ಭಾನುವಾರ, ಏಪ್ರಿಲ್ 27, 2025
Homeನಮ್ಮ ಬೆಂಗಳೂರುdangerous trees : ಅಪಾಯಕಾರಿ ಮರಗಳ ತೆರವಿಗೆ ಮುಂದಾದ ಬಿಬಿಎಂಪಿ

dangerous trees : ಅಪಾಯಕಾರಿ ಮರಗಳ ತೆರವಿಗೆ ಮುಂದಾದ ಬಿಬಿಎಂಪಿ

- Advertisement -

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ನಲುಗಿ ಹೋಗಿದೆ. ಮಳೆ ಜೊತೆ ಜೊತೆಗೆ ಧರೆಗೆ ಉರುಳುತ್ತಿರುವ ಮರಗಳು ಬಿಬಿಎಂಪಿ (BBMP) ಪಾಲಿಗೆ ಮತ್ತು ದೊಡ್ಡ ತಲೆನೋವಾಗಿದೆ. ಹೀಗಾಗಿ ಈ ಮರಗಳ ಕಾಟಕ್ಕೆ (dangerous trees) ಅಂತ್ಯಹಾಡಲು ಬಿಬಿಎಂಪಿ ಸಜ್ಜಾಗಿದೆ.

ಹೌದು, ಬೇಸಿಗೆ ಮಳೆಗೆ ಉದ್ಯಾನನಗರಿ ಅಧ್ವಾನ ನಗರಿಯಾಗಿ ಬದಲಾಗಿದೆ. ಸಂಜೆಯಾಗುತ್ತಿದ್ದಂತೆ ಸುರಿಯುವ ಮಳೆ ಮರಗಳನ್ನು ರಸ್ತೆಗಳ ಮೇಲೆ ಮಲಗುವಂತೆ ಮಾಡ್ತಿದೆ. ಇದರಿಂದ ಜನರ ಸಂಕಷ್ಟಕ್ಕೆ ತುತ್ತಾಗಿ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹೀಗಾಗಿ ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳಿಗೆ ಕೊಡಲಿ ಏಟು ಹಾಕಲು ಬಿಬಿಎಂಪಿ ನಿರ್ಧರಿಸಿದೆ.

ಮಳೆಗೆ ಸತತವಾಗಿ ಧರೆಗೆ ಉರುಳುತ್ತಿರುವ ಬೃಹತ್ ಮರಗಳು ವಾಹನ ಸವಾರರಿಗೆ ಆತಂಕವನ್ನುಂಟುಮಾಡಿದೆ. ಹೀಗಾಗಿ ಬಿಬಿಎಂಪಿ ಟ್ರೀ ಸೆನ್ಸಸ್ ಮುಗಿದ ಬೆನ್ನಲ್ಲೇ 50 ವರ್ಷ ಹಳೆಯ ಮರಗಳಿಗೆ ಕೊಡಲಿ ಏಟು ಹಾಕಲು ಬಿಬಿಎಂಪಿ ಯೋಜನೆ ಸಿದ್ಧಪಡಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜೊತೆ ಸಭೆ ನಡೆಸಿದ ಬಿಬಿಎಂಪಿ ಸಲಹೆ ಪಡೆದು ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವು ಮಾಡಲಿದೆ.

ಬೆಂಗಳೂರಿನಲ್ಲಿರುವ 50 ವರ್ಷ ಮೇಲಟ್ಟ ಮರಗಳು ಅಪಾಯದ ಸ್ಥಿತಿಯಲ್ಲಿದ್ದು, ರಸ್ತೆ ಬದಿಯಲ್ಲಿರುವ 50 ವರ್ಷಗಳ ಮೇಲ್ಪಟ್ಟ ಎಲ್ಲಾ ಮರಗಳನ್ನು ಕಟಾವು ಮಾಡಿ ಮಳೆಯಲ್ಲೂ ವಾಹನ ಸವಾರ ರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ನಿರ್ಧರಿಸಿದೆ. ಈಗಾಗಲೇ ನಗರದ ಎಂಟು ವಲಯಗಳಲ್ಲೂ ಟೊಳ್ಳು ಮರಗಳು, ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಹಾಗೂ ೫೦ ವರ್ಷ ಮೀರಿದ ಮರಗಳನ್ನು ಗುರುತಿಸಲು ಪಾಲಿಗೆ ಮರಗಳ ಸೆನೆಕ್ಸ್ ನಡೆಸುತ್ತಿದೆ. ಮಾತ್ರವಲ್ಲ ಈಗಾಗಲೇ ನಗರದ ಹಲವು ವಲಯದಲ್ಲಿ ಈ ಸೆನೆಕ್ಸ್ ಕೂಡ ಪೂರ್ಣಗೊಂಡಿದೆ.

ಈ ವರದಿಯನ್ನು ಆಧರಿಸಿ ಮಳೆಗಾಲಕ್ಕೂ ಮುನ್ನ ಮರಗಳನ್ನು ಕಟಾವು ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಸಂಪೂರ್ಣ ಮರಗಳ ಸೆನೆಕ್ಸ್ ವರದಿ ಕೈ ಸೇರಿದ ಬಳಿಕ ಬಿಬಿಎಂಪಿ ನಗರದಲ್ಲಿ ಒಟ್ಟು ಎಷ್ಟು ಮರಗಳನ್ನು ತೆರವುಗೊಳಿಸಲಿದೆ ಎಂಬ ಅಂಕಿಅಂಶ ಲಭ್ಯವಾಗಲಿದೆ. ಕೆಲದಿನಗಳ ಹಿಂದೆಯಷ್ಟೇ ನಗರದ ಮಕ್ಕಳಕೂಟ ಬಳಿ ಚಲಿಸುತ್ತಿದ್ದ ಬಸ್ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು ಮರಗಳನ್ನು ತೆರವುಗೊಳಿಸಲು ಸಿದ್ಧವಾಗಿದೆ. ಅದರೆ ಬಿಬಿಎಂಪಿ ಈ ನಿರ್ಧಾರಕ್ಕೆ ಪರಿಸರವಾದಿಗಳ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಈ ವರ್ಷವೂ ನಷ್ಟದಲ್ಲಿ ಬಿಎಂಆರ್ ಸಿಎಲ್ : ನಮ್ಮ‌ಮೆಟ್ರೋಗೆ ಪ್ರಯಾಣಿಕರದ್ದೇ ಕೊರತೆ

ಇದನ್ನೂ ಓದಿ : Cubbon Park : ಶ್ವಾನ ಪ್ರಿಯರಿಗೆ ಕಾದಿದೆ ಶಾಕ್ : ಇನ್ಮುಂದೇ ಡಾಗ್ ಗಳಿಗೆ ಸಿಗಲ್ಲ ಕಬ್ಬನ್ ಪಾರ್ಕ್ ಎಂಟ್ರಿ

BBMP leading to the clearance of dangerous trees

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular