ದಸರಾ ರಜೆ ಗೊಂದಲ : ಸೋಮವಾರದಿಂದಲೇ ಶಾಲೆ ಆರಂಭ, ಪರೀಕ್ಷೆ ಮುಂದೂಡಿಕೆ

ಬೆಂಗಳೂರು : Dasara Holiday Not Extend : ರಾಜ್ಯದಲ್ಲಿ ದಸರಾ ರಜೆ ವಿಚಾರದಲ್ಲಿ ಗೊಂದಲ ಏರ್ಪಟ್ಟಿದೆ. ಶಿಕ್ಷಕರು ದಸರಾ ರಜೆಯನ್ನು ಅಕ್ಟೋಬರ್ ಅಂತ್ಯದ ವರೆಗೂ ಮುಂದೂಡಿಕೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೆ ಶಿಕ್ಷಕರ ಬೇಡಿಕೆಗೆ ಸ್ಪಂದಿಸದ ಶಿಕ್ಷಣ ಇಲಾಖೆ ಹಾಗೂ ಸರಕಾರ ಸೋಮವಾರದಿಂದಲೇ ರಾಜ್ಯದಾದ್ಯಂತ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಆದರೆ ಪರೀಕ್ಷೆಯನ್ನು ನವೆಂಬರ್ 3 ಕ್ಕೆ ಮುಂದೂಡಿಕೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಅಕ್ಟೋಬರ್ 17 ರಿಂದ ಕರ್ನಾಟಕ ರಾಜ್ಯದಾದ್ಯಂತ ಶಾಲೆಗಳು ಆರಂಭಗೊಳ್ಳಲಿವೆ. ಆದರೆ ಶಿಕ್ಷಣ ಇಲಾಖೆ ದಸರಾ ರಜೆಯನ್ನು ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಶಿಕ್ಷಕರು, ಪೋಷಕರು ರಜೆ ವಿಸ್ತರಣೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಶಿಕ್ಷಕರ ಸಂಘಗಳು ಕೂಡ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದವು. ಅಷ್ಟೇ ಅಲ್ಲದೇ ವಿಧಾನ ಪರಿಷತ್ ಸದಸ್ಯ, ಮಾಜಿ ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ಸೇರಿದಂತೆ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು ಕೂಡ ಸರಕಾರಕ್ಕೆ ಪತ್ರ ಬರೆದಿದ್ದರು. ಆದರೆ ಶಿಕ್ಷಣ ಸಚಿವರು ಕೊರೊನಾ ಕಾರಣವನ್ನು ನೀಡಿ ದಸರಾ ರಜೆಯನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ನಡುವಲ್ಲೇ ದಸರಾ ರಜೆ ವಿಸ್ತರಣೆ ಮಾಡುವ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಧ್ಯಪ್ರವೇಶ ಮಾಡಬೇಕೆಂಬ ಒತ್ತಡ ಕೇಳಿಬಂದಿತ್ತು. ಆದರೆ ಸಿಎಂ ಮಾತ್ರ ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಈ ನಡುವಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯಕ್ತರು ಹೊಸ ಆದೇಶವನ್ನು ಹೊರಡಿಸಿದ್ದು, ಅಕ್ಟೋಬರ್ 17 ರಿಂದಲೇ ಶಾಲೆಗಳನ್ನು ಆರಂಭಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಕಲಿಕಾ ಪ್ರಕ್ರಿಯ ಅನುಪಾಲನೆ ಕೊರತೆ ಮತ್ತು ಮಕ್ಕಳಿಗೆ ಪರೀಕ್ಷೆಗೆ ಮಾನಸಿಕವಾಗಿ ಸಿದ್ದವಾಗಲು ಕಾಲಾವಕಾಶ ನೀಡುವ ಸಲುವಾಗಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಹೊಸ ಆದೇಶವನ್ನು ಹೊರಡಿಸಲಾಗಿದೆ.

