ಸೋಮವಾರ, ಏಪ್ರಿಲ್ 28, 2025
Homekarnatakaಸಿಲಿಕಾನ್ ಸಿಟಿಗೆ ಮತ್ತೆ ಟ್ರಾಫಿಕ್ ಸಂಕಷ್ಟ: ಉಸಿರಾಡಲು ಯೋಗ್ಯವಲ್ಲ ನಗರದ ಗಾಳಿ

ಸಿಲಿಕಾನ್ ಸಿಟಿಗೆ ಮತ್ತೆ ಟ್ರಾಫಿಕ್ ಸಂಕಷ್ಟ: ಉಸಿರಾಡಲು ಯೋಗ್ಯವಲ್ಲ ನಗರದ ಗಾಳಿ

- Advertisement -

ಬೆಂಗಳೂರು : ಕೊರೋನಾದಿಂದ ಚೇತರಿಸಿಕೊಂಡ ಸಿಲಿಕಾನ್ ಸಿಟಿ ಬೆಂಗಳೂರು (Bangalore City) ಸಹಜ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ನಗರದಲ್ಲಿ‌‌ಮತ್ತೆ ಮೊದಲಿನಂತೆ ಟ್ರಾಫಿಕ್ ಜಾಮ್ ಅಬ್ಬರಿಸಲಾರಂಭಿಸಿದ್ದು, ಇದರಿಂದಾಗಿ‌ ಮತ್ತೆ ನಗರದ ತಾಪಮಾನ ಏರಿಕೆಯಾಗಲಾರಂಭಿಸಿದ್ದು, ಗಾಳಿಯ ಗುಣಮಟ್ಟದ ಸೂಚಂಕ್ಯ ಕೂಡ ಕುಸಿದಿದ್ದು, ಆತಂಕಕ್ಕೆ‌ ಕಾರಣವಾಗಿದೆ. ಬೆಂಗಳೂರಿನಲ್ಲಿ ವಾಹನ ಸಂಚಾರ ಹಾಗೂ ದಟ್ಟನೆ ಹಾಗೂ ತಾಪಮಾನ ಹೆಚ್ಚಳದಿಂದಾಗಿ ವಾತಾವರಣ ಗುಣಮಟ್ಟ ದಿನೇ ದಿನೇ ಕುಸಿತ ಕಾಣುತ್ತಿದ್ದು, ಗಾಳಿಯ ಗುಣಮಟ್ಟದ ಸೂಚ್ಯಂಕ ಉತ್ತಮ ಹಂತದಿಂದ ಮಧ್ಯಮಕ್ಕೆ ಕುಸಿದಿದೆ.

ಕೊವೀಡ್ ಮೂರನೆ ಅಲೆಯ ಅವಧಿಯಲ್ಲಿ ನಗರದಲ್ಲಿ ವಾಹನ ಸಂಚಾರ ಗಣನೀಯ ಪ್ರಮಾಣದಲ್ಲಿ ಕುಸಿದಿತ್ತು. ಹೀಗಾಗಿ ನಗರದ ಗಾಳಿಯ ಗುಣಮಟ್ಟ ಕೊಂಚ ಚೇತರಿಕೆ‌ಕಂಡಿತ್ತು. ಎಕ್ಯುಐ ಇಳಿಕೆಯಾಗಿತ್ತು. ಪೀಣ್ಯ,ಜಯನಗರ ಸೇರಿದಂತೆ ಹಲವೆಡೆ ಉತ್ತಮಗೊಂಡಿದ್ದ ಗಾಳಿ ಈಗ‌ಮತ್ತೆ ಮಾಲಿನ್ಯಗೊಳ್ಳಲಾರಂಭಿಸಿದ್ದು ಈಗ ಮತ್ತೆ ಎಐಕ್ಯು ನೂರರ ಗಡಿ ದಾಟಿದೆ.

ನಗರದಲ್ಲಿ ವಾಯುಮಾಲಿನ್ಯ ಪ್ರಮಾಣ ಏರಿಕೆಯಾಗುತ್ತಿದ್ದು, ಮಾಲಿನ್ಯ ಕಾರಣ ಕಣಗಳ ಪ್ರಮಾಣ ಹೆಚ್ಚುತ್ತಿದೆ. ಒಂದು ಸಾವಿರ ಲೀಟರ್ ಗಾಳಿಯಲ್ಲಿ ಪಿಎಂ-10 ಪ್ರಮಾಣ 100 ಹಾಗೂ ಪಿಎಂ 2.5 ಪ್ರಮಾಣ 60 ಮೈಕೋಗ್ರಾಂ ಮೀರಬಾರದು. ಆದರೆ ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಅಧ್ಯಯನದಲ್ಲಿ ಕೆಲವೆಡೆ ಈ ಕಣಗಳ ಪ್ರಮಾಣವೂ ನಿಗದಿತ ಮಿತಿಗಿಂತ ಹೆಚ್ಚಿರೋದು ಸಾಬೀತಾಗಿದೆ. ಅಧ್ಯಯನಗಳ ಪ್ರಕಾರ ಗಾಳಿಯ ಗುಣಮಟ್ಟ 50 ರ ಒಳಗೆ ಇದ್ದರೇ, ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರೋದಿಲ್ಲ. ಆದರೆ ಈ ಪ್ರಮಾಣ 51 ರಿಂದ 100 ಕ್ಕೆ ತಲುಪಿದ್ರೇ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಅವಕಾಶವಿರುತ್ತದೆ.

ಈ ಪ್ರಮಾಣ 101 ರಿಂದ 200 ರಷ್ಟಿದ್ದರೇ ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಎಂದು ಎಕ್ಸಪರ್ಟ್ ಗಳು ಅಭಿಪ್ರಾಯಿಸಿದ್ದಾರೆ. ವಾಯು ಮಾಲಿನ್ಯ ದಿಂದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ಚರ್ಮದ ಅಲರ್ಜಿ, ಕಣ್ಣಿನ ಉರಿ, ಹೃದಯ ಸಂಬಂಧಿ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಕ್ಯಾನ್ಸರ್ ಸೇರಿದಂತೆ ಹಲವು ಮಾರಕ ರೋಗಗಳಿಗೆ ಈ ಗಾಳಿಯೇ ಕಾರಣವಾಗುತ್ತದೆ ಎಂಬ ಮಾಹಿತಿಯನ್ನು ಹಲವು ಸಂಶೋಧನೆಗಳು ಬಹಿರಂಗಪಡಿಸಿವೆ.

ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಎಲ್ಲೇ ಮೀರಿದ್ದು ಜನರು ಉಸಿರಾಡಲು ಯೋಗ್ಯವಾದ ಗಾಳಿ ಸಿಗದೇ ಪರದಾಡುತ್ತಿದ್ದಾರೆ‌. ಬೆಂಗಳೂರು ಈ ಸ್ಥಿತಿಗೆ ತಲುಪುವ ಮುನ್ನ ಸರ್ಕಾರ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕಿದೆ.

ಇದನ್ನೂ ಓದಿ : ಕೊರೊನಾ ಸಂಕಷ್ಟದಲ್ಲಿ ನೆರವಾದ ವೈದ್ಯರಿಗೆ ಅನ್ಯಾಯ : ಗುತ್ತಿಗೆ ವೈದ್ಯರನ್ನು ಕೈಬಿಡಲು ಬಿಬಿಎಂಪಿ ಸಿದ್ಧತೆ

ಇದನ್ನೂ ಓದಿ : ಅಡುಗೆ ಎಣ್ಣೆ ಬೆಲೆ ಏರಿಕೆ ಎಫೆಕ್ಟ್ : ಏಪ್ರಿಲ್ 1 ರಿಂದ ಹೊಟೇಲ್ ಫುಡ್ ಬೆಲೆ ಹೆಚ್ಚಳ

( traffic issues again in Bangalore City Air not worth breathing)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular