Mobile Phone Battery Explodes : ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ 8 ತಿಂಗಳ ಮಗು ಸಾವು

ಉತ್ತರಪ್ರದೇಶ :(Mobile Phone Battery Explodes) ಮೊಬೈಲ್‌ ಪೋನ್‌ ಬ್ಯಾಟರಿ ಸ್ಟೋಟಗೊಂಡು 8 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಪೋಷಕರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಕೇವಲ ಆರು ದಿನಗಳ ಹಿಂದೆಯಷ್ಟೇ ಮೊಬೈಲ್‌ ಪೋನ್‌ ಖರೀದಿ ಮಾಡಲಾಗಿತ್ತು. ಮೊಬೈಲ್‌ ಪೋನ್‌ನ ಬ್ಯಾಟರಿ ಊದಿಕೊಂಡಿತ್ತು. ಮಗು ಇರುವ ರೂಂನಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕಿ ತಾಯಿ ಕುಸುಮಾ ಕಶ್ಯಪ್ ಹೊರಗೆ ಹೋಗಿದ್ದಳು. ಈ ವೇಳೆಯಲ್ಲಿ ಕೋಣೆಯಲ್ಲಿ ದೊಡ್ಡ ಮಟ್ಟದ ಸದ್ದು ಕೇಳಿಬಂದಿತ್ತು. ತಾಯಿ ಓಡಿ ಹೋಗಿ ನೋಡುವಾಗ ಸ್ಪೋಟದ ತೀವ್ರತೆಗೆ ಮಗು ನಂದಿನಿ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

‘ಪೋಷಕರ ನಿರ್ಲಕ್ಷ್ಯ’
ಮಗು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ಪೋಷಕರ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ತಂದೆ ಸುನೀಲ್ ಕುಮಾರ್ ಕಶ್ಯಪ್ ಕಾರ್ಮಿಕನಾಗಿದ್ದು, ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಜೊತೆಗೆ ವಿದ್ಯುತ್ ಸಂಪರ್ಕವಿಲ್ಲದೆ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸೋಲಾರ್‌ ಪ್ಲೇಟ್‌ ಮತ್ತು ಬ್ಯಾಟರಿ ಸಹಾಯದಿಂದ ಮೊಬೈಲ್‌ ಪೋನ್‌ ಚಾರ್ಜ್‌ ಮಾಡುತ್ತಿತ್ತು. ಪತ್ನಿ ತನ್ನ ಮಕ್ಕಳ ಜೊತೆಯಲ್ಲಿ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು.

ಊಟದ ನಂತರ ತನ್ನ ಮಕ್ಕಳನ್ನು ಮಲಗಿಸಿ, ಮಗುವನ್ನು ಪ್ರತ್ಯೇಕವಾಗಿ ಮಲಗಿಸಿ ಮಗು ಮಲಗಿದ್ದ ಕೊಠಡಿಯಲ್ಲಿ ತನ್ನ ಮೊಬೈಲ್‌ ಪೋನ್‌ ಚಾರ್ಜ್‌ಗೆ ಹಾಕಿದ್ದಳು. ಕುಸಮಾ ನೆರೆ ಹೊರೆಯವರೊಂದಿಗೆ ಮಾತನಾಡುತ್ತಿದ್ದ ವೇಳೆಯಲ್ಲಿ ಮಗಳು ಸಹಾಯಕ್ಕಾಗಿ ಕೂಗುತ್ತಿರುವುದನ್ನು ಕೇಳಿ ಓಡಿ ಬಂದಿದ್ದಾಳೆ. ಬಂದು ನೋಡಿದ ತಾಯಿಗೆ ಆಘಾತವಾಗಿತ್ತು.

ನಾವು ಸಾಕಷ್ಟು ಬಡವರಾಗಿದ್ದು, ಕೀಪ್ಯಾಡ್ ಫೋನ್‌ಗಳನ್ನು ಬಳಸುತ್ತಿದ್ದೇವೆ. ಯುಎಸ್‌ಬಿ ಕೇಬಲ್ ಬಳಸಿ ಫೋನ್ ಚಾರ್ಜ್ ಆಗುತ್ತಿದೆ ಆದರೆ ಅಡಾಪ್ಟರ್ ಸಂಪರ್ಕಗೊಂಡಿಲ್ಲ, ಅದಕ್ಕಾಗಿಯೇ ಅದು ಸ್ಫೋಟಗೊಂಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಮ್ಮ ಬಳಿಯಲ್ಲಿ ಹೆಚ್ಚು ಹಣ ಇರಲಿಲ್ಲ. ಒಂದೊಮ್ಮೆ ಉತ್ತಮ ಆಸ್ಪತ್ರೆಗೆ ದಾಖಲು ಮಾಡಿದ್ದರೆ ಮಗುವಿನ ಜೀವವನ್ನು ಉಳಿಸಬಹುದಿತ್ತು ಎಂದು ಸುನೀಲ್ ಅವರ ಸಹೋದರ ಅಜಯ್ ಕುಮಾರ್ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಕುಟುಂಬಸ್ಥರು ಈ ಕುರಿತು ದೂರು ನೀಡಲು ನಿರಾಕರಿಸಿದ್ದಾರೆ. ಮೊಬೈಲ್‌ ಪೋನ್‌ ಸ್ಪೋಟದಿಂದ ಮಗುವಿನ ಸಾವು ಸಂಭವಿಸಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಫರೀದ್‌ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹರ್ವೀರ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ : Kerala Kannur : ಕಣ್ಣೂರಿನಲ್ಲಿ ಬೀದಿನಾಯಿಗಳ ದಾಳಿಯಿಂದ ಬಾಲಕರಿಬ್ಬರು ಗ್ರೇಟ್‌ ಎಸ್ಕೇಪ್‌ : WATCH VIDEO

ಇದನ್ನೂ ಓದಿ : Fire accident : ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಅಗ್ನಿ ಅನಾಹುತದ ಭೀಕರ ದೃಶ್ಯಗಳು

8 Month Old Infant Dies Mobile Phone Battery Explodes Bareilly in Uttar Pradesh

Comments are closed.