ಲಿ ಓರೆಗಾನೊ ಹಾಕಿದ್ರೆ ಮುಗೀತು. ಪನ್ನೀರ್ ಟಿಕ್ಕಾ ಸವಿಯಲು ಸಿದ್ಧ.

(Paneer Tikka)

RELATED ARTICLES

Most Popular