David Warner Playing RCB : IPL 2022 ಆರ್‌ಸಿಬಿ ತಂಡದಲ್ಲಿ ಆಡುವುದನ್ನು ಖಚಿತ ಪಡಿಸಿದ ಡೇವಿಡ್‌ ವಾರ್ನರ್‌

ಬೆಂಗಳೂರು : ಡೇವಿಡ್‌ ವಾರ್ನರ್‌ ಆಸ್ಟ್ರೇಲಿಯಾ ತಂಡ ಪ್ರಮುಖ ಆಟಗಾರ. ತನ್ನ ಬ್ಯಾಟಿಂಗ್‌ನಿಂದಲೇ ಎದುರಾಳಿಗಳನ್ನು ನಡುಗಿಸುವ ಸಾಮರ್ಥ್ಯವನ್ನು ಹೊಂದಿರುವ ಡೇವಿಡ್‌ ವಾರ್ನರ್‌ ಇದೀಗ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದಿಂದ ಹೊರ ನಡೆದಿದ್ದಾರೆ. ನಾಯಕನಾಗಿದ್ದ ಡೇವಿಡ್‌ ವಾರ್ನರ್‌ ಅವರನ್ನು ತಂಡ ಐಪಿಎಲ್ 2022ಕ್ಕೆ ತಂಡದಲ್ಲಿ ಉಳಿಸಿಕೊಂಡಿಲ್ಲ. ಹೀಗಾಗಿ ವಾರ್ನರ್‌ ಯಾವ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ ಎನ್ನೋ ಚರ್ಚೆ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಡೇವಿಡ್‌ ವಾರ್ನರ್‌ ಭಾರತೀಯ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. IPL 2022 ರಲ್ಲಿ RCB ತಂಡದ ಪರ ಆಡಲು ಬಯಸುತ್ತಿರುವುದಾಗಿ (David Warner Playing RCB) ಡೇವಿಡ್ ವಾರ್ನರ್ ದೃಢಪಡಿಸಿದ್ದಾರೆ.

ಐಪಿಎಲ್‌ 2021ರಲ್ಲಿ ಡೇವಿಡ್‌ ವಾರ್ನರ್‌ ನಾಯಕತ್ವದ ಸನ್‌ರೈಸಸ್‌ ಹೈದ್ರಾಬಾದ್‌ ತಂಡ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರನ್ನು ಆಡುವ ಬಳಗದಿಂದಲೇ ಕೈಬಿಡಲಾಗಿತ್ತು. ಇದು ಡೇವಿಡ್‌ ವಾರ್ನರ್‌ ಮುನಿಸಿಗೆ ಕಾರಣವಾಗಿತ್ತು. ಅಲ್ಲದೇ ಸನ್‌ರೈಸಸ್‌ ಹೈದ್ರಾಬಾದ್‌ ತಂಡ ಬಸ್ಸಿನಲ್ಲಿ ಕ್ರೀಡಾಂಗಣಕ್ಕೆ ತೆರಳಲು ಕೂಡ ಪ್ರವೇಶ ನಿರಾಕರಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

2016 ರ ಐಪಿಎಲ್‌ ಚಾಂಪಿಯನ್‌ ತಂಡವಾಗಿರುವ ಸನ್‌ರೈಸಸ್‌ ಹೈದ್ರಾಬಾದ್‌ ಪ್ರಸಕ್ತ ಸಾಲಿನಲ್ಲಿ ಕೇನ್ ವಿಲಿಯಮ್ಸನ್, ಉಮ್ರಾನ್ ಮಲಿಕ್ ಮತ್ತು ಅಬ್ದುಲ್ ಸಮದ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಇದರಿಂದಾಗಿ ಡೇವಿಡ್‌ ವಾರ್ನರ್‌ ಇದೀಗ ತಂಡದಿಂದ ಹೊರ ಬಿದ್ದಿದ್ದಾರೆ. ಹೀಗಾಗಿ ಸ್ಪೋಟಕ ಆಟಗಾರ ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಅನ್ನೋ ಕುತೂಹಲ ಸೃಷ್ಟಿಯಾಗಿದೆ. ಇನ್ನೊಂದೆಡೆಯಲ್ಲಿ 35 ವರ್ಷ ವಯಸ್ಸಿನ ವಾರ್ನರ್ ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ಎರಡು ಹೊಸ ಫ್ರಾಂಚೈಸಿಗಳಲ್ಲಿ ಒಂದನ್ನು ಮುನ್ನಡೆಸುವ ಸಾಧ್ಯತೆಗಳಿವೆ.

