ಬೆಂಗಳೂರು : operation buldozer : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ದಿನವೂ ಆಪರೇಷನ್ ಬುಲ್ಡೋಜರ್ ಸದ್ದು ಜೋರಾಗಿದೆ. ಮಹದೇವಪುರ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಬಿಲ್ಡಿಂಗ್ಗಳನ್ನು ಕಟ್ಟಿದ್ದ ಶ್ರೀಮಂತ ಮಾಲೀಕರಿಗೆ ಜೆಸಿಬಿ ಸದ್ದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಳೆಯಿಂದಾಗಿ ಮಹದೇವಪುರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಬಳಿಕ ಸರ್ಕಾರ ಎಚ್ಚೆತ್ತಿದ್ದು ಈ ವ್ಯಾಪ್ತಿಯಲ್ಲಿ ಬುಲ್ಡೋಜರ್ಗಳು ಘರ್ಜನೆ ಶುರುವಿಟ್ಟುಕೊಂಡಿವೆ.
ಇನ್ನು ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.ರಾಜಕಾಲುವೆ ಮೇಲೆ ಕಟ್ಟಡಗಳು ಇಲ್ಲದಿದ್ದರೂ ಸಹ ಬಿಲ್ಡಿಂಗ್ ಧ್ವಂಸ ಮಾಡುತ್ತಿದ್ದಾರೆಂಬ ಆರೋಪಗಳೂ ಸಹ ಕೇಳಿ ಬರುತ್ತಿದೆ. ಪ್ರಭಾವಿ ವ್ಯಕ್ತಿಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ರಾಜಕಾಲುವೆ ಮೇಲೆ ನಮ್ಮ ಮನೆ ಇಲ್ಲದೇ ಇದ್ದರೂ ಸಹ ಬುಲ್ಡೋಜರ್ಗಳನ್ನು ಹತ್ತಿಸಲಾಗುತ್ತಿದೆ. ರಾಜಕಾಲುವೆ ಮೇಲೆ ಇರುವ ಪ್ರಭಾವಿಗಳ ಮನೆಯನ್ನು ಮುಟ್ಟದೇ ರಕ್ಷಣೆ ಮಾಡಲಾಗುತ್ತಿದೆ ಎಂದು ಮಹದೇವಪುರದ ನಿವಾಸಿಗಳು ಆರೋಪಿಸಿದ್ದಾರೆ.
ಆಪರೇಷನ್ ಬುಲ್ಡೋಜರ್ ಕಾರ್ಯಾಚರಣೆಯ ಎರಡನೇ ದಿನವಾದ ಇಂದು ಕೆ.ಆರ್ ಪುರಂನ ಬಸವನಪುರ ವಾರ್ಡಿನ ಗಾಯತ್ರಿ ಬಡಾವಣೆ, ದೇವಸಂದ್ರ ಸ್ಮಶಾನದಿಂದ ಶೀಗೆಹಳ್ಳಿ ಕೆರೆಗೆ ಸಂಪರ್ಕಿಸುವ ರಾಜಕಾಲುವೆ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯ ನಿವಾಸಿಗಳು ಬಿಬಿಎಂಪಿ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಪಾರ್ಟ್ಮೆಂಟ್ಗಳನ್ನು ಬಚಾವ್ ಮಾಡುವ ಸಲುವಾಗಿ ನಮ್ಮ ಚಿಕ್ಕ ಪುಟ್ಟ ಮನೆಗಳನ್ನು ಕೆಡವುತ್ತಿದ್ದಾರೆ. ಇಲ್ಲೇ ಸಮೀಪದಲ್ಲಿ ಪ್ರಭಾವಿ ರಾಜಕಾರಣಿಯ ಕಾಲೇಜಿದೆ. ಅದೂ ರಾಜಕಾಲುವೆ ಮೇಲಿದೆ. ಆದರೆ ಆ ಕಾಲೇಜು ಕಟ್ಟಡಕ್ಕೆ ಒಂದು ನೋಟಿಸ್ ಕೂಡ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ರಾಜಕಾಲುವೆ ಮೇಲೆ ನಮ್ಮ ಮನೆ ನಿರ್ಮಾಣವಾಗಿಲ್ಲ ಎಂಬುದಕ್ಕೆ ನಮ್ಮಲ್ಲಿ ದಾಖಲೆಗಳಿವೆ. ಆದರೆ ಈ ದಾಖಲೆಗಳನ್ನು ತೋರಿಸಿದರೂ ಸಹ ಅಧಿಕಾರಿಗಳು ನಮ್ಮ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ರಾಜಕಾರಣಿಗಳ ಮನೆಗಳನ್ನು ಸರ್ವೇ ಕೂಡ ಮಾಡುತ್ತಿಲ್ಲ. ಆದರೆ ಸಾಮಾನ್ಯರ ವಿಚಾರಕ್ಕೆ ಬಂದರೆ ಮಾತ್ರ ಕ್ಷಣಮಾತ್ರದಲ್ಲಿ ನಮ್ಮ ಮನೆಯ ಕಾಂಪೌಂಡ್ ಹಾಗೂ ಗೋಡೆಗಳನ್ನೆಲ್ಲ ತೆರವು ಮಾಡಲಾಗುತ್ತಿದೆ. ಸರ್ಕಾರ ಈ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂದು ಮನೆ ಕಾಂಪೌಂಡ್ ಕಳೆದುಕೊಂಡ ಮಹಿಳೆಯೊಬ್ಬರು ಆಗ್ರಹಿಸಿದ್ದಾರೆ.
ಇದನ್ನು ಓದಿ : Dinesh Karthik: 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಆಡಲಿದ್ದಾರೆ ಡಿಕೆ ; ನಾಲ್ಕೇ ಶಬ್ದಗಳಲ್ಲಿ ಖುಷಿ ಹಂಚಿಕೊಂಡ ಕಾರ್ತಿಕ್
ಇದನ್ನೂ ಓದಿ : ICC T20 World Cup India Team: ಭಾರತ ಟಿ20 ವಿಶ್ವಕಪ್ ತಂಡದಲ್ಲೊಬ್ಬ “ಕೋಟಾ” ಪ್ಲೇಯರ್
2nd day for operation buldozer in bengaluru