Bangalore Power Cut : ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮುಂದಿನ ಎರಡು ದಿನಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೆಂಗಳೂರು ಪವರ್ ಸಪ್ಲೈ ಕಂಪನಿ (BESCOM) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ನಿರ್ವಹಣಾ ಕಾರ್ಯವನ್ನು ಕೈಗೊಂಡಿದೆ. ಬೆಂಗಳೂರಲ್ಲಿ ಯಾವ ದಿನ, ಯಾವ ಏರಿಯಾದಲ್ಲಿ ವಿದ್ಯುತ್ ಕಡಿತವಾಗಲಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದಿನಿಂದ ನವೆಂಬರ್ 22 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ಕಡಿತವಾಗಲಿದೆ. ಶುಕ್ರವಾರದ ವರೆಗೂ ಕೂಡ ವಿದ್ಯುತ್ ವ್ಯತಯವಾಗುವ ಸಾಧ್ಯತೆಯಿದೆ. ದುರಸ್ತಿ, ನವೀಕರಣ, ಆಧುನೀಕರಣ, ಡಿಟಿಸಿ ರಚನೆ ನಿರ್ವಹಣೆ, ಲೈನ್ ನಿರ್ವಹಣೆ ಕಾರ್ಯ ನಡೆಯಲಿದೆ.

ಇನ್ನು ಓವರ್‌ಹೆಡ್‌ನಿಂದ ಭೂಗತಕ್ಕೆ ಕೇಬಲ್‌ಗಳನ್ನು ಬದಲಾವಣೆ, ರಿಂಗ್ ಮುಖ್ಯ ಘಟಕದ ನಿರ್ವಹಣೆ, ನೀರು ಸರಬರಾಜು ಕಾರ್ಯ ಸೇರಿದಂತೆ ಹಲವು ಕಾರ್ಯಗಳನ್ನು ನಡೆಸಲಾಗುತ್ತದೆ. ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವಿನ ಅವಧಿಯಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ.
ಇದನ್ನೂ ಓದಿ : HSRP ನೋಂದಣಿ ಫಲಕ ಅಳವಡಿಕೆಗೆ ಮತ್ತಷ್ಟು ಕಾಲಾವಕಾಶ : ವಾಹನ ಸವಾರರಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ
ಸೋಮವಾರ ನವೆಂಬರ್ 20:
34, 35 ಮತ್ತು 36 ನೇ ಕ್ರಾಸ್, 2 ನೇ ಬ್ಲಾಕ್, ರಾಜಾಜಿನಗರ, 4 ನೇ ಬ್ಲಾಕ್, 53 ನೇ ಕ್ರಾಸ್, 54 ನೇ ಕ್ರಾಸ್, 6 ನೇ ಮುಖ್ಯ ರಸ್ತೆ, 5 ನೇ ಬ್ಲಾಕ್, ಹೆಚ್.ಹಳ್ಳಿ ಮುಖ್ಯ ರಸ್ತೆ, RPC ಲೇಔಟ್, ಶಿವಾನಂದ ನಗರ, ನೇತಾಜಿ ಲೇಔಟ್, ಅತ್ತಿಗುಪ್ಪೆ, ಒಮೃತಿ ನಗರ, ಮಾರುತಿ ನಗರ ಟೆಂಪಲ್ ರಸ್ತೆ, ಲಕ್ಷ್ಮಣ ನಗರ, ಹಳೆ ಪಟಾಕಿ ಗೋಡೌನ್ ರಸ್ತೆ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಬರ್ತಿಲ್ಲ ಯಾಕೆ ? ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಅಸಲಿ ಕಾರಣ
ನವೆಂಬರ್ 21 ಮಂಗಳವಾರ:
ಎಸ್ ಜೆಎಂ ನಗರ, ಬಾಬು ಜಗಜೀವನನಗರ ಮತ್ತಿತರ ಪ್ರದೇಶಗಳು, ದೇವರಾಜ ಅರಸು ಬಡವಾಣೆ, ವಿಜಯನಗರ ಬಡವಾಣೆ, ರಾಜೀವ್ ಗಾಂಧಿ ಬಡಾವಣೆ, ಎಸ್ ಪಿ ಕಚೇರಿ, ಆರ್ ಟಿಒ ಕಚೇರಿ ಹಾಗೂ ಎಸ್ ಎಂಕೆ ನಗರ.
ಇದನ್ನೂ ಓದಿ : 10ನೇ ತರಗತಿ ಉತ್ತೀರ್ಣರಾದವರಿಗೆ ಗುಡ್‌ನ್ಯೂಸ್ : ಅಂಚೆ ಕಚೇರಿಯಲ್ಲಿ ಕೆಲಸ, 81000 ರೂ. ವೇತನ
ಬುಧವಾರ ನವೆಂಬರ್ 22:
ಚೋಳೂರುಪಾಳ್ಯ, ಪ್ರೇಮನಗರ, ಶಂಕರಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಯುನಾನಿ ಆಸ್ಪತ್ರೆ, ನಿರೀಕ್ಷಿತ ಭವನ, ಪಿ & ಟಿ ಲೇಔಟ್. ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಲ್ಲಿ ಲೈನ್ ನಿರ್ವಹಣೆ, ಓವರ್‌ಹೆಡ್‌ನಿಂದ ಭೂಗತಕ್ಕೆ ಕೇಬಲ್‌ಗಳ ಸ್ಥಳಾಂತರ, ಡಿಟಿಸಿ ರಚನೆ ನಿರ್ವಹಣೆ, ನೀರು ಸರಬರಾಜು ಕೆಲಸ, ಜಂಪ್‌ಗಳನ್ನು ಬಿಗಿಗೊಳಿಸುವುದು, ಹದಗೆಟ್ಟ ಕಂಬಗಳ ಬದಲಿ, ಭೂಗತ ಕೇಬಲ್ ಹಾನಿಯ ದುರಸ್ತಿ ಮತ್ತು ಇನ್ನೂ ಹೆಚ್ಚಿನವು ಸೇರಿವೆ.
3-day power cut in Bangalore Here is the complete information about which area there will be no power on which day