ಬೆಂಗಳೂರು : ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗಳು ಅಕ್ಷರಶಃ ರಕ್ತದಾಹಿಗಳಂತೆ ಜನರ ರಕ್ತ ಹೀರಿದ್ದಕ್ಕೆ ನೊರೆಂಟು ಸಾಕ್ಷಿಗಳಿವೆ. ಬಡವರ, ಮಧ್ಯಮ ವರ್ಗದ ಜನರನ್ನು ಕೊರೋನಾ ಅಕ್ಷರಶಃ ಹಿಂಡಿ ಹಿಪ್ಪೆ ಮಾಡಿದ್ದರೇ, ಇತ್ತ ಆಸ್ಪತ್ರೆಗಳು ( private hospitals ) ಚಿಕಿತ್ಸೆಯ ನೆಪದಲ್ಲಿ ಲಕ್ಷ ಲಕ್ಷ ಹಾಸ್ಪಿಟಲ್ ಬಿಲ್ ಮಾಡಿ ರೋಗಿ ಗಳನ್ನು ಸುಲಿಗೆ ಮಾಡಿದ್ದರು. ಮಾತ್ರವಲ್ಲ ಹರಾಜಿನಲ್ಲಿ ಮಾರಾಟಕ್ಕಿಟ್ಟಂತೆ ಬೆಡ್ ಗಳಿಗೆ ( reserves beds ) ದುಬಾರಿ ಬೆಲೆ ನಿಗದಿ ಮಾಡಿ ಜನರನ್ನು ಚಿಕಿತ್ಸೆ ಸಿಗದೇ ಸಾಯುವಂತೆ ಮಾಡಿ ಬಿಟ್ಟಿದ್ದರು. ಆದರೆ ಈಗ ಮೂರನೆ ಅಲೆಯ ಹೊಸ್ತಿಲಿನಲ್ಲಿ ಈ ಸುಲಿಗೆ ಗೆ ಬ್ರೇಕ್ ಹಾಕಲು ಬಿಬಿಎಂಪಿ ( BBMP Covid Bed Tariffs ) ಸಜ್ಜಾಗಿದೆ.
ಎರಡನೇ ಅಲೆ ಹಾಗೂ ಮೂರನೆ ಅಲೆಯ ತಪ್ಪುಗಳಿಂದ ಪಾಠ ಕಲಿತಿರುವ ಬಿಬಿಎಂಪಿ ಈ ಭಾರಿ ಖಾಸಗಿ ಆಸ್ಪತ್ರೆಗಳ ಸುಲಿಗೆ ಗೆ ಬ್ರೇಕ್ ಹಾಕಲು ಈಗಾಗಲೇ ದರ ಪಟ್ಟಿ ನಿಗದಿ ಮಾಡಿದೆ. ಎರಡನೆ ಅಲೆಯ ವೇಳೆ ಐಸಿಯು ಬೆಡ್, ಆಕ್ಸಿಜನ್ ಬೆಡ್ ಗಳು ದುಬಾರಿ ಬೆಲೆಗೆ ಮಾರಾಟವಾಗಿದ್ದವು. ಹೀಗಾಗಿ ಈ ಭಾರಿ ಮೂರನೇ ಅಲೆಗೂ ಮುನ್ನವೇ ಬಿಬಿಎಂಪಿ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಸಂದೇಶ ರವಾನಿಸಿದೆ.
ಬಿಬಿಎಂಪಿ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಮಾಡಿ ಸೂಚನೆ ರವಾನಿಸಿದೆ. ಜನರಲ್ ಬೆಡ್ ಗೆ 10 ಸಾವಿರ ರೂಪಾಯಿ ದರ ನಿಗದಿ ಮಾಡಲಾಗಿದೆ. ಇನ್ನು ಸ್ಪೆಶಲ್ ಬೆಡ್ ಗೆ 12 ಸಾವಿರ ರೂಪಾಯಿ ನಿಗದಿಯಾಗಿದ್ದರೇ, ಐಸಿಯು ಬೆಡ್ ಗೆ 15 ಸಾವಿರ ರೂಪಾಯಿ ನಿಗದಿಯಾಗಿದೆ. ಇದಲ್ಲದೇ ಆಯ್ ಸಿ ಯು ವೆಂಟಿಲೇಟರ್ ಗೆ 25 ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ಆಧಿಕಾರಿ ಬಾಲ್ ಸುಂದರ್ ವಿವರಣೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ದರನಿಗದಿಮಾಡಿರುವ ಬಿಬಿಎಂಪಿ ಈ ಬಗ್ಗೆ ಮಾಹಿತಿಯನ್ನು ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದೆ. ಅಷ್ಟೇ ಅಲ್ಲ ಯಾವುದೇ ಆಸ್ಪತ್ರೆಗಳು ನಿಯಮ ಉಲ್ಲಂಘಿಸಿದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದೆ.
ಅಲ್ಲದೇ ಖಾಸಗಿ ಆಸ್ಪತ್ರೆಗಳಿಗೂ ಖಡಕ್ ವಾರ್ನಿಂಗ್ ನೀಡಿರೋ ಬಿಬಿಎಂಪಿ ಒಂದೊಮ್ಮೆ ಬೆಲೆಯ ವಿಚಾರದಲ್ಲಿ ನಿಯಮ ಉಲ್ಲಂಘಿಸಿದರೇ, Karnataka infectious diseases act ಹಾಗೂ Registration of Karnataka Private medical establishment act 2017 ಅಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಎಚ್ಚರಿಸಿದೆ.ಅಲ್ಲದೇ ಈ ಬಗ್ಗೆ 080-22660000 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ಮನವಿ ಮಾಡಿದೆ.
ಇದನ್ನೂ ಓದಿ : School Close Karnataka : ಶಾಲೆಗಳ ಮೇಲೆ ಮತ್ತೆ ಕೊರೊನಾ ಕರಿನೆರಳು: ಮತ್ತೆ ಬಾಗಿಲುಮುಚ್ಚಲಿದೆ ಶಿಕ್ಷಣ ಸಂಸ್ಥೆಗಳು ?!
( BBMP Covid Bed Tariffs in private hospitals reserves beds)