ನವೆಂಬರ್ 3 ರಿಂದ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ನವೆಂಬರ್ 10 ರ ವರೆಗೆ ನಡೆಯಲಿದೆ. ನವೆಂಬರ್ 3 ರಂದು ಪ್ರಥಮ ಭಾಷೆ, ನವೆಂಬರ್ 4 ರಂದು ದ್ವಿತೀಯ ಭಾಷೆ, ನವೆಂಬರ್ 5 ರಂದು ತೃತೀಯ ಭಾಷೆ, ನವೆಂಬರ್ 7 ರಂದು ಗಣಿತ, ನವೆಂಬರ್ 8 ರಂದು ವಿಜ್ಞಾನ, ನವೆಂಬರ್ 9 ರಂದು ಸಮಾಜ ವಿಜ್ಞಾನ ಹಾಗೂ ನವೆಂಬರ್ 10 ರಂದು ದೈಹಿಕ ಶಿಕ್ಷಣ ಪರೀಕ್ಷೆಗಳು ನಡೆಯಲಿವೆ.

Dasara Holiday Not Extend School starts from Monday exam postponed

ದಸರಾ ರಜೆ 1 ತಿಂಗಳು, ಬೇಸಿಗೆ ರಜೆ 3 ತಿಂಗಳು

ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ದಿನದಿಂದಲೂ ರಾಜ್ಯದಲ್ಲಿ ಶಿಕ್ಷಕರ ಮೇಲೆ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಒತ್ತಡ ಹೇರುತ್ತಿದೆ. ಕೊರೊನಾ ಭೀತಿಯ ನಡುವಲ್ಲೇ ಶಿಕ್ಷಕರು ವಿದ್ಯಾಗಮ ಯೋಜನೆಯನ್ನು ಕೈಗೊಂಡಿದ್ದರು. ಅಲ್ಲದೇ ಕೊರೊನಾ ಕಾರ್ಯವನ್ನು ನಿರ್ವಹಿಸಿದ್ದರು. ಆದರೆ ಈ ಬಾರಿಯೂ ದಸರಾ ರಜೆ ಅವಧಿಯಲ್ಲಿ ಕಡಿತ ಮಾಡಲಾಗಿತ್ತು. ಆದ್ರೆ ಈ ಬಾರಿಯೂ ಕಲಿಕಾ ಚೇತರಿಕೆಯ ನೆಪದಲ್ಲಿ ಬೇಸಿಗೆ ರಜೆಯಲ್ಲೂ ಕಡಿತವಾಗಿತ್ತು. ಹೀಗಾಗಿ ಈ ಬಾರಿಯೂ ದಸರಾ ರಜೆಯನ್ನು ವಿಸ್ತರಣೆ ಮಾಡುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಆದರೆ ಅವರು ಕೊರೊನಾ ಕಾರಣ ನೀಡಿ ಈ ಬಾರಿ ಸಹಕಾರ ನೀಡುವಂತೆ ವಿನಂತಿಸಿದ್ದಾರೆ. ಆದರೆ ಮುಂದಿನ ವರ್ಷದಿಂದ ಬೇಸಿಗೆ ರಜೆಯನ್ನು ಎಪ್ರಿಲ್ 10 ರಿಂದ ಮೇ 28 ಹಾಗೂ ದಸರಾ ರಜೆಯನ್ನು ಅಕ್ಟೋಬರ್ 2 ರಿಂದ ಅಕ್ಟೋಬರ್ ಅಂತ್ಯದ ವರೆಗೂ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಅವರು ತಿಳಿಸಿದ್ದಾರೆ.

