Mantri Mall Lock : 27 ಕೋಟಿ ತೆರಿಗೆ ಬಾಕಿ : ಮಂತ್ರಿಮಾಲ್‌ಗೆ ಬೀಗ ಜಡಿದ ಬಿಬಿಎಂಪಿ

ಬೆಂಗಳೂರು : ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಮಾಲ್‌ಗಳಲ್ಲಿ ಒಂದಾಗಿರುವ ಮಂತ್ರಿಮಾಲ್‌ ಗೆ ಬಿಬಿಎಂಪಿ (BBMP) ಅಧಿಕಾರಿಗಳು ಬೀಗ ಜಡಿದಿದ್ದಾರೆ. ಮಂತ್ರಿ ಮಾಲ್‌ 27 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಿಗ ಜಡಿಯುತ್ತಲೇ 5 ಕೋಟಿ ತೆರಿಗೆಯನ್ನು ಮಾಲ್‌ ಪಾವತಿ ಮಾಡಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಮಂತ್ರಿ ಮಾಲ್‌ ಬಿಬಿಎಂಪಿಗೆ ಪಾವತಿ ಮಾಡಬೇಕಾಗಿದ್ದ ಸುಮಾರು 27 ಕೋಟಿ ರೂಪಾಯಿ ಆಸ್ತಿ ಹಾಗೂ ಕಟ್ಟಡ ತೆರಿಗೆಯನ್ನು ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ ಕಳೆದ ಮೂರು ವರ್ಷಗಳಿಂದಲೂ ಬಿಬಿಎಂಪಿ ಅಧಿಕಾರಿಗಳು ಮಾಲ್‌ ಮಾಲೀಕರಿಗೆ ಹಲವು ಬಾರಿ ನೋಟಿಸ್‌ ನೀಡಿದ್ದರು. ಆದರೆ ಮಂತ್ರಿ ಮಾಲ್‌ ತೆರಿಗೆಯನ್ನು ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್‌ಗೆ ಬೀಗ ಜಡಿಯುತ್ತಿದ್ದಂತೆಯೇ 5 ಕೋಟಿ ರೂಪಾಯಿ ತೆರಿಗೆಯನ್ನು ಡಿಡಿ ರೂಪದಲ್ಲಿ ಬಿಬಿಎಂಪಿ ಅಧಿಕಾರಿಗಳ ಕೈಗೆ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಇನ್ನೂ ಒಂದು ತಿಂಗಳ ಕಾಲಾವಕಾಶವನ್ನು ನೀಡುವಂತೆಯೂ ಮಂತ್ರಿ ಮಾಲ್‌ ಮಾಲೀಕರು ಅಧಿಕಾರಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ ವರೆಗೆ ಕಾಲಾವಕಾಶವನ್ನು ನೀಡಿದ್ದಾರೆ.

ಮಂತ್ರಿಮಾಲ್‌ 2018-19, 2019-20, 2020-21ನೇ ಸಾಲಿನಲ್ಲಿ ಬಿಬಿಎಂಪಿಗೆ ಆಸ್ತಿ ತೆರಿಗೆ ಹಾಗೂ ಕಟ್ಟಡ ತೆರಿಗೆಯನ್ನು ಪಾವತಿ ಮಾಡಿರಲಿಲ್ಲ. ಈ ಕುರಿತು ಸಾಕಷ್ಟು ಬಾರಿ ನೋಟೀಸ್‌ ಜಾರಿ ಮಾಡಿದ್ದರೂ ಕೂಡ ಮಂತ್ರಿ ಮಾಲ್‌ ಮಾಲೀಕರು ತೆರಿಗೆ ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿಂದು ಮಾಲ್‌ಗೆ ಬೀಗ ಹಾಕಲಾಗಿದೆ. ಆದರೆ 5 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡಿದ್ದು, ಉಳಿದ ಹಣವನ್ನು ಶೀಘ್ರದಲ್ಲಿಯೇ ಪಾವತಿ ಮಾಡುವುದಾಗಿ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬಿಬಿಎಪಿ ಆಯುಕ್ತರ ಸೂಚನೆಯ ಮೇರೆಗೆ ಕಾಲಾವಕಾಶ ನೀಡಲಾಗಿದೆ. ಅಲ್ಲಿಯ ವರೆಗೆ ಮಾಲ್‌ ತೆರೆಯಲಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ಅವರು ತಿಳಿಸಿದ್ದಾರೆ.

ಮಂತ್ರಿ ಮಾಲ್‌ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಈ ಹಿಂದೆ ನೋಟಿಸ್‌ ನೀಡಿದಾಗ ಚೆಕ್‌ ನೀಡಿದ್ದರು. ಆದರೆ ಚೆಕ್‌ ಬೌನ್ಸ್‌ ಆಗಿತ್ತು. ಹೀಗಾಗಿಯೇ ಡಿಡಿ ನೀಡುವಂತೆ ಕೇಳಿದ್ದೇವೆ. ಈ ಹಿನ್ನೆಲೆಯಲ್ಲಿ ಅವರು ಐದು ಕೋಟಿ ರೂಪಾಯಿಯ ತೆರಿಗೆ ಹಣವನ್ನು ಡಿಡಿ ರೂಪದಲ್ಲಿ ನೀಡಿದ್ದಾರೆ. ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಮಾತ್ರವೇ ಮಾಲೀಕರಿಗೆ ಕಾಲಾವಕಾಶವನ್ನು ನೀಡಲಾಗಿದೆ. ಒಂದೊಮ್ಮೆ ತೆರಿಗೆ ಪಾವತಿ ಮಾಡದೇ ಇದ್ರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ : ಮಂತ್ರಿಮಾಲ್ ಲಾಕೌಟ್….! ಐಷಾರಾಮಿ ಮಾಲ್ ಬೀಗ ಹಾಕಿದ ಬಿಬಿಎಂಪಿ…!!

ಇದನ್ನೂ ಓದಿ :‌ Namma Metro ಕಾಮಗಾರಿ ವೇಳೆ ಅನಾಹುತ : ಮುಚ್ಚಿದ ಬಾವಿಯಿಂದ 30 ಅಡಿ ಮಣ್ಣು ಕುಸಿತ

( BBMP officials have locked Mantri mall, one of the most prestigious malls in the wake of tax evasion )

Comments are closed.