ಆದರೆ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿರುವ ಆರ್‌ಸಿಬಿಗೆ ಸೇರಲು ಡೇವಿಡ್ ವಾರ್ನರ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಯೊಬ್ಬರು ವಿನಂತಿಸಿದ್ದಾರೆ. ವಾರ್ನರ್ ಅಭಿಮಾನಿಗಳ ಕಾಮೆಂಟ್‌ಗೆ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ, ಇದು ಕೊಹ್ಲಿ ಮತ್ತು ಅವರ ದೇಶವಾಸಿ ಮ್ಯಾಕ್ಸ್‌ವೆಲ್ ಜೊತೆಗೆ ಆಡುವ ಕುರಿತು ಒಲವು ವ್ಯಕ್ತಪಡಿಸಿದ್ದಾರೆ.

ಇನ್ನೊಂದಡೆಯಲ್ಲಿ RCB ವೆಸ್ಟ್ ಇಂಡೀಸ್‌ನಿಂದ ಹೊಸ ನಾಯಕನನ್ನು ತರಲು ಸಜ್ಜಾಗಿದೆ. RCB ಫ್ರಾಂಚೈಸಿಯು ಮರುನಿರ್ಮಾಣ ಮತ್ತು ಹೊಸ ಕೋರ್ ಪ್ಲೇಯರ್‌ಗಳನ್ನು ರೂಪಿಸಬೇಕಾದರೆ, ಕೋಹ್ಲಿ IPL 2021 ರ ಉನ್ನತ ಹುದ್ದೆಯಿಂದ ಹೊರಗುಳಿದ ನಂತರ ಬೆಂಗಳೂರು ಘಟಕವು ಹೊಸ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ. ಮ್ಯಾಕ್ಸ್‌ವೆಲ್ ಉನ್ನತ ಹುದ್ದೆಗೆ ಏರುತ್ತಾರೆ ಎಂದು ಹೇಳಿದ್ರೆ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್ ಅಥವಾ ಹೊಸ ಮುಖವನ್ನು ಆರ್‌ಸಿಬಿ ನಾಯಕನನ್ನಾಗಿ ಆಯ್ಕೆ ಮಾಡಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಡೇವಿಡ್ ವಾರ್ನರ್ ಐಪಿಎಲ್ 2022 ರಲ್ಲಿ ಆರ್‌ಸಿಬಿ ಪರ ಆಡುವುದನ್ನು (David Warner Playing RCB) ಖಚಿತಪಡಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಓಪನರ್-ಕಮೆಂಟರ್ ಆಗಿರುವ ಆಕಾಶ್ ಚೋಪ್ರಾ RCB ನಾಯಕತ್ವವನ್ನು ಯಾರು ಮಾಡಬಹುದು ಎಂಬ ಆಸಕ್ತಿದಾಯಕ ಹೆಸರನ್ನು ಸೂಚಿಸಿದ್ದಾರೆ. ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ, “ಆರ್‌ಸಿಬಿಗೆ, ವೆಸ್ಟ್ ಇಂಡೀಸ್ ಮಾಜಿ ನಾಯಕ ಜೇಸನ್ ಹೋಲ್ಡರ್ ಕೂಡ ನಾಯಕತ್ವಕ್ಕೆ ಆಯ್ಕೆಯಾಗಿದ್ದಾರೆ. ಅವರು ಹೊಸ ನಾಯಕನನ್ನು ಖರೀದಿಸಬೇಕಾಗಿದೆ ಮತ್ತು ಅದು ಹೋಲ್ಡರ್ ಆಗಿರಬಹುದು. ಅಲ್ಲಿನ ಪಿಚ್ ಮತ್ತು ಇತರ ವಿಷಯಗಳ ಬಗ್ಗೆ ನಾನು ಯೋಚಿಸಿದಾಗ, ಹೋಲ್ಡರ್ ಮೌಲ್ಯಯುತ ಆಟಗಾರನಾಗಿರಬಹುದು ಎಂದು ನಾನು ಭಾವಿಸುತ್ತೇನೆ. ಅವರು ಎಲ್ಲಾ ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ : IPL 2022 Lucknow Team : ಲಕ್ನೋ ತಂಡಕ್ಕೆ ಕೆ.ಎಲ್. ರಾಹುಲ್ ನಾಯಕ : ಸಾಥ್‌ ಕೊಡ್ತಾರೆ ವಾರ್ನರ್, ರಶೀದ್ ಖಾನ್

ಇದನ್ನೂ ಓದಿ : RCB in IPL 2022 : ವೆಸ್ಟ್ ಇಂಡೀಸ್ ನ ಈ ಆಟಗಾರನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ

ಇದನ್ನೂ ಓದಿ : AB De Villiers : RCB ತಂಡಕ್ಕೆ ಮರಳಿದ್ದಾರೆ ಎಬಿ ಡಿವಿಲಿಯರ್ಸ್

(David Warner confirmed to play for RCB in IPL 2022)

Comments are closed.