News Next ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರ ಮಕ್ಕಳು ಹಾಗೂ ಶಿಕ್ಷಕರನ್ನೂ ನೋಡಬೇಕು. ಹಿಂದಿನಿಂದಲೂ ಬೇಸಿಗೆ ರಜೆ ಹಾಗೂ ದಸರಾ ರಜೆ ನೀಡುವುದರ ಹಿಂದೆ ವೈಜ್ಷಾನಿಕ ಕಾರಣವಿದೆ. ವರ್ಷವಿಡಿ ಶ್ರಮವಹಿಸಿ ದುಡಿಯುವ ಶಿಕ್ಷಕರಿಗೆ ವಿಶ್ರಾಂತಿಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ದಸರಾ ರಜೆಯನ್ನು ಒಂದು ತಿಂಗಳು ಹಾಗೂ ಬೇಸಿಗೆ ರಜೆಯನ್ನು ಎರಡು ತಿಂಗಳ ಕಾಲ ನೀಡಲೇ ಬೇಕು. ಇಲ್ಲವಾದ್ರೆ ಸರಕಾರದ ವಿರುದ್ದ ಬಹಿರಂಗ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆಯನ್ನು ನೀಡಿದ್ದಾರೆ.

ಸರಕಾರದ ವಿರುದ್ದ ಶಿಕ್ಷಕರ ಮುನಿಸು

ರಾಜ್ಯದಲ್ಲಿ ಬೇಸಿಗೆ ರಜೆಯ ವಿಚಾರದಲ್ಲಿ ಶಿಕ್ಷಕರು ಹಾಗೂ ಮಕ್ಕಳು ಗೊಂದಲಕ್ಕೆ ಒಳಗಾಗಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶಿಕ್ಷಕರು, ವಿಧಾನ ಪರಿಷತ್ ಸದಸ್ಯರು, ಶಾಸಕರು ಹಾಗೂ ಪೋಷಕರ ಬೇಡಿಕೆಗೂ ಸ್ಪಂಧಿಸಿಲ್ಲ. ಕೇವಲ ಕೊರೊನಾ ಕಾರಣ ನೀಡಿ, ಮಕ್ಕಳ ಶಿಕ್ಷಣದ ನೆಪದಲ್ಲಿ ರಜೆಯನ್ನು ವಿಸ್ತರಣೆ ಸಾಧ್ಯವಿಲ್ಲ ಎಂದಿದ್ದಾರೆ. ಆದ್ರೆ ಕೊರೊನಾ ಸಂಕಷ್ಟದ ಕಾಲದಿಂದಲೂ ರಜೆಯಿಲ್ಲದೇ ದುಡಿಯುತ್ತಿರುವ ಶಿಕ್ಷಕರು ಇದೀಗ ದಸರಾ ಕಡಿತದಿಂದಾಗಿ ಸರಕಾರದ ವಿರುದ್ದ ಮುನಿಸಿಕೊಂಡಿದ್ದಾರೆ. ಇನ್ನೂ ಕೆಲವು ಶಿಕ್ಷಕರು ದಸರಾ ರಜೆ ವಿಸ್ತರಣೆಯಾಗಲಿದೆ ಅನ್ನೋ ಭರವಸೆಯಲ್ಲಿದ್ದರು. ಆದ್ರೀಗ ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಬೇಸಿಗೆ ರಜೆ ವಿಸ್ತರಣೆ ಇಲ್ಲಾ ಎಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೂ ಒಂದಿಲ್ಲೊಂದು ಕಾರಣ ನೀಡಿ ರಜೆ ಅವಧಿ ಕಡಿತ ಮಾಡುತ್ತಿರುವುದು ಶಿಕ್ಷಕ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : CBSE Class 12 Board Exams 2023 :ಸಿಬಿಎಸ್ಇ 10, 12ನೇ ತರಗತಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ

ಇದನ್ನೂ ಓದಿ : ಹಿಜಾಬ್ ಧರಿಸಲು ಶಾಲೆ, ಕಾಲೇಜುಗಳಲ್ಲಿ ಅವಕಾಶವಿಲ್ಲ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Dasara Holiday Not Extend School starts from Monday exam postponed

Comments are closed.