JDS master plan : ರಾಜ್ಯದಲ್ಲಿ ಅಧಿಕಾರಕ್ಕೇರಲು ಜೆಡಿಎಸ್‌ ಮಾಸ್ಟರ್‌ ಪ್ಲ್ಯಾನ್ : ಮುನಿಸಿಕೊಂಡವರ ಮನವೊಲಿಕೆ ಮುಂದಾದ ಕುಮಾರಸ್ವಾಮಿ

ಬೆಂಗಳೂರು : (JDS master plan) ರಾಜ್ಯದಲ್ಲಿ 2023 ರ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆದಿದೆ. ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಶತಾಯ ಗತಾಯ ಅಧಿಕಾರ ಹಿಡಿಯಲು ಸರ್ಕಸ್ ನಡೆಸಿವೆ. ಇದರ ಮಧ್ಯೆ ಪ್ರಾದೇಶಿಕ ಪಕ್ಷವಾಗಿಯೂ ತನ್ನ ಅಸ್ತಿತ್ವವನ್ನು ಕರ್ನಾಟಕದಲ್ಲಿ ಕಾಯ್ದುಕೊಂಡು ಬಂದಿರುವ ಜೆಡಿಎಸ್ ಗೆ ಇದು ಅಳಿವು ಉಳಿವಿನ ಪ್ರಶ್ನೆಯಾಗಿದ್ದು ಅದಕ್ಕಾಗಿ ದೊಡ್ಡಗೌಡ್ರು ಭರ್ಜರಿ ಪ್ಲ್ಯಾನ್ ಸಿದ್ಧಪಡಿಸಿದ್ದು, ಅತೃಪ್ತರ ಜೊತೆ ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ.

ಹೌದು ಕಾಂಗ್ರೆಸ್, ಬಿಜೆಪಿ ಅಧಿಕಾರ ಹಿಡಿಯಲೇ ಬೇಕೆಂಬ ಜಿದ್ದಿನಲ್ಲಿ ನೊರೆಂಟು ಸ್ಟ್ಯಾಟಜಿ ರೂಪಿಸುತ್ತಿದೆ. ಈ ಮಧ್ಯೆ ಜೆಡಿಎಸ್ ಈ ಹಿಂದಿನ ಚುನಾವಣೆಗಳಂತೆ ಮತ್ತೊಮ್ಮೆ ಕಿಂಗ್ ಮೇಕರ್ ಆಗಬೇಕೆಂಬ ಪ್ರಯತ್ನದಲ್ಲಿದೆ. ಆದರೆ ಈಗ ಜೆಡಿಎಸ್ ತೊರೆಯುವವರ ಸಂಖ್ಯೆ ಹೆಚ್ಚಾಗಿದ್ದು ಈಗಾಗಲೇ ಬಸವರಾಜ್ ಹೊರಟ್ಟಿ, ಕೋನರೆಡ್ಡಿಯಂತಹ ಪಕ್ಷ ನಿಷ್ಠರು ಜೆಡಿಎಸ್ ತೊರೆದಿದ್ದಾರೆ. ಇನ್ನಷ್ಟು ಜನರು ಈಗಾಗಲೇ ಪಕ್ಷ ತೊರೆಯಲು ಒಂದು ಕಾಲು ಜೆಡಿಎಸ್ ನಿಂದ ಹೊರಗಿಟ್ಟಿದ್ದಾರೆ.

ಇದರಿಂದ ಕಂಗೆಟ್ಟ ಜೆಡಿಎಸ್ ನಾಯಕರು ಇಷ್ಟು ದಿನ ಪಕ್ಷದಿಂದ ಹೋಗುವವರು ಹೋಗಲಿ ಎಂಬಂತಿದ್ದ ತಮ್ಮ ಧೋರಣೆಯನ್ನು ಧೀಡಿರ್ ಬದಲಾಯಿಸಿಕೊಂಡಿದ್ದು, ಸಂಧಾನ‌ಸೂತ್ರದ ಮೊರೆ ಹೋಗಿದ್ದಾರೆ. ಜೆಡಿಎಸ್ ಮೇಲೆ ಮುನಿಸಿಕೊಂಡವರು, ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗದೇ ತಟಸ್ಥವಾಗಿರುವವರು, ಪಕ್ಷ ತೊರೆಯುವ ಸಾಧ್ಯತೆ ಇರುವವರು, ಅಂತರ ಕಾಯ್ದುಕೊಂಡವರ ಜೊತೆ ಸಂಧಾನ ಮಾತುಕತೆ ನಡೆಸಲು ಖುದ್ದು ದೇವೇಗೌಡರೇ ಪಕ್ಷದ ಇತರರಿಗೆ ಹಾಗೂ ಪುತ್ರ ಎಚ್ಡಿಕೆ ಗೆ ಸೂಚಿಸಿದ್ದಾರಂತೆ.

ಎಲ್ಲರೂ ಪಕ್ಷವನ್ನು ತ್ಯಜಿಸುತ್ತಿರುವುದು ಪಕ್ಷದ ಇಮೇಜ್ ಗೆ ಡ್ಯಾಮೇಜ್ ಮಾಡುತ್ತಿದೆ. ಅಲ್ಲದೇ ಪಕ್ಷ ಉಳಿಯಲು ಚುನಾವಣೆ ಸಂದರ್ಭದಲ್ಲಿ ಯಾರನ್ನೂ ಕಡೆಗಣಿಸುವಂತಿಲ್ಲ, ಕೆಲವೊಮ್ಮೆ ನಮ್ಮ ಕಡೆಯಿಂದಲೂ ತಪ್ಪಾಗಿರುತ್ತವೆ. ಎಲ್ಲಾ ಮರೆತು ಮುನಿಸಿಕೂಂಡವರ ಜೊತೆ ಮಾತುಕತೆ ನಡೆಸಿ ಎಂದು ಎಚ್ ಡಿಡಿ ಹೆಚ್ಡಿಕೆ ಗೆ ಸೂಚನೆ ನೀಡಿದ್ದಾರಂತೆ. ಮೈಸೂರಿನ ಜಿ ಟಿ ದೇವೇಗೌಡ ಜೊತೆ ಮಾತುಕತೆ ನಡೆಸಿ ಚಾಮುಂಡೇಶ್ವರಿಯಲ್ಲಿ ಜಿಟಿಡಿಗೆ ಟಿಕೆಟ್ ನೀಡುವುದಾಗಿ ಹಾಗೂ ಹುಣಸೂರಿನಲ್ಲಿ ಪುತ್ರ ಹರೀಶ್ ಗೌಡಗೆ ಟಿಕೆಟ್ ಭರವಸೆ ನೀಡುವಂತೆ ಸೂಚಿಸಿದ್ದಾರಂತೆ.

ಮಾತ್ರವಲ್ಲ ಜೆಡಿಎಸ್ ನಲ್ಲಿದ್ದು, ಕಾಂಗ್ರೆಸ್ ಸಖ್ಯ ಬೆಳೆಸಿಕೊಂಡಿರೋ ಶಿವಲಿಂಗೇಗೌಡ ಮನವೊಲಿಕೆ ಪ್ರಯತ್ನ ನಡೆಸುವಂತೆ ಹಾಗೂ ಕಾಂಗ್ರೆಸ್ ಗೆ ಗಾಳ ಹಾಕಿರೋ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ಜೊತೆ ಖುದ್ದು ಹೆಚ್ ಡಿ ಡಿ ಮಾತುಕತೆ ನಡೆಸಲು ಮುಂದಾಗಿದ್ದಾರಂತೆ. ಜಿಲ್ಲಾವಾರು ಮಾಜಿ , ಹಾಲಿ ಶಾಸಕರು, ನಾಯಕರ ಜೊತೆಯೂಹೆಚ್ ಡಿ ಕೆ ಮಾತುಕತೆ ನಡೆಸಿದ್ದು, ಪಕ್ಷ ಅಧಿಕಾರಕ್ಕೆ ಬರಲಿದೆ. ವಿಶ್ವಾಸವಿರಲಿ.ನಮ್ಮಿಂದ ಸಣ್ಣ ಪುಟ್ಟ ಮಿಸ್ಟೇಕ್ ಗಳು ಗೊತ್ತಿದ್ದೋ. ಗೊತ್ತಿಲ್ಲದೆಯೋ ನಡೆದಿರುತ್ತೆ ಅದೆಲ್ಲ ಬದಿಗಿರಿಸಿ ಒಗ್ಗಟ್ಟಿನಿಂದ ಪಕ್ಷ ಕಟ್ಟೋಣ ಪಕ್ಷ ಅಧಿಕಾರಕ್ಕೆ ಬರುತ್ತೆ ಎಲ್ಲರಿಗೂ ಒಳ್ಳೆಯದಾಗುತ್ತೆ ಎಂದು ಮನವೊಲಿಸಲು ಮುಂದಾಗಿದ್ದಾರಂತೆ.

ಇದನ್ನೂ ಓದಿ : Ramya Re Entry : ರಮ್ಯನಿಗೆ ಜೊತೆಯಾದ ರಾಜ್ ಶೆಟ್ಟಿ: ಸ್ಯಾಂಡಲ್ ವುಡ್ ಮೋಹಕ ತಾರೆ ಗ್ರ್ಯಾಂಡ್ ರೀ ಎಂಟ್ರಿ

ಇದನ್ನೂ ಓದಿ : Karnataka New CM : ಚುನಾವಣೆಯ ನೆಪ : ವೈಫಲ್ಯಕ್ಕೆ ಬೊಮ್ಮಾಯಿ ತಲೆದಂಡ : ರಾಜ್ಯಕ್ಕೆ ಮತ್ತೆ ಹೊಸ ಸಿಎಂ

JDS master plan to come to power in the state, HD Kumaraswamy came forward to convince those who believed

Comments are closed.