Bangalore blast in Rameshwaram Cafe ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ನಿಗೂಢ ಸ್ಪೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಹೋಟೆಲ್ ಗೆ ಹಾನಿ ಉಂಟಾಗಿದೆ. ಘಟನೆಯಿಂದಾಗಿ ಕಫೆಯಲ್ಲಿದ್ದ ಹಲವು ಗ್ರಾಹಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಲ್ಲಿ ಪದೇ ಪದೇ ಸ್ಪೋಟ ಪ್ರಕರಣಗಳು ಸಂಭವಿಸುತ್ತಿದೆ. ಇದೀಗ ಬೆಂಗಳೂರಿನ ದ ಕುಂದಲಹಳ್ಳಿ ಗೇಟ್ ಬಳಿಯಲ್ಲಿ ಇರುವ ರಾಮೇಶ್ವರಂ ಕಫೆಯಲ್ಲಿ ನಡೆದ ಸ್ಪೋಟಕ್ಕೆ ಬಾಯ್ಲರ್ ಸ್ಪೋಟಗೊಂಡಿರುವುದು ಕಾರಣ ಎನ್ನಲಾಗುತ್ತಿದೆ. ಆದರೆ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆಯಿಂದಾಗಿ ಸ್ಥಳೀಯರು ಆತಂಕ ಗೊಂಡಿದ್ದಾರೆ.
ಘಟನೆಯಿಂದಾಗಿ ಸುಮಾರು ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಪೋಟ ಸಂಭವಿಸುವ ವೇಳೆಯಲ್ಲಿ ಕಫೆಯಲ್ಲಿ ಸಾಕಷ್ಟು ಗ್ರಾಹಕರು ಇದ್ದರು, ಈ ಪೈಕಿ ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂಧಿ ಭೇಟಿ ನೀಡಿದ್ದು, ಬೆಂಕಿ ನಂದಿಸಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಅತ್ತೆಯ ಜೊತೆ ಸೊಸೆಗೂ ಸಿಗುತ್ತಾ ? ಗುಡ್‌ನ್ಯೂಸ್ ಕೊಟ್ಟ ಕರ್ನಾಟಕ ಸರಕಾರ
ಸ್ಪೋಟ ಸಂಭವಿಸುವ ವೇಳೆಯಲ್ಲಿ ರಾಮೇಶ್ವರಂ ಕಫೆಯ ಹೊರಗಡೆ ಸಾಕಷ್ಟು ಜನಸಂದಣಿ ನೆರೆದಿತ್ತು. ಊಟದ ಸಂದರ್ಭದಲ್ಲಿಯೇ ಈ ಘಟನೆ ನಡೆದಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ರಾಮೇಶ್ವರಂ ಕಫೆಯು ಬೆಂಗಳೂರಿನ ಇಂದಿರಾನಗರ, ಜೆಪಿ ನಗರ, ರಾಜಾಜಿನಗರ, ಬ್ರೂಕ್ ಫೀಲ್ಡ್, ಹೈದ್ರಾಬಾದ್ ನ ಮಾದಾಪುರದಲ್ಲಿ ಇದೆ.

ಇದನ್ನೂ ಓದಿ : ಪ್ರತೀ ಕುಟುಂಬಕ್ಕೆ ಸಿಗಲಿದೆ 5000 ರೂ. : ಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರಂಟಿ ಘೋಷಣೆ
ರಾಘವೇಂದ್ರ ರಾವ್ ಹಾಗೂ ಸಿಎ ದಿವ್ಯಾ ಎಸ್. ಅವರ ಒಡೆತದಲ್ಲಿರುವ ರಾಮೇಶ್ವರಂ ಕಫೆ ಬೆಂಗಳೂರಿನಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಇಂದು ನಡೆದ ಸ್ಪೋಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ರಾಮೇಶ್ವರಂ ಕಫೆಯಲ್ಲಿ ಸ್ಪೋಟ ಸಂಭವಿಸಿದ್ದರೂ ಕೂಡ ಅಕ್ಕ ಪಕ್ಕದ ಮನೆಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಬಾಯ್ಲರ್ ಸ್ಪೋಟಗೊಂಡು ಈ ಘಟನೆ ಸಂಭವಿಸಿದೆಯೇ ಅಥವಾ ಬೇರೆಯದೇ ಕಾರಣಕ್ಕೆ ಈ ಸ್ಪೋಟ ನಡೆದಿದ್ಯಾ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ : anohar Prasad : ಖ್ಯಾತ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ವಿಧಿವಶ
Bangalore blast in Rameshwaram Cafe Many serious