(Watermelon Rind Halwa)ಬೆಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡುವುದರಿಂದ ದೇಹವು ಸದಾ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿನಿಂದ ಜ್ಯೂಸ್ ಮಾಡಿ ಕುಡಿದರೆ ಹಲವು ಆರೋಗ್ಯಕರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಅದಕ್ಕೆ ಉಪ್ಪು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ತಿನ್ನುತ್ತೇವೆ. ಆದರೆ ಇದರ ಸಿಪ್ಪೆಯಿಂದ ಹಲ್ವ ಮಾಡಿ ತಿನ್ನುವ ಮಾಹಿತಿ ಯಾರಿಗೂ ತಿಳಿದಿರುವುದಿಲ್ಲ. ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಹಲ್ವ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ತಿಳಿಯೋಣ.
(Watermelon Rind Halwa)ಬೇಕಾಗುವ ಸಾಮಾಗ್ರಿಗಳು:
- ಕಲ್ಲಂಗಡಿ ಹಣ್ಣಿನ ಸಿಪ್ಪೆ( ಬಿಳಿ ಭಾಗ)
- ಎಣ್ಣೆ
- ತುಪ್ಪ
- ರವೆ
- ಕಡ್ಲೆ ಹಿಟ್ಟು
- ಸಕ್ಕರೆ
- ಉಪ್ಪು
- ಹಾಲು
- ಬಾದಾಮಿ
- ದ್ರಾಕ್ಷಿ
ಮಾಡುವ ವಿಧಾನ:
ಮೊದಲಿಗೆ ಕಲ್ಲಂಗಡಿ ಹಣ್ಣಿನ ಬಿಳಿ ದಪ್ಪ ಭಾಗವನ್ನು ಸಣ್ಣ ತುಂಡುಗಳಾಗಿ ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಇಟ್ಟುಕೊಳ್ಳಬೇಕು. ಬಾಣಲೆಗೆ ಎರಡು ಚಮಚ ಎಣ್ಣೆ ಮತ್ತು ಮೂರು ಚಮಚ ತುಪ್ಪ ಹಾಕಿಕೊಳ್ಳಬೇಕು. ತುಪ್ಪ ಕರಗಿದ ನಂತರ ಮೂರು ಚಮಚ ರವೆ ಹಾಕಿ ಹುರಿದುಕೊಳ್ಳಬೇಕು ಅನಂತರ ಮೂರು ಚಮಚ ಕಡ್ಲೆಹಿಟ್ಟು ಹಾಕಿ ಸೌಟನ್ನು ಆಡಿಸಬೇಕು ನಂತರ ಇದಕ್ಕೆ ರುಬ್ಬಿಕೊಂಡ ಕಲ್ಲಂಗಡಿ ಹಣ್ಣಿನ ಬಿಳಿ ಭಾಗವನ್ನು ಹಾಕಿಕೊಂಡು ದೊಡ್ಡ ಉರಿಯಲ್ಲಿ ಬೆಯಿಸಿಕೊಳ್ಳಬೇಕು. ದಪ್ಪ ಹದಕ್ಕೆ ಬರುತ್ತಿದ್ದ ಹಾಗೆ ಕಾಲು ಕಪ್ ಸಕ್ಕರೆ ಮತ್ತು ರುಚಿಗೆ ಒಂದು ಚಿಟಿಕೆ ಉಪ್ಪು ಸೇರಿಸಬೇಕು . ಅನಂತರ ಕಾಲು ಕಪ್ ಹಾಲು ಹಾಕಿ ಸೌಟನ್ನು ಆಡಿಸಬೇಕು. ಒಂದೆರಡು ನಿಮಿಷದ ನಂತರ ದಪ್ಪ ಹದಕ್ಕೆ ಬರುತ್ತಿದ್ದ ಹಾಗೆ ತಳ ಬಿಡುತ್ತದೆ ಇದನ್ನು ಒಂದು ಬೌಲ್ ಗೆ ಹಾಕಿಕೊಂಡು ಬಾದಾಮಿ ಮತ್ತು ದ್ರಾಕ್ಷಿ ಹಾಕಿದರೆ ರುಚಿಯಾಗಿ ಸವಿಯಲು ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಹಲ್ವ ರೆಡಿ. (ರವೆ ಮತ್ತು ಕಡಲೆಹಿಟ್ಟು ಹಾಕಿಕೊಳ್ಳುವುದರಿಂದ ಕಲ್ಲಂಗಡಿ ಸಿಪ್ಪೆಯಲ್ಲಿರುವ ನೀರಿನ ಅಂಶವನ್ನು ಹಿರಿಕೊಳ್ಳಲು ಸಹಾಯ ಮಾಡುತ್ತದೆ)
ಇದನ್ನೂ ಓದಿ:Banana Kesaribath Recipe :ತುಪ್ಪ ಬಳಸದೆ ರುಚಿಯಾಗಿ ಬಾಳೆಹಣ್ಣಿನ ಕೇಸರಿ ಬಾತ್ ತಯಾರಿಸಿ
ಇದನ್ನೂ ಓದಿ:Gooseberry Chocolate :ಎಂದಾದರೂ ತಿಂದಿದ್ದಿರಾ ನೆಲ್ಲಿಕಾಯಿ ಚಾಕಲೇಟ್ ?
ಇದನ್ನೂ ಓದಿ:Fenugreek Gravy:ಪಲ್ಯದ ಬದಲು ಸ್ಫೆಷಲ್ ಮೆಂತೆ ಸೊಪ್ಪಿನ ಗ್ರೇವಿ
ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ನೀರಿನ ಅಂಶ ಇರುವುದರಿಂದ ಹೊಟ್ಟೆಯು ಸದಾ ತುಂಬಿರುವಂತೆ ಮಾಡಿ ಅತಿಯಾಗಿ ತಿನ್ನದಂತೆ ತಡೆಯುವುದು. ರಕ್ತದಲ್ಲಿನ ಕೊಲೆಸ್ಟ್ರಾಲ್ ನಿರ್ವಹಣೆ ಮಾಡಲು ಕಲ್ಲಂಗಡಿ ಹಣ್ಣು ಸಹಕಾರಿ ಆಗಿದೆ . ಹೀಗಾಗಿ ಹೃದಯದ ಕಾಯಿಲೆಯ ಅಪಾಯ ತಡೆಯುತ್ತದೆ.
ಇದನ್ನೂ ಓದಿ:kaju katli :ದುಬಾರಿ ಬೆಲೆಯ ಕಾಜು ಕಟ್ಲಿ ಮನೆಯಲ್ಲೇ ತಯಾರಿಸಿಕೊಳ್ಳಿ
Watermelon Rind Halwa Try making delicious halwa with watermelon rind