ಸೋಮವಾರ, ಏಪ್ರಿಲ್ 28, 2025
HomekarnatakaBengaluru Roads : ಬೆಂಗಳೂರಿನ ರಸ್ತೆಗಳು ಓಡಾಟಕ್ಕೆ ಯೋಗ್ಯವಲ್ಲ: ಸಲ್ಲಿಕೆಯಾಯ್ತು ಸಿಎಜಿ ವರದಿ

Bengaluru Roads : ಬೆಂಗಳೂರಿನ ರಸ್ತೆಗಳು ಓಡಾಟಕ್ಕೆ ಯೋಗ್ಯವಲ್ಲ: ಸಲ್ಲಿಕೆಯಾಯ್ತು ಸಿಎಜಿ ವರದಿ

- Advertisement -

ಬೆಂಗಳೂರು : ಒಂದೆಡೆ ನಗರದ ಗುಂಡಿಯುಕ್ತ ರಸ್ತೆಗಳು ಜನರನ್ನು ಸಾಲು ಸಾಲಾಗಿ ಬಲಿ ಪಡೆದುಕೊಳ್ಳುತ್ತಿದೆ. ರಸ್ತೆ ಮಧ್ಯೆ ಗುಂಡಿಯೋ ಗುಂಡಿ ಮಧ್ಯೆ ರಸ್ತೆಯೋ (Bengaluru Roads ಎಂಬುದು ಅರಿವಾಗದ ಸ್ಥಿತಿಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ‌. ಈ‌ ಮಧ್ಯೆ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಮುಜುಗರವಾಗುವಂತಹ ವಿಚಾರವೊಂದು ಬಹಿರಂಗವಾಗಿದೆ. ವರದಿಯೊಂದು ಸಿಲಿಕಾನ್ ಸಿಟಿ ರಸ್ತೆಗಳು ಸಂಚಾರಕ್ಕೆ ಯೋಗ್ಯವಲ್ಲ ಎಂದಿದೆ.

ಹೌದು ಸಿಲಿಕಾನ್ ಸಿಟಿ ಬೆಂಗಳೂರು ನಗರದ ರಸ್ತೆಗಳು ಸಂಚಾರ ಮಾಡಲು ಯೋಗ್ಯ ಅಲ್ಲ ಎಂದು ಮಹಾಲೇಖಪಾಲರ(ಸಿಎಜಿ) ವರದಿ ಹೇಳಿದೆ. ವಿಧಾನಸಭೆಯಲ್ಲಿ ಮಂಡನೆಯಾದ ವರದಿಯಲ್ಲೇ ಈ ಅಂಶ ಬಹಿರಂಗಗೊಂಡಿದೆ. ವಿಧಾನಸಭೆಯಲ್ಲಿ ಇವತ್ತು ರಸ್ತೆ ಸುರಕ್ಷತಾ ವಿಚಾರಗಳಿಗೆ ಸಂಬಂಧಿಸಿದ ಸಿಎಜಿ ವರದಿ ಮಂಡನೆ ಮಾಡಲಾಗಿದ್ದು ಈ ವರದಿ ಬೆಂಗಳೂರಿನ ರಸ್ತೆಗಳ ಅಸಲಿ ಸತ್ಯವನ್ನು ಬಿಚ್ಚಿಟ್ಟಿದೆ. ಬೆಂಗಳೂರಿನ ರಸ್ತೆಗಳು ಕೆಟ್ಟ ನಿರ್ವಹಣೆ ಮತ್ತು ರಸ್ತೆಯಲ್ಲಿನ ಅಪಾಯದ ಗುಂಡಿಗಳಿಂದ ರಸ್ತೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

