ಬೆಂಗಳೂರು : ಡಾಮಿನೋಸ್ ಫಿಜ್ಹಾ ಶಾಪ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಬೆಂಗಳೂರಿನ ಮೈಕೋ ಲೇಔಟ್ನಲ್ಲಿರುವ ನಡೆದಿದೆ.
ಮೈಕೋಲೇಔಟ್ನ ಉಡುಪಿ ಗಾರ್ಡನ್ ಪಕ್ಕದಲ್ಲಿರುವ ಪಿಜ್ಜಾ ಶಾಪ್ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಸಿಬ್ಬಂದಿಗಳು ಎಚ್ಚೆತ್ತುಕೊಂಡು ಅಗ್ನಿಶಾಮಕ ಕಚೇರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡಾಮಿನೋಸ್ ಫಿಜ್ಹಾ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಆದರೆ ಅಗ್ನಿದುರಂತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸಿಬ್ಬಂದಿಗಳು ಕೂಡಲೇ ಎಚ್ಚೆತ್ತುಕೊಂಡ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಮೈಕೋ ಲೇಔಟ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.
ಇದನ್ನೂ ಓದಿ : Namma Metro ಕಾಮಗಾರಿ ವೇಳೆ ಅನಾಹುತ : ಮುಚ್ಚಿದ ಬಾವಿಯಿಂದ 30 ಅಡಿ ಮಣ್ಣು ಕುಸಿತ
ಇದನ್ನೂ ಓದಿ : 27 ಕೋಟಿ ತೆರಿಗೆ ಬಾಕಿ : ಮಂತ್ರಿಮಾಲ್ಗೆ ಬೀಗ ಜಡಿದ ಬಿಬಿಎಂಪಿ
( Fire at Domino’s Fizzha Shop in mico layout Bangaluru)