(Squid fish)ಬೊಂಡಾಸ್ ಮೀನು ತಿನ್ನಲು ಬಹಳ ರುಚಿಕರ. ಈ ಮೀನಿನಿಂದ ಮಾಡುವ ಎಲ್ಲಾ ರೆಸಿಪಿಗಳು ತುಂಬಾ ರುಚಿಯಾಗಿರುತ್ತದೆ. ಅದರಲ್ಲಿ(Squid fish) ಸುಕ್ಕವನ್ನು ಒಮ್ಮೆ ತಿಂದರೆ ಅದರ ರುಚಿಯನ್ನು ಮರೆಯೋದಕ್ಕೆ ಸಾಧ್ಯವಿಲ್ಲ.ಮತ್ತೊಮ್ಮೆ ಬೊಂಡಾಸ್ ಮೀನಿನ ಸುಕ್ಕ ತಿನ್ನಬೇಕು ಅನ್ನಿಸಿಬಿಡುತ್ತದೆ. ಮೀನಿನಲ್ಲಿ ಕೊಬ್ಬಿನ ಅಂಶ ಇಲ್ಲದ ಕಾರಣ ಆರೋಗ್ಯಕ್ಕೂ ಉತ್ತಮ. ಹಾಗಾದ್ರೆ ಬೊಂಡಾ ಸುಕ್ಕ ಇದನ್ನು ಮಾಡುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು:
- ಬೊಂಡಾಸ್ ಮೀನು
- ಎಣ್ಣೆ
- ಬ್ಯಾಡಗಿ ಮೆಣಸು
- ಕೊತ್ತಂಬರಿ ಬೀಜ
- ಜೀರಿಗೆ
- ಪೆಪ್ಪರ್
- ಕಾಯಿತುರಿ
- ಅರಿಶಿಣ
- ಹುಳಿ
- ಈರುಳ್ಳಿ
- ಕರಿಬೇವಿನ ಸೊಪ್ಪು
- ಹಸಿ ಮೆಣಸು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಟೊಮೆಟೊ
- ಉಪ್ಪು
ಮಾಡುವ ವಿಧಾನ:
ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿಕೊಂಡು ಅದಕ್ಕೆ 8 ಬ್ಯಾಡಗಿ ಮೆಣಸು, ಕೊತ್ತಂಬರಿ ಬೀಜ ಎರಡು ಚಮಚ ,ಜೀರಿಗೆ ಅರ್ಧ ಚಮಚ, ಪೆಪ್ಪರ್ ಅರ್ಧ ಕಾರದ ಹದವನ್ನು ನೋಡಿಕೊಂಡು ಹಾಕಿಕೊಳ್ಳಿ,ಎಲ್ಲಾ ಪದಾರ್ಥವನ್ನು ಹುರಿದುಕೊಳ್ಳಬೇಕು. ಮಿಕ್ಸಿ ಜಾರಿನಲ್ಲಿ ಹುರಿದುಕೊಂಡ ಪದಾರ್ಥ ಮತ್ತು ಹುಳಿಯನ್ನು ಹಾಕಿ ಪುಡಿಯನ್ನು ಮಾಡಿಕೊಂಡು ಒಂದು ಬೌಲ್ ನಲ್ಲಿ ಹಾಕಿ ಇಡಬೇಕು. ಕಾಯಿತುರಿ ಅದಕ್ಕೆ ಸ್ವಲ್ಪ ಅರಿಶಿಣವನ್ನು ಬೇರೆಸಿ ಹುರಿದುಕೊಂಡು ಅದನ್ನು ಬದಿಯಲ್ಲಿ ಇಟ್ಟುಕೊಳ್ಳಬೇಕು.
ಇದನ್ನೂ ಓದಿ:Harry Potter Actor Robbie Coltrane : ಹ್ಯಾರಿ ಪಾಟರ್ ಚಲನಚಿತ್ರ ನಟ ರಾಬಿ ಕೋಲ್ಟ್ರೇನ್ ಇನ್ನಿಲ್ಲ
ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಬೇಕು ಅದಕ್ಕೆ ಈರುಳ್ಳಿ , ಕರಿಬೇವು, ಹಸಿ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊವನ್ನು ಬೇಕಾದಲ್ಲಿ ಹಾಕಿಕೊಳ್ಳಬಹುದು. ನಂತರ ಇದಕ್ಕೆ ಹೆಚ್ಚಿಟ್ಟುಕೊಂಡ ಬೊಂಡಾಸ್ ಮೀನನ್ನು ಹಾಕಿ ಬೇಯಿಸಬೇಕು. ಈ ಮೀನು ನೀರು ಬಿಡುವುದರಿದ ಇದಕ್ಕೆ ನೀರು ಹಾಕುವ ಅವಶ್ಯಕತೆ ಇಲ್ಲ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೇಯಲು ಬಿಡಬೇಕು . ಸಂಪೂರ್ಣವಾಗಿ ಬೆಂದನಂತರ ಪುಡಿಮಾಡಿಕೊಂಡ ಮಸಾಲೆಯನ್ನು ಬೇರೆಸಬೇಕು ಅನಂತರ ಕಾಯಿತುರಿಯನ್ನು ಹಾಕಿ ಸೌಟನ್ನು ಆಡಿಸಿ ತೆಗೆದರೆ ರುಚಿ ರುಚಿಯಾಗಿ ಸವಿಯಲು ಬೊಂಡಾಸ್ ಸುಕ್ಕ ರೆಡಿ.
Squid fish Recipe for fish Lovers