ರಾಜಧಾನಿಯ ರಸ್ತೆಯಲ್ಲಿ ರಾಜ್ಯದೆಲ್ಲೆಡೆ ಹೆಚ್ಚಿನ ಸಂಖ್ಯೆಯ ವಾಹನಗಳು ತಮ್ಮ ನೋಂದಣಿ ಪ್ರಮಾಣಪತ್ರ ಅಥವಾ ಅರ್ಹತಾ ಪ್ರಮಾಣಪತ್ರಗಳನ್ನು ನವೀಕರಿಸದೇ ರಸ್ತೆಗಳಲ್ಲಿ ಸಂಚರಿಸುತ್ತಿವೆ. 22 ಜಿಲ್ಲೆಗಳಲ್ಲಿ ಆಘಾತ ಆರೈಕೆ ಕೇಂದ್ರಗಳನ್ನು (ಟಿಸಿಸಿ) ಸ್ಥಾಪಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿಲ್ಲ ಎಂದು ವರದಿ‌ ಹೇಳಿದೆ. ಇನ್ನು ಸಲ್ಲಿಕೆಯಾದ ವರದಿಯಲ್ಲೇನಿದೆ ಅನ್ನೋದನ್ನು ಗಮನಿಸೋದಾದರೇ, ರಸ್ತೆ ವಿಸ್ತರಣೆಗಳ ಅತಿಕ್ರಮಣವೂ ಸೇರಿದಂತೆ ವಿವಿಧ ರೀತಿಯಲ್ಲಿ ನಗರದ ರಸ್ತೆ ಅಪಾಯದಲ್ಲಿವೆ. ಅದರಲ್ಲೂ ವಿವಿಧ ಕಾಮಗಾರಿಗಳ ನೆಪದಲ್ಲಿ ರಸ್ತೆಗಳನ್ನು ದುರವಸ್ಥೆಗೆ ತಳ್ಳಲಾಗಿದ್ದು ಇದರಿಂದ ಬಿಬಿಎಂಪಿ ರಸ್ತೆಗಳಲ್ಲಿ ಹೆಚ್ಚಿನ ಅಪಾಯಗಳು ಎದುರಾಗುತ್ತಿವೆ ಎಂದು ವರದಿ ಹೇಳಿದೆ.

Bengaluru Roads ಸರಿಪಡಿಸಲು ವರದಿಯ ಕೆಲ ಶಿಫಾರಸ್ಸುಗಳು :

  • ಯಾವುದೇ ವಿಳಂಬವಿಲ್ಲದೆ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕಾಯ್ದೆ-2017 ರ ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸಬೇಕು.
  • ಎಲ್ಲಾ ರಸ್ತೆ ಬಳಕೆದಾರರಿಗಾಗಿ ವಿವಿಧ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಬೇಕು.
  • ಅಪಘಾತಕ್ಕೊಳಗಾದವರು ಗೋಲ್ಡನ್ ಅವರ್ ನಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ತಜ್ಞರನ್ನೊಳಗೊಂಡಂತೆ ಅಪಘಾತ ಆರೈಕೆ ಕೇಂದ್ರಗಳನ್ನು ಸ್ಥಾಪಿಸಬೇಕು.
  • ರಸ್ತೆ ಬಳಕೆದಾರರ ಅಗತ್ಯತೆಗಳನ್ನು ಪೂರೈಸಲು ಹೆದ್ದಾರಿ ಗಸ್ತು ವ್ಯವಸ್ಥೆಯನ್ನು ಬಲಪಡಿಸಬೇಕು.
  • ಅಪಘಾತಗಳಾದಾಗಾ ಗಾಯಾಳುಗಳ ನೆರವಿಗೆ ಬರಲು ಅಂಬುಲೆನ್ಸ್ ಗಳನ್ನು ಸುಸ್ಥಿತಿಯಲ್ಲಿಡಬೇಕು. ಅಂಬುಲೆನ್ಸ್ ಗಳ ಸಂಖ್ಯೆ ಹೆಚ್ಚಿಸಬೇಕು.

ಇವಿಷ್ಟು ಶಿಫಾರಸ್ಸುಗಳು ಸಲ್ಲಿಕೆಯಾಗಿದ್ದು, ಇನ್ನಾದರೂ ಬೆಂಗಳೂರಿನ ರಸ್ತೆ ಗುಂಡಿ ಗಳಿಗೆ ಮುಕ್ತಿ ಸಿಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ :  ವೈಟ್ ಟ್ಯಾಪಿಂಗ್ ಎಫೆಕ್ಟ್: ಸೋಮವಾರದಿಂದ ಸಂಪಿಗೆ ರಸ್ತೆಯಲ್ಲಿ ಏಕಮುಖ ಸಂಚಾರ

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಗೆ ಅನುದಾನ ಕಟ್ : ಬಡವರ ಊಟಕ್ಕೂ ಕಲ್ಲು ಹಾಕಿದ ಸರ್ಕಾರ

( Bengaluru Roads are not good for traffic, reports CAG )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular