ಸೋಮವಾರ, ಏಪ್ರಿಲ್ 28, 2025
HomekarnatakaBangalore Fever : ಸಿಲಿಕಾನ್ ಸಿಟಿಗೆ ಜ್ವರದ ಬಾಧೆ : ಪ್ರತಿನಿತ್ಯ OPDಗೆ ಬರ್ತಿದ್ದಾರೆ...

Bangalore Fever : ಸಿಲಿಕಾನ್ ಸಿಟಿಗೆ ಜ್ವರದ ಬಾಧೆ : ಪ್ರತಿನಿತ್ಯ OPDಗೆ ಬರ್ತಿದ್ದಾರೆ ಸಾವಿರಾರು ರೋಗಿಗಳು

- Advertisement -

ಬೆಂಗಳೂರು : (Bangalore Fever) ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ , ಮಂಜಿನ ಜೊತೆ ಬೀಳ್ತಿರೋ ಚಳಿ ಎಲ್ಲವೂ ಬೆಂಗಳೂರಿನ ಹವಾಮಾನವನ್ನೇ ಕೆಡಿಸಿದ್ದು ನಗರದಾದ್ಯಂತ ಜನರು ಚಳಿ ಜ್ವರ ನೆಗಡಿ ಕೆಮ್ಮಿನಂತಹ ಸಾಂಕ್ರಾಮಿಕ ಕಾಯಿಲೆಯಿಂದ ಬಳಲಾರಂಭಿಸಿದ್ದಾರೆ. ನಗರದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಜ್ವರ, ಥಂಡಿ ಕೆಮ್ಮಿನ ರೋಗಿಗಳ ಸಂಖ್ಯೆ ಏರಿಕೆಯಾಗ ತೊಡಗಿದ್ದು, ಕಾಳಜಿ ವಹಿಸುವಂತೆ ವೈದ್ಯರುಗಳು ಮನವಿ ಮಾಡಿದ್ದಾರೆ.

ಹೌದು, ನಗರದ ಪುಟ್ಟ ಪುಟ್ಟ ಕ್ಲಿನಿಕ್ ಗಳಿಂದ ಆರಂಭಿಸಿ ವಿಕ್ಟೋರಿಯಾ, ಬೌರಿಂಗ್, ಸಂಜಯಗಾಂಧಿ ಸೇರಿದಂತೆ ಎಲ್ಲಾ ಆಸ್ಪತ್ರೆಗಳು ಪ್ರತಿನಿತ್ಯ ನೂರಾರು ರೋಗಿಗಳು ಜ್ವರದಿಂದ ಅಡ್ಮಿಟ್ ಆಗ್ತಿದ್ದಾರೆ. ಔಟ್ ಪೇಶೆಂಟ್ ಗಳಾಗಿ ಚಿಕಿತ್ಸೆ ಪಡೆಯೋರ ಸಂಖ್ಯೆ ಪ್ರತಿನಿತ್ಯ ಸಾವಿರ ದಾಟುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಜ್ವರದ ಪ್ರಮಾಣ ಹೆಚ್ಚುತ್ತಲೇ ಇದೆ. ನಗರದಲ್ಲಿ ಹಿಂದಿನ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ವೈರಲ್ ಫಿವರ್, ಟೈಫಾಯಿಡ್ ಸೇರಿದಂತೆ ವಿವಿಧ ಬಗೆಯ ಜ್ವರಗಳು ಜನರನ್ನು ಹೈರಾಣಾಗಿಸಿದೆ.

