ಬಿಎಂಟಿಸಿಯಲ್ಲಿ ಧರ್ಮದಂಗಲ್ : ತಾರಕಕ್ಕೇರಿದ ಟೊಪ್ಪಿ ವರ್ಸಸ್ ಕೇಸರಿ ಶಾಲು

ಬೆಂಗಳೂರು : ರಾಜ್ಯದ ಶಾಲಾ ಕಾಲೇಜುಗಳಲ್ಲಿ ಆರಂಭವಾದ ಹಿಜಾಬ್ ಹಾಗೂ ಕೇಸರಿ ಧರ್ಮ ದಂಗಲ್ (BMTC Dharma Dangal Controversy)ಬಳಿಕ ಹಲಾಲ ಹಾಗೂ ಜಟ್ಕಾ ಕಟ್ ಮೂಲಕ ಮಾರುಕಟ್ಟೆಗೂ ಹರಡಿತು. ಇದಾದ ಬಳಿಕ ಚಿನ್ನದ ಮಾರುಕಟ್ಟೆಗೂ ಧರ್ಮ ದಂಗಲ್ ಕಾಲಿರಿಸಿತ್ತು. ಇದೀಗ ಈ ದಂಗಲ್ ಸರ್ಕಾರಿ ಸಂಸ್ಥೆ ಸಾರಿಗೆ ಇಲಾಖೆಗೂ ಕಾಲಿರಿಸಿದ್ದು, ಬಿಎಂಟಿಸಿ ನೌಕರರು ಈಗ ಧರ್ಮದಂಗಲ್ ಗೆ ಮುಂದಾಗಿದ್ದಾರೆ.

ಹೌದು, ರಾಜ್ಯದಲ್ಲಿ ಹಿಜಾಬ್, ಅಜಾನ್, ಮಂದಿರ V/s ಮಸೀದಿ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ಧರ್ಮ ದಂಗಲ್ ಶುರುವಾಗಿದೆ. ಬಿಎಂಟಿಸಿ ಸಾರಿಗೆ ನಿಗಮ ನೌಕರರು ಸಮವಸ್ತ್ರ ನೀತಿ ಉಲ್ಲಂಘಿಸಿ ಮುಸ್ಲಿಂ ನೌಕರರು ಟೋಪಿ, ಹಿಂದೂ ನೌಕರರು ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಹೌದು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿವಾದದ ಬೆನ್ನಲ್ಲೇ ಬಿಎಂಟಿಸಿಯಲ್ಲೂ ಟೋಪಿ v/s ಕೇಸರಿ ಶಾಲು ವಿವಾದ ಭುಗಿಲೆದ್ದಿದೆ.

ಕೆಲ ಬಿಎಂಟಿಸಿ ನೌಕರರು ಕಳೆದ ಹಲವು ದಿನಗಳಿಂದ ಕೇಸರಿ ಶಾಲು ಮತ್ತು ಟೋಪಿ ಹಾಕಿಕೊಂಡು ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿಚಾರಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಬಿಎಂಟಿಸಿಯಲ್ಲಿ ಎಲ್ಲಾ ಧರ್ಮದ ಚಾಲಕರು, ನಿರ್ವಾಹಕರು ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರಿ ನಿಯಮದ ಪ್ರಕಾರ, ಪೊಲೀಸ್ ಹಾಗೂ ಸಾರಿಗೆ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ನೌಕರರು ಸಮವಸ್ತ್ರವಿರಲಿ ಅಥವಾ ಇರದೇ ಇರಲಿ ಯಾವುದೇ ಧರ್ಮ ಪ್ರಚೋದಕವಾದ ವಸ್ತ್ರಗಳನ್ನು ಬಳಸುವಂತಿಲ್ಲ. ಆದರೆ ಸಾರಿಗೆ ಇಲಾಖೆಯಲ್ಲಿ ಹಲವರು ತಮ್ಮ ಸಮವಸ್ತ್ರದ ಜೊತೆಯಲ್ಲಿ ಮುಸ್ಲಿಂ‌ಸಮುದಾಯದವರು ಧರಿಸುವ ಟೊಪ್ಪಿಯನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ‌

ಇದನ್ನು ಗಮನಿಸಿದ ಹಲವು ಹಿಂದೂ ಧರ್ಮದ ವಾಹನ‌ ಚಾಲಕರು ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ‌. ನಾವು ಬಹುಸಂಖ್ಯಾತರಾಗಿ ಡಿಪೋಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಎಂದೂ ಧರ್ಮ ಸೂಚಕಗಳನ್ನು ಕರ್ತವ್ಯದ ವೇಳೆಯಲ್ಲಿ ಬಳಸಿರಲಿಲ್ಲ. ಆದರೆ ಮುಸ್ಲಿಂ ಉದ್ಯೋಗಿಗಳು ಟೊಪ್ಪಿ ಧರಿಸಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

ಸಮವಸ್ತ್ರ ನಿಯಮವನ್ನು ಪಾಲಿಸುತ್ತಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ಕೇಸರಿ ಶಾಲು ಬಳಸುತ್ತಿದ್ದೇವೆ. ಅವರು ನಿಯಮವನ್ನು ಪಾಲಿಸುವವರೆಗೂ ನಾವು ನಿಯಮವನ್ನು ಪಾಲಿಸುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಹಿಂದೂ ಚಾಲಕ- ನಿರ್ವಾಹಕರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಧರ್ಮದಂಗಲ್ ಮುಗಿಯುವ ಲಕ್ಷಣವಿಲ್ಲ.

ಇದನ್ನೂ ಓದಿ : Namma Metro : ತಮಿಳುನಾಡು – ಕರ್ನಾಟಕ ಗಡಿ ಭಾಗದಲ್ಲಿ ಓಡಾಡಲಿದೆ ನಮ್ಮ ಮೆಟ್ರೋ

ಇದನ್ನೂ ಓದಿ : Illegal Buildings : ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷ ಅಕ್ರಮ ಕಟ್ಟಡ ಪತ್ತೆ

BMTC Dharma Dangal Controversy

Comments are closed.