HSRP ನೋಂದಣಿ ಫಲಕ ಅಳವಡಿಕೆಗೆ ಮತ್ತಷ್ಟು ಕಾಲಾವಕಾಶ : ವಾಹನ ಸವಾರರಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ

HIGH SECURITY REGISTRATION PLATE  : ಸರ್ಕಾರಗಳು ಬದಲಾದಂತೆ ಜನರ ಭದ್ರತೆ ಹಾಗೂ ಅನುಕೂಲದ ನೆಪದಲ್ಲಿ ನಿಯಮಗಳು ಬದಲಾಗುತ್ತಲೇ ಇರುತ್ತವೆ.  ಸದ್ಯ ರಾಜ್ಯದ ಹಾಗೂ ದೇಶದ ವಾಹನ ಸವಾರರಿಗೆ ಸರ್ಕಾರ ನಿಯಮ

High Security Registaration Plate : ಸರ್ಕಾರಗಳು ಬದಲಾದಂತೆ ಜನರ ಭದ್ರತೆ ಹಾಗೂ ಅನುಕೂಲದ ನೆಪದಲ್ಲಿ ನಿಯಮಗಳು ಬದಲಾಗುತ್ತಲೇ ಇರುತ್ತವೆ.  ಸದ್ಯ ರಾಜ್ಯದ ಹಾಗೂ ದೇಶದ ವಾಹನ ಸವಾರರಿಗೆ ಸರ್ಕಾರ ನಿಯಮ ಬದಲಾವಣೆಯ ಶಾಕ್ ನೀಡಿತ್ತು. ಅದರಲ್ಲೂ ಹೈ ಸೆಕ್ಯೂರಿಟಿ ವಾಹನ ನೋಂದಣಿ ಫಲಕ ನಿಯಮವನ್ನು (HSRP )ಅಳವಡಿಸಿಕೊಳ್ಳೋದಿಕ್ಕೆ ನೀಡಿದ ಕಾಲಾವಧಿ ಜನರ ಆತಂಕಕ್ಕೆ ಕಾರಣವಾಗಿತ್ತು. ಏನಿದು ನಿಯಮ ಇಲ್ಲಿದೆ ಡಿಟೇಲ್ಸ್.

2019 ಕ್ಕೂ ಮೊದಲೇ ಖರೀದಿ ಮಾಡಿರೋ ಅಷ್ಟೂ ವಾಹನಗಳಿಗೆ ಹೈ ಸೆಕ್ಯೂರಿಟಿ ವಾಹನ ನೋಂದಣಿ ಫಲಕ (High Security Registaration Plate) ಅಥವಾ HSRP ಅಳವಡಿಸಬೇಕು ಅಂತ ಕೇಂದ್ರ ಸರ್ಕಾರ ಆದೇಶಿಸಿತ್ತು. ಈ ಆದೇಶವನ್ನು ಪಾಲಿಸೋಕೆ ಮತ್ತೊಮ್ಮೆ ವಾಹನಗಳ ನಂಬರ್ ಪ್ಲೇಟ್ ಗಾಗಿ ಹಣ ಖರ್ಚು ಮಾಡೋಕೆ ವಾಹನ ಮಾಲೀಕರು ಹಿಂದೆ ಮುಂದೆ ನೋಡಲು ಆರಂಭಿಸಿದ್ರು‌.

High Security Registaration Plate HSRP time Extend, Government Gives Good News for Vehical Owners
Image Credit to Original Source

ಈ ಹೊಸ ನಿಯಮದ ಅನ್ವಯ ಇದೇ ತಿಂಗಳ ಅಂದ್ರೆ ನವೆಂಬರ್ 17ರೊಳಗೆ ಹೊಸ ನಂಬರ್ ಪ್ಲೇಟ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕಿತ್ತು. ಆದ್ರೆ, ಇದೀಗ ರಾಜ್ಯದ ಜನರ ಹಿತದೃಷ್ಟಿಯಿಂದ ರಾಜ್ಯ ಸಾರಿಗೆ ಇಲಾಖೆ ಹೆಚ್ಚಿನ ಗಡುವು ನೀಡಿದ್ದು ವಾಹನ ಮಾಲೀಕರಿಗೆ ಸ್ವಲ್ಪ ಕಾಲಾವಕಾಶ ಸಿಕ್ಕಂತಾಗಿದೆ.

ಇದನ್ನೂ ಓದಿ : 11.5 ಕೋಟಿ ಪ್ಯಾನ್ ಕಾರ್ಡ್ ರದ್ದು : ನಿಮ್ಮ ಪ್ಯಾನ್ ಕಾರ್ಡ್ ಕೂಡ ರದ್ದಾಗಿದೆಯಾ ? ಯಾವುದಕ್ಕೂ ಒಮ್ಮೆ ಪರಿಶೀಲಿಸಿ

HSRP ಅಳವಡಿಸೋದಕ್ಕೆ ಕೇಂದ್ರ ಸರ್ಕಾರ ನವೆಂಬರ್ 17 ರ ತನಕ ಅವಕಾಶ ನೀಡಿತ್ತು. ಆದರೆ ಲಕ್ಷಗಟ್ಟಲೇ ವಾಹನ ಮಾಲೀಕರು ಕೊನೆ ದಿನಾಂಕ ಸಮೀಪಿಸಿದರೂ ನಂಬರ್ ಪ್ಲೇಟ್ ಬದಲಾಯಿಸಿರಲಿಲ್ಲ. ಹೀಗಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ ರಾಜ್ಯ ಸಾರಿಗೆ ಇಲಾಖೆ ಗಡುವು ವಿಸ್ತರಿಸಿದೆ. ಈ ತಿಂಗಳ 17ರ ಬದಲಾಗಿ ಫೆಬ್ರವರಿ 17ರವರೆಗೂ ಸಮಯ ನೀಡಿದೆ.

ಈ ಕುರಿತು ಬುಧವಾರ ಸಂಜೆಯೊಳಗೆ ಅಧಿಕೃವಾದ ಪ್ರಕಟಣೆ ಕೂಡ ಹೊರಬರಲಿದೆ ಎಂದು ಕರ್ನಾಟಕ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. HSRP ಅಳವಡಿಸಲು ವೆಬ್‌ಸೈಟ್ ಮುಖಾಂತರ ಬುಕ್ಕಿಂಗ್ ಮಾಡಬೇಕು. ಕೆಲವೊಮ್ಮ ವೆಬ್‌ಸೈಟ್‌ಗಳ ಸರ್ವರ್‌ಗಳು ನಿಧಾನವಾಗಿದ್ದು, ಇದ್ರಿಂದಾಗಿ ಸೂಕ್ತ ಸಮಯಕ್ಕೆ ನೋಂದಣಿ ಮಾಡಲು ಅನೇಕರಿಗೆ ಆಗಿಲ್ಲ.

ಇದರಿಂದಾಗಿ ಗಡುವು ವಿಸ್ತರಣೆ ಮಾಡ್ತಿರೋದಾಗಿ ಸಾರಿಗೆ ಸಚಿವರು ತಿಳಿಸಿದ್ದಾರೆ. HSRP ಯನ್ನು ಸರ್ವೀಸ್ ಸೆಂಟರ್‌ಗಳಲ್ಲಿ ಹಾಗೂ ಮನೆಗಳಲ್ಲಿ ಫಿಟ್ ಮಾಡಿಸಲು ಅವಕಾಶ ನೀಡಲಾಗಿದೆ. ಫಿಟ್ಟಿಂಗ್ ಮೊತ್ತವನ್ನೂ ಕೂಡ ವೆಬ್‌ಸೈಟ್‌ನಲ್ಲೇ ಪಾವತಿ ಮಾಡಿಸಿ ಕೊಳ್ಳಲಾಗ್ತಿದೆ. ಈ ದರವನ್ನು ಹೊರತುಪಡಿಸಿ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ.

ಇದನ್ನೂ ಓದಿ : ಜನಧನ್‌ ಖಾತೆ ಹೊಂದಿದವರಿಗೆ ಗುಡ್‌ನ್ಯೂಸ್‌ : ನಿಮ್ಮ ಖಾತೆಗೆ ಜಮೆ ಆಗಲಿದೆ 2 ಲಕ್ಷ ರೂಪಾಯಿ

ಒಂದು ವೇಳೆ ಯಾರಾದ್ರೂ ಡಿಮ್ಯಾಂಡ್ ಮಾಡಿದ್ರೆ, ಸಾರಿಗೆ ಇಲಾಖೆಯ ಆಯುಕ್ತರ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಅಂತಹ ಡೀಲರ್‌ಗಳ ವಿರುದ್ಧ ಸಾರಿಗೆ ಇಲಾಖೆ ಕ್ರಮ ತೆಗೆದುಕೊಂಡು ಬ್ಲಾಕ್ ಲಿಸ್ಟ್‌ಗೆ ಸೇರಿಸೋದ್ರ ಜೊತೆಗೆ ಪ್ರಕರಣವನ್ನೂ ದಾಖಲು ಮಾಡುವುದಾಗಿ ಸಾರಿಗೆ ಸಚಿವರು ತಿಳಿಸಿದ್ದಾರೆ.

High Security Registaration Plate HSRP time Extend, Government Gives Good News for Vehical Owners
Image Credit : Business League

ಕೆಲವರಿಗೆ ವಾಹನಗಳನ್ನು ತೆಗೆದುಕೊಂಡು ಸರ್ವೀಸ್ ಸೆಂಟರ್‌ಗಳಿಗೆ ಹೋಗಲು ಅನುಕೂಲ ಇರೋದಿಲ್ಲ. ಅಂಥವರು ಮನೆಯ ಬಾಗಿಲಲ್ಲೇ ಫಿಟ್ಟಿಂಗ್ ಮಾಡಿಸಿಕೊಳ್ಳೋ ಆಪ್ಶನ್‌ ಪಡೆದು ಫೀಸ್ ಕೂಡ ಕಟ್ಟಿರುತ್ತಾರೆ. ಆದ್ರೆ, ಇಂತಹ ಜನರಿಗೆ ಕರೆ ಮಾಡೋ ಕೆಲ ಡೀಲರ್‌ಗಳು ಕನಿಷ್ಟ 200 ರೂಪಾಯಿ ಹೆಚ್ಚಿನ ಹಣ ನೀಡುವಂತೆ ಡಿಮ್ಯಾಂಡ್ ಮಾಡ್ತಾರೆ.

ಇದನ್ನೂ ಓದಿ : ಪದವೀಧರರಿಗೆ 3000, ಡಿಪ್ಲೋಮಾ ಆದ್ರೆ 1500 ರೂ. : ಕರ್ನಾಟಕ ಯುವನಿಧಿ ಯೋಜನೆ ಅರ್ಜಿ ಸಲ್ಲಿಸಿದ್ರಾ ?

ಆಗೋದಿಲ್ಲ ಎಂದ್ರೆ ನಂಬರ್ ಪ್ಲೇಟ್ ನೀಡಲು ಕೂಡ ಆಗೋದಿಲ್ಲ ಅಂತ ಉತ್ತರ ಕೇಳಬರುತ್ತೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲು ಸಿದ್ದವಾಗಿರೋ ಸಾರಿಗೆ ಇಲಾಖೆ, ಕಾಲ ರೆಕಾರ್ಡ್ ಮಾಡಿಕೊಂಡು ಪ್ರೂಫ್ ಆಗಿ ನೀಡುವಂತೆ ಸೂಚಿಸಿದೆ. HSRP ಅಳವಡಿಸದೇ ಇದ್ದಲ್ಲಿ ಸಾವಿರಾರು ರೂಪಾಯಿ ದಂಡ ವಿಧಿಸಲಾಗುತ್ತದೆ. ಸದ್ಯ ಕೇವಲ ಮೂರು ಲಕ್ಷ ಜನರು ನಂಬರ್ ಪ್ಲೇಟ್ ಬದಲಾಯಿಸಿಕೊಂಡಿದ್ದು ಇನ್ನೂ 1.9 ಕೋಟಿ ವಾಹನ ಸವಾರರು ನಂಬರ್ ಪ್ಲೇಟ್ ಬದಲಾಯಿಸಲು ಕಾದಿದ್ದಾರೆ.

High Security Registaration Plate HSRP time Extend, Government Gives Good News for Vehical Owners

Comments are closed.