ಜನರು ಸೊಳ್ಳೆಗಳಿಂದ ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲವಾಗ್ತಿರೋದು, ಮಳೆ ಚಳಿ ಯಲ್ಲಿ ಬೆಚ್ಚಗೆ ಇರೋ ಬದಲು ಕೋಲ್ಡ್ ಪದಾರ್ಥಗಳ ಸೇವನೆ ಹಾಗೂ ಸ್ವಚ್ಛವಾಗಿಲ್ಲದ ನೀರಿನ ಸೇವನೆ ಸೇರಿದಂತೆ ನಾನಾ ಕಾರಣಕ್ಕೆ ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಮಣಿಪಾಲ್ ಆಸ್ಪತ್ರೆಯೊಂದಕ್ಕೆ ಪ್ರತಿನಿತ್ಯ 2 ಸಾವಿರಕ್ಕೂ ಅಧಿಕ ರೋಗಿಗಳು ದಾಖಲಾಗುತ್ತಿದ್ದಾರಂತೆ. ಇನ್ನೂ ಮಕ್ಕಳಲ್ಲೂ ಗಂಟಲು ಊತ, ಜ್ವರ, ಡಿಸೆಂಟ್ರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬಿಬಿಎಂಪಿ ಈಗಾಗಲೇ ಜ್ವರ ಪೀಡಿತರಿಗೆ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಿದ್ದು, ಒಂದೊಮ್ಮೆ ಯಾವುದೇ ಸಾಂಕ್ರಾಮಿಕ ರೋಗದ ಲಕ್ಷಣಗಳು ಕಂಡುಬಂದಲ್ಲಿ ಐಶೋಲೇಟ್ ಆಗುವಂತೆಯೂ ಸೂಚನೆ ನೀಡಿದೆ.

ಅಲ್ಲದೇ ಡೆಂಗ್ಯೂ ಸೇರಿದಂತೆ ಇತರೆ ಜ್ವರಗಳು ಹಾಗೂ ಕಾಯಿಲೆಗಳ ಕುರಿತು ವಾರ್ಡ್ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಮಳೆಯ ಕಾರಣದಿಂದ ಡೆಂಗ್ಯುವಿನಂಥಹ ಖಾಯಿಲೆ ಬರ್ತಿದೆ. ಜೊತೆಗೆ ಸಾಮಾನ್ಯ ಕೆಮ್ಮು ಜ್ವರದಂಥಹ ಖಾಯಿಲೆ ಕೂಡಾ ಹೆಚ್ಚಾಗ್ತಿದೆ.ಹೀಗಾಗಿ ಜನರು ಸ್ವಚ್ಛತೆಯನ್ನು ಕಾಪಾಡಬೇಕು.ಸೊಳ್ಳೆಗಳಿಂದ ದೂರ ಉಳಿಯಲು ಕೈಕಾಲು ಮುಚ್ಚುವಂತೆ ಬಟ್ಟೆ ಧರಿಸಬೇಕು ಕಾಲುಗಳಿಗೆ ಕೋಲ್ಡ್ ಆಗದ ರೀತಿಯಲ್ಲಿ ಸಾಕ್ಸ್ ಧರಿಸಬೇಕು ಒಂದು ವೇಳೆ ಜ್ವರದಂಥಹ ಗುಣಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ತಜ್ಞ ವೈದ್ಯರು ನೀಡಿದ್ದಾರೆ.

ಇದನ್ನೂ ಓದಿ : namma metro : ಲಿಫ್ಟ್​ ದುರ್ಬಳಕೆ ತಪ್ಪಿಸಲು ಬಿಎಂಆರ್​ಸಿಎಲ್​ ಪ್ಲಾನ್​ : ಮೆಟ್ರೋದಲ್ಲಿನ್ನು ಲಿಫ್ಟ್​ ಬಳಕೆಗೆ ಬೇಕು ಟೋಕನ್​

ಇದನ್ನೂ ಓದಿ : Chamarajpet Idgah Ganeshotsava : ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ : ಅವಕಾಶವಿಲ್ಲ ಎಂದ ಶಾಸಕ ಜಮೀರ್‌, ಹಿಂದೂ ಸಂಘಟನೆಗಳ ಆಕ್ರೋಶ

Bangalore Fever : Silicon City is affected by fever, Thousands of patients come to the OPD every day

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular